ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಆರ್‌. ಕೃತಿ ಓದಿ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜಿ.ಕೆ. ಗೋವಿಂದರಾಯರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವಾಗ ಅಲ್ಲಮಪ್ರಭುವಿನ ವಚನವೊಂದನ್ನು ನಾನು ಉಲ್ಲೇಖ ಮಾಡಿದ್ದೆ. ‘ಇಂತೀ ಮೂವರಿಗೆ ಹುಟ್ಟಿದ ಸೂಳೆಯಮಗನ ನಾನೇನೆಂದು ಪೂಜೆಯ ಮಾಡಲಿ’ ಎಂದು ಅಲ್ಲಮನ ವಚನ ಎಂದಿದ್ದೆ. ಇದು ತಪ್ಪು ಉಲ್ಲೇಖ; ಮೂಲದಲ್ಲಿ ‘ಸೂಳೆಯ ಮಗ’ ಎಂಬ ಪದವಿಲ್ಲ ಎಂದು ಟಿ.ಎನ್. ವಾಸುದೇವ ಮೂರ್ತಿ ಬರೆದಿದ್ದಾರೆ (ವಾ.ವಾ., ಏ. 23).

ಅವರು, ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಎನ್ನುವ ಡಿ.ಆರ್. ನಾಗರಾಜ್ ಬರೆದ ಪುಸ್ತಕದ 185ನೇ ಪುಟವನ್ನು ನೋಡಬೇಕಾಗಿ ವಿನಂತಿಸುವೆ. ಅಲ್ಲಿ, ‘ಸೃಷ್ಟಿಯ ಮೇಲಣ ಕಣಿಯತಂದು...’ ಎಂದು ಪ್ರಾರಂಭವಾಗುವ ಆ ವಚನದ ಪೂರ್ಣ ಉಲ್ಲೇಖವಿದೆ. ಅದರಲ್ಲಿ ನಾನು ಉಲ್ಲೇಖ ಮಾಡಿದ ಪದವೂ ಇದೆ. ಉಳಿದಂತೆ ವ್ಯಾಖ್ಯಾನಕ್ಕೆ ಇದು ಸ್ಥಳವಲ್ಲ.

ಲಕ್ಷ್ಮೀಶ ತೋಳ್ಪಾಡಿ, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT