ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

252 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳು: 27 ತಿರಸ್ಕೃತ
Last Updated 26 ಏಪ್ರಿಲ್ 2018, 7:38 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳ ಪೈಕಿ 27 ಜನರ ನಾಮಪತ್ರಗಳು ಬುಧವಾರ ತಿರಸ್ಕೃತಗೊಂಡಿವೆ. 252 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿವೆ. ನಾಮಪತ್ರ ವಾಪಸ್ ಪಡೆಯಲು ಇದೇ ತಿಂಗಳ 27ರವರೆಗೆ ಸಮಯಾವಕಾಶವಿದ್ದು, ಆ ನಂತರವೇ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ನಿಖರ ಸಂಖ್ಯೆ ದೊರೆಯಲಿದೆ.

ನಾಮಪತ್ರ ಸಲ್ಲಿಸುವ ವೇಳೆ ಕೆಲವರು ಸಲ್ಲಿಸಿದ್ದ ಹೆಚ್ಚುವರಿ ನಾಮಪತ್ರಗಳು, ಪಕ್ಷದ ಬಿ ಫಾರಂ ಇಲ್ಲದಿರುವ ಕಾರಣಕ್ಕೆ ‘ಡಮ್ಮಿ’ ಅಭ್ಯರ್ಥಿಗಳ ನಾಮಪತ್ರಗಳು, ನಿಗದಿತ ಸಂಖ್ಯೆಯ ಸೂಚಕರ ಹೆಸರು, ಸಹಿ ಇಲ್ಲದಿರುವ ಕಾರಣಕ್ಕೆ ಪಕ್ಷೇತರರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ರಾಯಬಾಗದಲ್ಲಿ ತಿರಸ್ಕೃತ ಹೆಚ್ಚು: ರಾಯಬಾಗದಲ್ಲಿ ಅತಿ ಹೆಚ್ಚು ನಾಲ್ಕು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತ
ಗೊಂಡಿವೆ. 22 ಜನರ ನಾಮಪತ್ರಗಳು ಸ್ವೀಕೃತಗೊಂಡಿವೆ. ನಿಪ್ಪಾಣಿ, ಅಥಣಿ, ಕಾಗವಾಡ, ಗೋಕಾಕ ಹಾಗೂ ಬೈಲಹೊಂಗಲದಲ್ಲಿ ಎಲ್ಲ ಅಭ್ಯರ್ಥಿಗಳ ನಾಮಪತ್ರ ಸ್ವೀಕಾರವಾಗಿವೆ. ಕುಡಚಿ ಕ್ಷೇತ್ರದಲ್ಲಿ ಅತಿ ಹೆಚ್ಚು 23 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ.

ವಿವರ: ನಿಪ್ಪಾಣಿ– 10 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ (ತಿರಸ್ಕೃತ ಇಲ್ಲ), ಚಿಕ್ಕೋಡಿ– 11 (1), ಅಥಣಿ– 15 (0), ಕಾಗವಾಡ– 16(0), ಕುಡಚಿ– 23 (3), ರಾಯಬಾಗ– 22(4), ಹುಕ್ಕೇರಿ– 11(3), ಅರಬಾವಿ– 9(1), ಯಮಕನಮರಡಿ– 7(2), ಗೋಕಾಕ– 12 (0), ಬೆಳಗಾವಿ ಉತ್ತರ– 16 (1), ಬೆಳಗಾವಿ ದಕ್ಷಿಣ– 20(3), ಬೆಳಗಾವಿ ಗ್ರಾಮೀಣ– 15 (3), ಖಾನಾಪುರ– 17 (3), ಕಿತ್ತೂರು– 13 (1), ಬೈಲಹೊಂಗಲ– 9(0), ಸವದತ್ತಿ – 10(0), ರಾಮದುರ್ಗ– 16 (2).

ಹುಕ್ಕೇರಿಯಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಉಮೇಶ ಕತ್ತಿ ಅವರ ಜೊತೆ ಸಹೋದರ ರಮೇಶ ಕತ್ತಿ ಕೂಡ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಬಿ ಫಾರಂ ಉಮೇಶ ಕತ್ತಿ ಅವರಿಗೆ ಸಿಕ್ಕಿದ್ದರಿಂದ ರಮೇಶ ಕತ್ತಿ ಅವರ ನಾಮಪತ್ರ ತಿರಸ್ಕೃತಗೊಂಡಿತು.

ಅರಬಾವಿಯಿಂದ ರೈತ ಹೋರಾಟಗಾರ ಚೂನಪ್ಪ ಪೂಜೇರಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಹಾಗೂ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಇವರ ಪಕ್ಷೇತರ ನಾಮಪತ್ರ ಸ್ವೀಕಾರವಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಸಿಗದ ಕಾರಣ, ಶ್ರೀನಿವಾಸ ತಾಳೂಕರ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಎಂಇಎಸ್‌ ಬೆಂಬಲದೊಂದಿಗೆ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿಗಳಾದ ಕಿರಣ ಸಾಯನಾಕ್‌, ಪಂಡರಿ ಪರಬ, ರತನ ಮಾಸೇಕರ, ಸುಜಿತ್‌ ಮುಳಗುಂದ ನಾಮಪತ್ರ ಸ್ವೀಕಾರವಾಗಿವೆ.

ಖಾನಾಪುರ ಕ್ಷೇತ್ರದಿಂದ ಜ್ಯೋತಿಬಾ ರೆಮಾನಿ ಅವರು ಬಿಜೆಪಿ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಬಿ ಫಾರಂ ಸಿಗದ ಕಾರಣ, ಬಿಜೆಪಿ ನಾಮಪತ್ರ ತಿರಸ್ಕೃತವಾಗಿದೆ. ಅವರ ಪಕ್ಷೇತರ ನಾಮಪತ್ರ ಸ್ವೀಕಾರವಾಗಿದೆ. ಬೆಳಗಾವಿ ಉತ್ತರದಿಂದ ಎಂಇಎಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸಂಭಾಜಿ ಪಾಟೀಲ ಅವರ ನಾಮಪತ್ರ ಸ್ವೀಕಾರವಾಗಿದೆ.

ಇವರೀಗ ಪಕ್ಷೇತರ ಅಭ್ಯರ್ಥಿ

ಪಕ್ಷದ ಅಧಿಕೃತ ಬಿ ಫಾರಂ ಸಿಗದೇ ಇರುವುದರಿಂದ ಕೆಲವು ವ್ಯಕ್ತಿಗಳು ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಅರಬಾವಿ ಕ್ಷೇತ್ರದಿಂದ ಜೆಡಿಎಸ್‌ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಗಳಿಗೆಯಲ್ಲಿ ಪ್ರಕಾಶ ಸೋನವಾಲ್ಕರ್‌ ಅವರಿಗೆ ಜೆಡಿಎಸ್‌ ಬಿ ಫಾರಂ ನೀಡಿದ್ದರಿಂದ ಗಡಾದ ಅವರ ಜೆಡಿಎಸ್‌ ನಾಮಪತ್ರ ತಿರಸ್ಕೃತಗೊಂಡಿತು. ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.

ಇದೇ ಅನುಭವ ಕಿತ್ತೂರಿನ ಬಾಬಾಸಾಹೇಬ ಪಾಟೀಲ ಅವರಿಗೂ ಆಗಿದೆ. ಮೊದಲು ಇವರಿಗೆ ನಾಮಪತ್ರ ನೀಡಿದ್ದ ಜೆಡಿಎಸ್‌ ನಂತರ ಬದಲಾಯಿಸಿ ಬಿಜೆಪಿಯಿಂದ ಬಂಡಾಯವೆದ್ದ ಸುರೇಶ ಮಾರಿಹಾಳ ಅವರಿಗೆ ನೀಡಿತು. ಈಗ ಬಾಬಾಸಾಹೇಬ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT