ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕು ಪಡೆದ ಕಾಂಗ್ರೆಸ್‌ ಪ್ರಚಾರ

Last Updated 26 ಏಪ್ರಿಲ್ 2018, 10:40 IST
ಅಕ್ಷರ ಗಾತ್ರ

ಗದಗ: 27ನೇ ವಾರ್ಡ್‌ನಲ್ಲಿ ಗದಗ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲ ಪರವಾಗಿ ಕಾರ್ಯಕರ್ತರು ಪ್ರಚಾರ ನಡೆಸಿದರು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು.

ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಭು ಬುರಬುರೆ, ಎಸ್.ವಿ.ಮರಡ್ಡಿ, ಜಗದೀಶ ಹೊಸಮನಿ, ಬಾಲಚಂದ್ರ ಭರಮಗೌಡರ, ಡಾ.ಶಿವಪ್ಪಗೌಡ್ರ, ಸಿ.ಎಂ.ಪಾಟೀಲ, ಅಶೋಕ ಪಾಟೀಲ, ಅಜಯ ಮಡಿವಾಳರ, ಪ್ರವೀಣ ಹುಣಸಿಮರದ, ಕಿರೇಸೂರ, ರೇವಣೆಪ್ಪ ಯಳಮಲಿ, ನಬಿ ಬದಾಮಿ, ನಿಸ್ಸಾರಅಹ್ಮದ್ ನವಲಗುಂದ, ಮಂಜುನಾಥ ಜವಳಿ, ಚನ್ನವೀರ ಮಳಗಿ, ಪ್ರವೀಣ ಅಸೂಟಿ, ಮುರಗೇಶ ಬಡ್ನಿ, ಬಿ.ಎಫ್.ಕಂಬಡಿ, ಡಾ.ಚಿಕ್ಕನರಗುಂದ, ಕೆ.ಬಿ.ತಳಗೇರಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಬಸವರಾಜ ಕಡೇಮನಿ, ನೀಲಮ್ಮ ಬೋಳನವರ, ಮೀನಾಕ್ಷಿ ಬೆನಕಣ್ಣವರ, ನಿಂಗಪ್ಪ ಪಡಗದ, ಎಂ.ಎಂ.ಮಾಳೆಕೊಪ್ಪ, ಸುಮಾ ಗರಗ, ರಾಚಪ್ಪ ಗಡಾದ, ಪರಪ್ಪ ಕಮತರ, ಮಾರ್ತಂಡಪ್ಪ ಹಾದಿಮನಿ, ನಗರಸಭೆ ಸದಸ್ಯ ಮಂಜುನಾಥ ಪೂಜಾರ, ಕಮಲಾ ಹಾದಿಮನಿ, ವಿನೋದ ಶಿದ್ಲಿಂಗ್, ಅಕ್ಕಿ, ಶಿವರಾಜ ಕೋಟಿ, ತಯ್ಯಬ ಕುನ್ನಿಭಾವಿ, ಚಾಂದ ಕೊಟ್ಟೂರ, ಶಿವಪ್ಪ ಬೆನಕಣ್ಣವರ, ಸುರೇಶ ಗರಗ, ಕೃಷ್ಣಾ ಬಳ್ಳಾರಿ, ಸಂತೋಷ ಶಿದ್ಲಿಂಗ್, ವಿನಾಯಕ ಬಳ್ಳಾರಿ, ಬಿ.ಎಫ್.ಕಂಬಳಿ, ಪ್ರದೀಪ ಅಸೂಟಿ, ಮಡಿವಾಳರ, ವಡ್ಡಟ್ಟಿ ಇದ್ದರು.

ಸ್ಥಳೀಯ 22ನೇ ವಾರ್ಡ್‌ನಲ್ಲಿ ಯುವ ಕಾಂಗ್ರೆಸ್ ಸಮಿತಿಯಿಂದ ಎಚ್.ಕೆ.ಪಾಟೀಲ ಅವರ ಚುನಾವಣಾ ಪ್ರಚಾರಾರ್ಥ ಸಭೆ ನಡೆಯಿತು.‘ಕಾಂಗ್ರೆಸ್‌ ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾಗೊಳಿಸಿದೆ. ಯೋಜನೆಗಳನ್ನು ಜನಮನ್ನಣೆ ಗಳಿಸಿವೆ’ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪಾಟೀಲ ಹೇಳಿದರು.

‘ಶಿಕ್ಷಣಕ್ಕೆ ನೆರವು ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳಡಿ ಜಿಲ್ಲೆಯ 2,34,675 ವಿದ್ಯಾರ್ಥಿಗಳಿಗೆ ಸಾಕಷ್ಟು ಅನುದಾನ ಮೀಸಲಿಡಲಾಗಿದೆ’ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.

ಬೆಟಗೇರಿ ವರದಿ: ಬೆಟಗೇರಿಯ 4ನೇ ವಾರ್ಡ್‌ನಲ್ಲಿ ಎಚ್.ಕೆ.ಪಾಟೀಲರ ಪರವಾಗಿ ಕಾರ್ಯಕರ್ತರು ಮತ ಯಾಚನೆ ಮಾಡಿದರು. ನಗರದ ಟರ್ನಲ್ ಪೇಟೆ, ಮಂಜುನಾಥ ನಗರ, ಕಣವಿ ಪ್ಲಾಟ್, ಸುಭಾಷ್ ರಸ್ತೆ ವಿವಿಧೆಡೆ ಪ್ರಚಾರ ನಡೆಯಿತು.

ಗಣೇಶಸಿಂಗ ಬ್ಯಾಳಿ, ಅಣ್ಣಪ್ಪ ಗಾವರವಾಡ, ನಿಂಗಪ್ಪ ದೊಡ್ಡಮನಿ, ಶ್ರೀಧರ ರಂಗ್ರೇಜ, ಎಂ.ಎಸ್.ಮಲ್ಲಾಪುರ, ಶಿವಾಜಿಸಿಂಗ ರಜಪೂತ, ಈರಪ್ಪ ಗಾರವಾಡ, ಗಿರಿಧರಸಿಂಗ್ ಬ್ಯಾಳಿ, ವೀರನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT