‘ಸೆಪ್ಟೆಂಬರ್ ತ್ರೈಮಾಸಿಕದ ₹ 1,930 ಕೋಟಿ ಲಾಭಕ್ಕೆ ಹೋಲಿಸಿದರೆ, ಮಾರ್ಚ್ ತ್ರೈಮಾಸಿಕದಲ್ಲಿನ ಲಾಭದ ಕುಸಿತವು ಶೇ 7ರಷ್ಟಿದೆ’ ಎಂದು ಸಂಸ್ಥೆಯ ಸಿಇಒ ಅಬಿದಾಲಿ ನೀಮೂಚವಾಲಾ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ತ್ರೈಮಾಸಿಕದಲ್ಲಿನ ಒಟ್ಟು ವರಮಾನವು ₹ 14,304 ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 15,045 ಕೋಟಿಗೆ ಹೋಲಿಸಿದರೆ ಶೇ 5ರಷ್ಟು ಕಡಿಮೆಯಾಗಿದೆ. ಹಣಕಾಸು ವರ್ಷದ ಒಟ್ಟಾರೆ ವರಮಾನವು ₹ 57,035 ಕೋಟಿಗಳಿಗೆ ತಲುಪಿ ಶೇ 1.7ರಷ್ಟು ಕುಸಿತ ಕಂಡಿದೆ. ಸಂಸ್ಥೆಯ ವರಮಾನದಲ್ಲಿ ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ ಕ್ಷೇತ್ರಗಳ ಕೊಡುಗೆ ಗರಿಷ್ಠ ಮಟ್ಟದಲ್ಲಿ (ಶೇ 29) ಇದೆ.