ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

111 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ:ಡಿ.ಸಿ.

ಒಂಬತ್ತು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ; ನಾಮಪತ್ರ ವಾಪಸ್ ಪಡೆಯಲು ನಾಳೆ ಕೊನೇ ದಿನ
Last Updated 26 ಏಪ್ರಿಲ್ 2018, 8:54 IST
ಅಕ್ಷರ ಗಾತ್ರ

ಬಳ್ಳಾರಿ:  ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ಬುಧವಾರ ನಡೆದ ಬಳಿಕ, 119 ಅಭ್ಯರ್ಥಿಗಳ ಪೈಕಿ ಎಂಟು ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡವು. ಚುನಾವಣಾಧಿಕಾರಿಗಳು ಒಟ್ಟು 158 ನಾಮಪತ್ರಗಳ ಪರಿಶೀಲನೆ ನಡೆಸಿ 111 ಅಭ್ಯರ್ಥಿಗಳ ನಾಮಪತ್ರಗಳನ್ನು ಕ್ರಮಬದ್ಧ ಎಂದು ಘೋಷಿಸಿದರು.

ವಿಜಯನಗರ ಕ್ಷೇತ್ರದ ಐವರು, ಸಂಡೂರಿನ ಇಬ್ಬರು ಮತ್ತು ಕೂಡ್ಲಿಗಿಯ ಒಬ್ಬರ ನಾಮಪತ್ರಗಳು ತಿರಸ್ಕೃತಗೊಂಡವು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್‌ಪ್ರಸಾದ್‌ ಮನೋಹರ್ ತಿಳಿಸಿದ್ದಾರೆ.

ಹಡಗಲಿ: 9 ಅಭ್ಯರ್ಥಿಗಳ 14 ನಾಮಪತ್ರಗಳು ಕ್ರಮಬದ್ಧವಾಗಿವೆ. ಬಿ.ಚಂದ್ರನಾಯಕ್. (ಬಿಜೆಪಿ), ಪಿ.ಟಿ.ಪರಮೇಶ್ವರ್ ನಾಯಕ್ (ಕಾಂಗ್ರೆಸ್‌) ಕಾಯಣ್ಣನವರ ಪುತ್ರಪ್ಪ (ಜೆಡಿಎಸ್), ವಿ.ಹರೀಶ್‌ಕುಮಾರ್ (ಕರ್ನಾಟಕ ಪ್ರಜ್ಞಾವಂತಾ ಜನತಾ ಪಾರ್ಟಿ), ಲಂಬಾಣಿ ಕೃಷ್ಣನಾಯ್ಕ್(ಎಐಎಂಇಪಿ), ಹೇಮಂತ್‌ಕುಮಾರ್ ಭಾರತಿ, ಓದೋ ಗಂಗಪ್ಪ, ಲಕ್ಷ್ಮೀ ಬಾಯಿ ಮತ್ತು ಸುರೇಶ್ (ಪಕ್ಷೇತರರು).

-ಹಗರಿಬೊಮ್ಮನಹಳ್ಳಿ: 12 ಅಭ್ಯರ್ಥಿಗಳ 14 ನಾಮಪತ್ರಗಳು ಕ್ರಮಬದ್ಧವಾಗಿವೆ. ಭೀಮಾನಾಯ್ಕ್.ಎಲ್.ಬಿ.ಪಿ (ಕಾಂಗ್ರೆಸ್), ನೇಮಿರಾಜನಾಯ್ಕ (ಬಿಜೆಪಿ), ಎಸ್.ಕೃಷ್ಣನಾಯ್ಕ (ಜೆಡಿಎಸ್), ಮಾಳಮ್ಮ (ಸಿಪಿಎಂಐ), ಸಂತೋಷ (ಸಿಪಿಐ ಎಂಎಲ್), ಸಿ.ಹೆಚ್.ಲಿಂಗಪ್ಪ ಚಲುವಾದಿ (ಆರ್‌ಪಿಐ), ಎಚ್‌.ಅಜ್ಜಯ್ಯ (ಎಐಎಂಇಪಿ), ವಿ.ಹನುಮಂತಪ್ಪ (ಎಐಎಫ್‌ಬಿ) ಪರಮೇಶ್ವರ.ಎಲ್, ಗೀತಾ.ಬಿ, ರಾಮಣ್ಣ.ಬಿ, ಜಗನ್ನಾಥ (ಪಕ್ಷೇತರರು).

ವಿಜಯನಗರ : 26 ನಾಮಪತ್ರ ಸಲ್ಲಿಸಿದ್ದ 19 ಮಂದಿ ಪೈಕಿ ಐವರ ನಾಮಪತ್ರ ತಿರಸ್ಕೃತಗೊಂಡಿವೆ. ಹದಿನಾಲ್ಕು ಮಂದಿ: ಎಚ್.ಆರ್.ಗವಿಯಪ್ಪ(ಬಿಜೆಪಿ), ಆನಂದಸಿಂಗ್ (ಕಾಂಗ್ರೆಸ್), ದೀಪಕ್ ಸಿಂಗ್ (ಜೆಡಿಎಸ್), ಎಸ್.ಅಲಿಂಭಾಷಾ, ಕೆ.ಉಮೇಶ್, ಪಾ.ಯ.ಗಣೇಶ್, ಗುರುದತ್ತ, ಎಲ್.ಎಸ್.ಬಷೀರ್ ಅಹ್ಮದ್, ಎಸ್.ಎಂ.ಮನೋಹರ್, ಎನ್.ರಾಮಕೃಷ್ಣ, ಕೆ.ರಾಮಿರೆಡ್ಡಿ, ಜಿ.ಶಫಿಸಾಬ್, ಎಚ್.ಶಬ್ಬೀರ್ ಮತ್ತು ಟಿ.ಎಸ್. ಶೀಲಾ (ಪಕ್ಷೇತರರು).
ತಿರಸ್ಕೃತರು: ಬಿಎಸ್‌ಪಿಯ ಜಾನಕಿ, ಎಐಎಂಇಪಿಯ ಹೊನ್ನೂರು ಅಲಿ, ವೈ.ಪಂಪಾಪತಿ, ಮಾರ್ಕಂಡೆಪ್ಪ ಮತ್ತು ಜಿ.ಉಮೇಶ್ (ಪಕ್ಷೇತರರು)

ಕಂಪ್ಲಿ: ನಾಮಪತ್ರ ಸಲ್ಲಿಸಿದ್ದ 6 ಮಂದಿಯ 9 ನಾಮಪತ್ರ ಕ್ರಮಬದ್ಧವಾಗಿದೆ. ಟಿ.ಹೆಚ್.ಸುರೇಶ್‌ಬಾಬು (ಬಿಜೆಪಿ), ಜೆ.ಎನ್.ಗಣೇಶ್ (ಕಾಂಗ್ರೆಸ್), ಕೆ.ರಾಘವೇಂದ್ರ (ಜೆಡಿಎಸ್), ವಿ.ಎಸ್.ಶಿವಶಂಕರಪ್ಪ (ಸಿಪಿಐ), ಬಿ.ಶಾಂತಿ ಲಕ್ಷ್ಮಿ(ಪಿಪಿಓಐ), ಗಾಲಿ ಮಲ್ಲಯ್ಯ (ಪಕ್ಷೇತರ).

-ಸಿರುಗುಪ್ಪ: ನಾಮಪತ್ರ ಸಲ್ಲಿಸಿದ್ದ 10 ಮಂದಿಯ 14 ನಾಮಪತ್ರಗಳು ಕ್ರಮಬದ್ಧವಾಗಿದೆ. ಎಂ.ಎಸ್.ಸೋಮಲಿಂಗಪ್ಪ (ಬಿಜೆಪಿ), ಬಿ.ಮುರುಳಿಕೃಷ್ಣ (ಕಾಂಗ್ರೆಸ್), ಹೊಸಮನೆ ಬಿ.ಮಾರುತಿ (ಜೆಡಿಎಸ್), ದೊಡ್ಡ ಯಲ್ಲಪ್ಪ (ಎಐಎಂಇಪಿ), ಎಚ್.ವಿರೇಶಪ್ಪ ಹುಣಸೇಮರದ (ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್), ಪರಶುರಾಮ, ಎಂ.ಎಸ್.ಗಾದಿಲಿಂಗಪ್ಪ, ಶ್ರೀನಿವಾಸ.ಬಿ, ಬಿ.ಎಂ.ಮಂಗಳ ಮತ್ತು ಬಿ.ಎಂ.ವೆಂಕಟೇಶನಾಯಕ (ಪಕ್ಷೇತರರು).

ಬಳ್ಳಾರಿ ಗ್ರಾಮೀಣ:
ನಾಮಪತ್ರ ಸಲ್ಲಿಸಿದ್ದ 10 ಮಂದಿಯ 14 ನಾಮಪತ್ರಗಳು ಕ್ರಮಬದ್ಧವಾಗಿವೆ. ಬಿ.ನಾಗೇಂದ್ರ (ಕಾಂಗ್ರೆಸ್), ಸಣ್ಣ ಫಕ್ಕೀರಪ್ಪ (ಬಿಜೆಪಿ), ಡಿ.ರಮೇಶ್ (ಜೆಡಿಎಸ್), ಬಸಪ್ಪ ಗಡೇಕಲ್ (ಎಐಎಂಇಪಿ), ಬಿ.ರಘು (ಪಿಪಿಓಐ), ಬಿ.ನಾರಾಯಣಪ್ಪ, ಬಿ.ವೆಂಕಟೇಶ್ ಪ್ರಸಾದ್, ಜಿ.ಅಲಿವೇಲು, ಎಚ್.ಪಕ್ಕೀರಪ್ಪ, ಎನ್.ಮುದಿ ಮಲ್ಲಯ್ಯ (ಪಕ್ಷೇತರರು).

ಬಳ್ಳಾರಿ ನಗರ:
ನಾಮಪತ್ರ ಸಲ್ಲಿಸಿದ್ದ 30 ಮಂದಿಯ 37 ನಾಮಪತ್ರಗಳು ಕ್ರಮಬದ್ಧವಾಗಿವೆ. ಜಿ.ಸೋಮಶೇಖರರೆಡ್ಡಿ (ಬಿಜೆಪಿ), ಅನಿಲ್ ಎಚ್.ಲಾಡ್ (ಕಾಂಗ್ರೆಸ್), ಮೊಹ್ಮದ್ ಇಕ್ಬಾಲ್ ಹೊತ್ತೂರ್(ಜೆಡಿಎಸ್), ಬಿ.ಜುಮರಿ (ಸಮಾಜವಾದಿ ಪಕ್ಷ), ಮಹಮ್ಮದ್ ಇಸ್ಮಾಯಿಲ್ (ಎನ್‌ಸಿಪಿ), ಟಪಾಲ್ ಗಣೇಶ್ (ಜೆಡಿಯು), ರಾಜಸಾಬ್ (ಭಾರತೀಯ ಅಂಬೇಡ್ಕರ್ ಜನತಾ ಪಾರ್ಟಿ), ತೇಜ್ ಕುಮಾರ್ ಎಸ್.ಪಾಟೀಲ್ (ಬಿಬಿಕೆಬಿ), ಯು.ಉರುಕುಂದ (ಶಿವಸೇನ), ಪಿ.ವಿಜಯಲಕ್ಷ್ಮಿ (ಪಿಪಿಓಐ), ಎಂ.ಜಯರಾಮುಲು (ಎಐಎಂಇಪಿ), ಎಂ.ಈಶ್ವರರೆಡ್ಡಿ (ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ), ಹಪೀಜ್ ಮೊಹ್ಮದ್ ಇಸ್ಮಾಯಿಲ್ (ಕಲ್ಯಾಣಕಾರಿ ಜನತಾಂತ್ರಿಕ ಪಾರ್ಟಿ), ಎಚ್.ವಿ.ಕಿರಣ್ (ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ), ಡಿ.ಪಾರ್ಥಸಾರಥಿ (ಜನಹಿತ ಪಕ್ಷ), ಬಿ.ವಿ.ತೇಜಸ್, ಬಿ.ಶೇಖರ್‌ಬಾಬು, ಅಲ್ತಾಪ್ ಹುಸೇನ್, ಡಾ.ಕೆ.ಆರ್.ರವಿಕುಮಾರ್, ಈರಮ್ಮ, ಜಿ.ವಿದ್ಯಾ, ಜಿ.ಟಿ.ಶ್ರೀನಿವಾಸ, ಗಂಗಿರೆಡ್ಡಿ, ಅಂಡಿ ರಫೀಕ್ ಸಾಬ್, ಎಂ.ಎಂ.ಆನಂದ್‌ಕುಮಾರ್, ಪಿ.ಮಧುಸೂಧನ್, ನಾರಾಯಣಸ್ವಾಮಿ, ನಜೀರ್ ಹುಸೇನ್, ಪಿ.ನಾರಾಯಣಮೂರ್ತಿ, ವಲಿಸಾಬ್ (ಪಕ್ಷೇತರರು).

ಸಂಡೂರು: ನಾಮಪತ್ರ ಸಲ್ಲಿಸಿದ ಎಂಟು ಮಂದಿಯ 11 ನಾಮಪತ್ರಗಳಲ್ಲಿ ಪಕ್ಷೇತರರಾದ ಡಿ.ಕೃಷ್ಣಪ್ಪ ಮತ್ತು ಎನ್.ಸೋಮಪ್ಪ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ. ಉಳಿದವರು: ಈ.ತುಕಾರಾಂ (ಕಾಂಗ್ರೆಸ್) ,ಡಿ.ರಾಘವೇಂದ್ರ (ಬಿಜೆಪಿ), ಬಿ.ವಸಂತ್ ಕುಮಾರ, (ಜೆಡಿಎಸ್), ರಾಮಾಂಜಿನಪ್ಪ (ಎಸ್‌ಯುಸಿಐ), ಎನ್.ಚೇತನ್ (ಎಐಎಂಇಪಿ), ಬಂಗಾರು ಹನುಮಂತು (ಪಕ್ಷೇತರ).

ಕೂಡ್ಲಿಗಿ: ನಾಮಪತ್ರ ಸಲ್ಲಿಸಿದ 15 ಮಂದಿಯ 19 ನಾಮಪತ್ರಗಳಲ್ಲಿ ಎನ್.ಟಿ.ತಮ್ಮಣ್ಣ ನಾಮಪತ್ರ ತಿರಸ್ಕೃತಗೊಂಡಿದೆ.
ಕ್ರಮಬದ್ಧ ಅಭ್ಯರ್ಥಿಗಳು: ರಾಘವೇಂದ್ರ (ಕಾಂಗ್ರೆಸ್) , ಎನ್.ವೈ.ಗೋಪಾಲಕೃಷ್ಣ (ಬಿಜೆಪಿ), ಎನ್.ಟಿ.ಬೊಮ್ಮಣ್ಣ (ಜೆಡಿಎಸ್), ಜಿ.ಈಶಪ್ಪ (ಜೆಡಿಯು), ಎಚ್.ವೀರಣ್ಣ (ಸಿಪಿಐ), ಎಚ್.ಶರಣಪ್ಪ (ಪಿಪಿಐ), ಎನ್.ಬಸವರಾಜ (ಸರ್ವ ಜನತಾ ಪಾರ್ಟಿ), ಜಿ.ವೆಂಕಟೇಶ್, ಜೂಗಲ ಕೊತ್ಲಪ್ಪ, ಕೆ.ಮಹಾದೇವಪ್ಪ, ಲೋಕೇಶನಾಯ್ಕ, ಶಿವಪ್ಪ ಕಾವಲಿ, ಸೂರಲಿಂಗಪ್ಪ ಮತ್ತು ಯು.ಸತೀಶ್(ಪಕ್ಷೇತರರು.)

ತಮ್ಮಣ್ಣ ನಾಮಪತ್ರ ತಿರಸ್ಕೃತ

ಬಳ್ಳಾರಿ: ಕೂಡ್ಲಿಗಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎನ್‌.ಟಿ.ಬೊಮ್ಮಣ್ಣ ಪುತ್ರ ಎನ್‌.ಟಿ.ತಮ್ಮಣ್ಣ ನಾಮಪತ್ರ ತಿರಸ್ಕೃತಗೊಂಡಿದೆ. ಅವರು ಪಕ್ಷದ ಬಿ.ಫಾರಂ ಇಲ್ಲದೆಯೇ ನಾಮಪತ್ರ ಸಲ್ಲಿಸಿದ್ದರು. ವಿಜಯ ನಗರ ಕ್ಷೇತ್ರದಲ್ಲಿ ಬಿಎಸ್‌ಪಿಯ ಜಾನಕಿ ಮತ್ತು ಎಐಎಂಇಪಿಯ ಹೊನ್ನೂರು ಅಲಿ ನಾಮಪತ್ರವೂ ತಿರಸ್ಕೃತಗೊಂಡಿದೆ.

ನಗರ ಕ್ಷೇತ್ರ: ಹೆಚ್ಚು ಪಕ್ಷ, ಹೆಚ್ಚು ಅಭ್ಯರ್ಥಿಗಳು!

ಬಳ್ಳಾರಿ: ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಬಳ್ಳಾರಿ ನಗರ ಕ್ಷೇತ್ರದಲ್ಲೇ ಅತಿ ಹೆಚ್ಚು ಪಕ್ಷ ಮತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದುದು ವಿಶೇಷ. ಪ್ರಮುಖ ಮೂರು ಪಕ್ಷಗಳನ್ನು ಹೊರತುಪಡಿಸಿ 12 ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇಡೀ ಜಿಲ್ಲೆಯಲ್ಲಿ ಈ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಕಾರ್ಯವೇ ಸುದೀರ್ಘವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT