ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹೆಬ್ಬೆಟ್ ರಾಮಕ್ಕ
ಎನ್.ಆರ್. ನಂಜುಂಡೇಗೌಡ ನಿರ್ದೇಶಿಸಿರುವ ಈ ಚಿತ್ರವನ್ನು ಎಸ್.ಎ.ಪುಟ್ಟರಾಜು ನಿರ್ಮಾಣ ಮಾಡಿದ್ದಾರೆ. ‘ಅತ್ಯುತ್ತಮ ಕನ್ನಡ ಚಿತ್ರ’ ಎಂಬ ರಾಷ್ಟ್ರಪ್ರಶಸ್ತಿಯನ್ನೂ ‘ಹೆಬ್ಬೆಟ್ ರಾಮಕ್ಕ’ ಮುಡಿಗೇರಿಸಿಕೊಂಡಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ಬಿ.ಸತೀಶ್ ಅವರ ಛಾಯಾಗ್ರಹಣ, ಎಸ್.ಜಿ.ಸಿದ್ದರಾಮಯ್ಯ ಸಂಭಾಷಣೆ ಚಿತ್ರಿಕ್ಕಿದೆ. ರಾಮಕ್ಕನಾಗಿ ಹಿರಿಯನಟಿ ತಾರಾ ಅಭಿನಯಿಸಿದ್ದಾರೆ. ದೇವರಾಜ್, ಹನುಮಂತೇಗೌಡ್ರು, ನಾಗರಾಜಮೂರ್ತಿ, ಜಗದೀಶ್‍ ಜಾಲ, ಮೈಮ್‌ ನಂಜುಂಡ, ಸಿಂಧು ಕಾನೇನಹಳ್ಳಿ ತಾರಾಗಣದಲ್ಲಿದ್ದಾರೆ.

ಕಾನೂರಾಯಣ
ಟಿ.ಎಸ್.ನಾಗಾಭರಣ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಕಥೆ ಹರೀಶ್ ಹಾಗಲವಾಡಿ ಅವರದ್ದು. ವಾಸುಕಿ ವೈಭವ್ ಸಂಗೀತ ನಿರ್ದೇಶನ, ಶ್ರೀನಿವಾಸ ರಾಮಯ್ಯ ಛಾಯಾಗ್ರಹಣ ಹಾಗೂ ಬಿ.ಎಸ್.ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಸ್ಕಂದ ಅಶೋಕ್, ಸೋನು ಗೌಡ, ದೊಡ್ಡಣ್ಣ, ಸುಂದರ್ ರಾಜ್, ಗಿರಿಜಾ ಲೋಕೇಶ್, ಕರಿ ಸುಬ್ಬು, ಚಂದ್ರು (ಕಡ್ಡಿಪುಡಿ), ನೀನಾಸಂ ಅಶ್ವತ್ಥ್, ಮನು ಹೆಗ್ಡೆ, ಜಾಹ್ನವಿ ಜ್ಯೋತಿ ತಾರಾಬಳಗದಲ್ಲಿದ್ದಾರೆ. ಶ್ರುತಾಲಯ ಫಿಲಂ ಈ ಚಿತ್ರವನ್ನು ನಿರ್ಮಿಸಿದೆ.

ಬಕಾಸುರ
ರವಿಚಂದ್ರನ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕ ಆರ್.ಜಿ.ರೋಹಿತ್. ಪದ್ಮಾವತಿ ಪಿಕ್ಚರ್ಸ್ ಲಾಂಛನದಲ್ಲಿ ರೋಹಿತ್ ಹಾಗೂ ತಂಡದವರು ನಿರ್ಮಿಸಿದ್ದಾರೆ. ನವನೀತ್ ನಿರ್ದೇಶಿಸಿದ್ದಾರೆ. ಅವಿನಾಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮೋಹನ್ ಅವರ ಛಾಯಾಗ್ರಹಣವಿದೆ. ವೆಂಕಿ ಯುಡಿವಿ ಸಂಕಲನ ಹಾಗೂ ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸಿತಾರಾ, ಸಾಧುಕೋಕಿಲ, ಸುಚೀಂದ್ರ ಪ್ರಸಾದ್, ಸಿಹಿಕಹಿ ಚಂದ್ರು, ವಿಜಯ್ ಚಂಡೂರ್, ಕಾವ್ಯಾಗೌಡ, ಶಶಿಕುಮಾರ್ ತಾರಾಬಳಗದಲ್ಲಿದ್ದಾರೆ.

ಧ್ವಜ
ಸುಧಾ ಬಸವೇಗೌಡ ಅವರು ನಿರ್ಮಿಸಿರುವ ‘ಧ್ವಜ’ ಚಿತ್ರವನ್ನು ಅಶೋಕ್‌ ಕಶ್ಯಪ್‌ ನಿರ್ದೇಶಿಸಿದ್ದಾರೆ. ಛಾಯಾಗ್ರಹಣವನ್ನೂ ಅವರೇ ನಿರ್ವಹಿಸಿದ್ದಾರೆ. ಈ ಚಿತ್ರದ ನಾಯಕರಾಗಿ ರವಿ ಅಭಿನಯಿಸಿದ್ದಾರೆ. ರಾಜಕೀಯ, ಥ್ರಿಲ್ಲರ್, ಲವ್ ಸ್ಟೋರಿ ಹಿನ್ನಲೆಯ ಕಥೆ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಿಯಾಮಣಿ, ದಿವ್ಯಾ ಉರುಡುಗ, ಟಿ.ಎನ್.ಸೀತಾರಾಂ, ವೀಣಾ ಸುಂದರ್, ತಬಲ ನಾಣಿ, ಬಲ, ಮಂಡ್ಯ ರವಿ, ಸುಂದರರಾಜ್ ಇದ್ದಾರೆ. ಚಿತ್ರದಲ್ಲಿರುವ ಐದು ಹಾಡುಗಳಿಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಕವಿರಾಜ್, ರವಿ, ಚಂದನ್, ಮಂಜು ಮಾಂಡವ್ಯ ಗೀತರಚನೆ ಮಾಡಿದ್ದಾರೆ.

ಡೇಸ್ ಆಫ್ ಬೋರಾಪುರ
ಬೋರಾಪುರ ಎಂಬ ಕುಗ್ರಾಮದ ಕಥನವುಳ್ಳ ಈ ಚಿತ್ರವನ್ನು ಆದಿತ್ಯ ಕುಣಿಗಲ್‌ ನಿರ್ದೇಶಿಸಿದ್ದಾರೆ. ಅಜಿತ್ ಕುಮಾರ್ ಗದ್ದಿ, ಮಧು ಬಸವರಾಜ್, ರಕ್ಷಾ ಗದ್ದು, ಮತ್ತು ಶಾಂತಲಾ ಬಸವರಾಜ್ ನಿರ್ಮಿಸಿದ್ದಾರೆ.

ಚಿತ್ರಕ್ಕೆ ಸರವಣನ್ ಜಿ.ಎಸ್. ಛಾಯಾಗ್ರಹಣ, ವಿವೇಕ್ ಚಕ್ರವರ್ತಿ ಸಂಗೀತ, ಎಸ್.ಆದಿತ್ಯ ಕಥೆ, ಚಿತ್ರಕಥೆ, ಸಂಕಲನ, ಮನು ಶೆಟ್ಟಿಹಳ್ಳಿ ಸಾಹಿತ್ಯ ಮತ್ತು ಸಂಭಾಷಣೆ ಇದೆ. ಪ್ರಶಾಂತ್ ಸೂರ್ಯ, ಸಿದ್ದಾರ್ಥ, ಅನಿತಾ ಭಟ್, ಅಮಿತ್, ಪ್ರಕೃತಿ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ್, ಪ್ರಶಾಂತ್ ವರದಮಾಲ, ಬಸವರಾಜ್.ಎಂ.ಬಿ. ಶಫಿ, ಸುಚೇಂದ್ರ ಪ್ರಸಾದ್, ನಾಗೇಶ್‍ ಶಾ, ಪ್ರಮೋದ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT