ಸಾಗರ

ಶಿಕ್ಷಕರಿಗೆ ವೇತನ ನೀಡಲು ಒತ್ತಾಯ

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ವೇತನ ನೀಡಲು ಒತ್ತಾಯಿಸಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಸಾಗರ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ವೇತನ ನೀಡಲು ಒತ್ತಾಯಿಸಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

 ಎರಡು ತಿಂಗಳಿನಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಶಿಕ್ಷಕರಿಗೆ, ಬಿಆರ್‌ಸಿ, ಸಿಆರ್‌ಸಿಗಳಿಗೆ ವೇತನ ದೊರಕಿಲ್ಲ. ಈ ಬಗ್ಗೆ ವಿಚಾರಿಸಿದರೆ ಶಿಕ್ಷಕರಿಗೆ ವೇತನ ನೀಡಲು ಅಗತ್ಯವಿರುವ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಗಣಪತಪ್ಪ ಮಾತನಾಡಿ, ಬೇಸಿಗೆ ರಜೆಯ ಈ ಸಂದರ್ಭದಲ್ಲಿ ಹಲವು ಶಿಕ್ಷಕರ ಕುಟುಂಬಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಅವರಿಗೆ ವೇತನ ದೊರಕದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಈ ಭಾಗದ 200ಕ್ಕೂ ಹೆಚ್ಚು ಶಿಕ್ಷಕರು ಕಳೆದ ಎರಡು ತಿಂಗಳಿಂದ ಪ್ರತಿದಿನ  ಬ್ಯಾಂಕ್ ಖಾತೆಗೆ ವೇತನ ಪಾವತಿಯಾಗಿದೆಯಾ ಎಂದು ವಿಚಾರಿಸುವುದೇ ಆಗಿದೆ. ಕೆಲವು ಶಿಕ್ಷಕರಿಗೆ ಚುನಾವಣೆ ಕರ್ತವ್ಯ ಇರುವುದರಿಂದ ಬೇಸಿಗೆ ರಜೆ ಕೂಡ ದೊರಕುತ್ತಿಲ್ಲ. ಶಿಕ್ಷಣ ಇಲಾಖೆ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಚ್.ತಿಮ್ಮಪ್ಪ, ಕಾರ್ಯದರ್ಶಿ ಡಿ.ಕೆ.ಮೋಳೆ, ಶಾರದಾ, ಎಂ.ವೈ.ಮೂರ್ತಿ, ಗವಿಯಪ್ಪ, ಲಕ್ಷ್ಮಣ್ ನಾಯಕ್, ಗಣಪತಿ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ತೀರ್ಥಹಳ್ಳಿಗೆ ಬೇಕಿದೆ ಸುಸಜ್ಜಿತ ಕ್ರೀಡಾಂಗಣ

ತೀರ್ಥಹಳ್ಳಿ
ತೀರ್ಥಹಳ್ಳಿಗೆ ಬೇಕಿದೆ ಸುಸಜ್ಜಿತ ಕ್ರೀಡಾಂಗಣ

26 May, 2018
ಕೊನೆಗೂ ದಕ್ಕಿತು ‘ಕನ್ನಡ ಭಾರತಿ’ಗೆ ಸ್ವಂತ ಕಟ್ಟಡ

ಶಿವಮೊಗ್ಗ
ಕೊನೆಗೂ ದಕ್ಕಿತು ‘ಕನ್ನಡ ಭಾರತಿ’ಗೆ ಸ್ವಂತ ಕಟ್ಟಡ

26 May, 2018

ಭದ್ರಾವತಿ
‘ಮಠಾಧೀಶರ ವಿರುದ್ಧ ಅವಹೇಳನ ಸಲ್ಲ’

‘ಜನರ ಭಾವನೆಗಳಿಗೆ ನೋವುಂಟು ಮಾಡುವ ರೀತಿ ಯಲ್ಲಿ ಮಠಾಧೀಶರು, ಮಠಗಳ ವಿರುದ್ಧ ಅವಹೇಳನಕಾರಿ ಮಾತುಗಳ ನ್ನಾಡುವುದು ಸಲ್ಲದು’ ಎಂದು ವೀರಶೈವ ಸಮಾಜದ ವಿವಿಧ ಸಂಘಟನೆಗಳ...

26 May, 2018
ಅಂಚೆ ಜಿಡಿಎಸ್‌ ನೌಕರರ ಮುಷ್ಕರ ಮೂರನೇ ದಿನಕ್ಕೆ

ಆನವಟ್ಟಿ
ಅಂಚೆ ಜಿಡಿಎಸ್‌ ನೌಕರರ ಮುಷ್ಕರ ಮೂರನೇ ದಿನಕ್ಕೆ

25 May, 2018

ಶಿವಮೊಗ್ಗ
ನಿಫಾ ವೈರಾಣು ವಿರುದ್ಧ ಮುನ್ನೆಚ್ಚರಿಕೆ ಅಸ್ತ್ರ

ಬಾವಲಿಗಳ ಮೂಲಕ ಹರಡುವ ನಿಫಾ ವೈರಾಣು ಜಿಲ್ಲೆಯಲ್ಲಿ ವ್ಯಾಪಿಸದಂತೆ ತುರ್ತು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ವಿವಿಧ ಇಲಾಖೆಗಳ...

25 May, 2018