ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಬಯೋಮೆಟ್ರಿಕ್ ಇನ್ನೊಂದೆಡೆ ಪಡಿತರ ವಿತರಣೆ

Last Updated 26 ಏಪ್ರಿಲ್ 2018, 11:09 IST
ಅಕ್ಷರ ಗಾತ್ರ

ಕುಮಾರಪಟ್ಟಣ: ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕರು ಹೆಚ್ಚಿರುವ ಗ್ರಾಮದಲ್ಲಿ ಪ್ರತಿ ತಿಂಗಳು ಪಡಿತರ ಪಡೆಯಲು ತಮ್ಮ ಎರಡು ಮೂರು ದಿನದ ದುಡಿಮೆಯನ್ನು ಕೈಚೆಲ್ಲಿ ಸರದಿ ಸಾಲಿನಲ್ಲಿ ಕಾಯಬೇಕಾಗುತ್ತದೆ.

ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೈಜ್ಞಾನಿಕ ವ್ಯವಸ್ಥೆಯಂತೆ ಬಯೋಮೆಟ್ರಿಕ್ ತೆಗೆದುಕೊಳ್ಳಲು ಸಿಗ್ನಲ್‌ ಕೊರತೆ ಇರುವುದರಿಂದ ಊರಾಚೆ ಇರುವ ಪಶುಚಿಕಿತ್ಸಾಲಯ ಕೇಂದ್ರದ ಬಳಿ ಬಯೋಮೆಟ್ರಿಕ್ ಪಡೆದು ಊರ ಒಳಗೆ ಪಡಿತರ ವಿತರಿಸಲಾಗುತ್ತಿದೆ.
ಗ್ರಾಮದಲ್ಲಿ 360 ಪಡಿತರ ಚೀಟಿಗಳಿವೆ ನೆಟ್‌ವರ್ಕ್‌ ಕೈಕೊಟ್ಟಾಗ ತೊಂದರೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಗ್ರಾಹಕರಿಗೆ ಅನುಕೂಲವಾಗಲಿ ಎಂದು ತಡರಾತ್ರಿವರೆಗೂ ಪಡಿತರ ಧಾನ್ಯ ವಿತರಿಸುತ್ತೇವೆ ಎನ್ನುತ್ತಾರೆ ವಿತರಕರು.

ವಿತರಕರು ಕವಲೆತ್ತು ಗ್ರಾಮದವರಾ ಗಿದ್ದು ಎರಡು ಮೂರು ಕೇಂದ್ರಗಳನ್ನು ನಿಭಾಯಿಸುತ್ತಿರುವುದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮದ ಯಾವುದಾದರೂ ನೋಂದಾಯಿತ ಸಂಘ–ಸಂಸ್ಥೆಯಡಿಯಲ್ಲಿ ನಮ್ಮ ಗ್ರಾಮದವರೇ ಪಡಿತರ ವಿತರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

‘ಪಡಿತರ ಅಕ್ಕಿ, ಗೋಧಿ, ಬೇಳೆ ಪಡೆಯಲು ವಾರಗಟ್ಟಲೆ ಕಾಯಬೇಕು. ಪ್ರತಿ ತಿಂಗಳು ಇದೇ ಸಮಸ್ಯೆಯಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಹಾಲೇಶ್ ಕೆರಕಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT