ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆ ಕಸರತ್ತು ಮುಕ್ತಾಯ

ಇಂದು ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ: ಹಿಂಪಡೆಯಲು ಎರಡು ದಿನಗಳ ಕಾಲಾವಕಾಶ
Last Updated 25 ಏಪ್ರಿಲ್ 2018, 12:36 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಒಟ್ಟು 36 ಅಭ್ಯರ್ಥಿಗಳಿಂದ 39 ನಾಮಪತ್ರಗಳು ಸಲ್ಲಿಕೆಯಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಒಟ್ಟಾರೆ 65 ಅಭ್ಯರ್ಥಿಗಳಿಂದ 86 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಂಗಳವಾರ -ರಾಮನಗರ ವಿಧಾನಸಭಾ ವ್ಯಾಪ್ತಿಯಲ್ಲಿ 8 ಅಭ್ಯರ್ಥಿಗಳು 8 ನಾಮಪತ್ರಗಳನ್ನು ಸಲ್ಲಿಸಿದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು 11 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10 ಮಂದಿ ಅಭ್ಯರ್ಥಿಗಳು 11 ನಾಮಪತ್ರಗಳನ್ನು ಸಲ್ಲಿಸಿದರೆ, -ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು 9 ನಾಮಪತ್ರಗಳನ್ನುಸಲ್ಲಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿಗಳು ಕಡೆಯ ದಿನದಂದು ನಾಮಪತ್ರ ಸಲ್ಲಿಕೆಗೆ ಉತ್ಸಾಹ ತೋರಿದರು. ಬೆಳಿಗ್ಗೆ 11ರಿಂದಲೇ ಚುನಾವಣಾ ಕಚೇರಿಯತ್ತ ಅಭ್ಯರ್ಥಿಗಳ ದಂಡು ಹರಿದು ಬಂದಿತು.

ಕೆಲವರು ಏಕಾಂಗಿಯಾಗಿ ಬಂದು ನಾಮಪತ್ರ ಹಾಕಿ ವಾಪಸ್‌ ಆದರೆ, ಇನ್ನೂ ಕೆಲವರು ಗೆಳೆಯರ ಗುಂಪಿನೊಂದಿಗೆ ಬಂದು ಉಮೇದುವಾರಿಕೆ ಸಲ್ಲಿಸಿ ಹೋದರು.

ಈ ಎಲ್ಲ ನಾಮಪತ್ರಗಳ ಪರಿಶೀಲನೆ ಕಾರ್ಯವು ಬುಧವಾರ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಇದೇ 27 ಕಡೆಯ ದಿನವಾಗಿದೆ.

ಮಂಗಳವಾರ ಸಲ್ಲಿಕೆಯಾದ ನಾಮಪತ್ರಗಳ ವಿವರ: ರಾಮನಗರ: ಪಕ್ಷೇತರ ಅಭ್ಯರ್ಥಿಗಳಾಗಿ ಟಿ.ಎಸ್. ಕುಮಾರ್, ಎಸ್. ಸಿದ್ದಮಾರಯ್ಯ, ಬಿ.ಪಿ. ಸುರೇಂದ್ರ, ಜೆ.ಟಿ ಪ್ರಕಾಶ್, ಜೆ.ಪಿ. ಶಂಕರೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಲೀಲಾ, ಎ.ಐ.ಎಂ.ಇ.ಪಿ ಅಭ್ಯರ್ಥಿಯಾಗಿ ಮೀನಾ ನಾಗರಾಜ್ ಹಾಗೂ ಎ.ಎಸ್.ಪಿ ಅಭ್ಯರ್ಥಿಯಾಗಿ ಬಿ.ಕೆ. ಬೈರಲಿಂಗಯ್ಯ ತಲಾ ಒಂದು ನಾಮಪತ್ರವನ್ನುಸಲ್ಲಿಸಿದ್ದಾರೆ.

ಚನ್ನಪಟ್ಟಣ: ಆಲ್ ಇಂಡಿಯಾ ಹಿಂದೂಸ್ತಾನಿ ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಯಾಗಿ ಎಂ.ಸಿ.ವಿ ಮೂರ್ತಿ, ಅಂಬೇಡ್ಕರ್ ಪೀಪಲ್ ಪಾರ್ಟಿ ಅಭ್ಯರ್ಥಿಯಾಗಿ ಕೆ.ಎಂ. ಸಿದ್ದರಾಜು, ಕರ್ನಾಟಕ ಪ್ರಜ್ಞಾವಂತ ಪಕ್ಷದ ಅಭ್ಯರ್ಥಿಯಾಗಿ ಅಕ್ರಮ್ ಆಲಿ ಖಾನ್, ರಾಷ್ಟ್ರೀಯ ಮಾನವ ವಿಕಾಸ ಪಕ್ಷದ ಅಭ್ಯರ್ಥಿಯಾಗಿ ಕೆ.ವಿ. ಮನು, ಸಾಮಾನ್ಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಕೆ.ಪಿ. ಶಿಲ್ಪ, ಅಂಬೇಡ್ಕರ್ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಪಿ. ಅಶ್ವಥ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಎ. ಕೃಷ್ಣ, ರತ್ನಮ್ಮ, ಈಶ್ವರ್, ಆರ್. ನವ್ಯಶ್ರೀ ನಾಮಪತ್ರ ಸಲ್ಲಿಸಿದ್ದಾರೆ.

ಕನಕಪುರ: ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್. ನಂದಿನಿ, ರಾಷ್ಟ್ರೀಯ ಮಾನವ ವಿಕಾಸ ಪಕ್ಷದ ಅಭ್ಯರ್ಥಿಯಾಗಿ ಎನ್. ಅರುಣ್ ಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ರಾಜ್‍ ಗೋಪಾಲ್, ಕೆ.ವಿ. ವಿಶ್ವನಾಥ್, ಟಿ. ನಾರಾಯಣ, ಜಿ. ಮಹದೇವಯ್ಯ ಹಾಗೂ ಅಂಬೇಡ್ಕರ್ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿ ಬಿ.ಎಸ್. ಮಹೇಶ್ ನಾಮಪತ್ರಗಳನ್ನು
ಸಲ್ಲಿಸಿದ್ದಾರೆ.

ಮಾಗಡಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಚ್.ಎನ್. ಶಿವಲಿಂಗಯ್ಯ, ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿಯ ಅಭ್ಯರ್ಥಿಯಾಗಿ ಕೆ.ವಿ. ನಾಗಾನಂದ, ಸಮಾಜವಾದಿ ಪಾರ್ಟಿಯ ಅಭ್ಯರ್ಥಿಯಾಗಿ ಡಿ. ಶಿವಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಬಿ. ಮುರುಳಿ, ಎಚ್. ನರಸಿಂಹ ಮೂರ್ತಿ, ಎಂ. ಪ್ರಶಾಂತ್, ಎಂ.ಜಿ. ಜಯಾನಂದ ಸ್ವಾಮಿ, ನವೀನ್ ಕುಮಾರ್ ಹಾಗೂ ಆಲ್ ಇಂಡಿಯಾ ಮಹಿಳಾ ಎಂಪವರ್‍ ಮೆಂಟ್‌ ಪಾರ್ಟಿಯ ಅಭ್ಯರ್ಥಿಯಾಗಿ ಡಿ.ಎಂ. ಮಾದೇಗೌಡ ನಾಮಪತ್ರ ಸಲ್ಲಿಸಿದರು.

ಜನತಾದಳದ ಅಭ್ಯರ್ಥಿಯಾಗಿ ಎ. ಮಂಜುನಾಥ್ ಮತ್ತೆ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಚಾರ ಕಾರ್ಯ ಚುರುಕು

ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.ದೊಡ್ಡ ಸಮಾವೇಶಗಳು, ಸಭೆಗಳ ಆಯೋಜನೆಯ ಬದಲಿಗೆ ಹಳ್ಳಿಗಳಿಗೆ ತೆರಳಿ ಮನೆಮನೆ ಪ್ರಚಾರಕ್ಕೆ ಒತ್ತು ನೀಡುತ್ತಿದ್ದಾರೆ. ಇದೀಗ ಪಕ್ಷೇತರ ಅಭ್ಯರ್ಥಿಗಳು ಅವರ ಜೊತೆಗೆ ಕಣಕ್ಕೆ ಇಳಿದಿದ್ದಾರೆ.

ಗಮನ ಸೆಳೆದ ಅಭ್ಯರ್ಥಿಗಳು
ಮಂಗಳವಾರ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಹಲವು ವಿಶೇಷ ವ್ಯಕ್ತಿಗಳೂ ಇದ್ದು, ಗಮನ ಸೆಳೆದರು. ಅಂಗವಿಕಲ ಕ್ರೀಡಾಪಟು ಶಿಲ್ಪಶ್ರೀ ಗೌಡ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಅಂತರರಾಷ್ಟ್ರೀಯ ವೀಲ್‌ಚೇರ್‌ ಟೆನಿಸ್‌ ಆಟಗಾರ್ತಿಯಾಗಿರುವ ಶಿಲ್ಪಶ್ರೀ 2010ರಿಂದ ಟೆನಿಸ್ ಆಡಲು ಆರಂಭಿಸಿದ್ದು ವಿವಿಧ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ.

ದೇಹಾಕಾರದಲ್ಲಿ ಕುಬ್ಜರಾಗಿರುವ ಕಗ್ಗಲಹಳ್ಳಿ ನಿವಾಸಿ ಸಿದ್ದಮಾರಯ್ಯ ರಾಮನಗರದಿಂದ ಸ್ಪರ್ಧೆ ಬಯಸಿ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭ ಗೆಳೆಯರು ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT