ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್‌ ಸಾಧನೆ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), ಮುಂಬೈ ಷೇರುಪೇಟೆಯ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ 100 ಶತಕೋಟಿ ಡಾಲರ್‌ ದಾಟಿ ದಿನದ ವಹಿವಾಟು ಕೊನೆಗೊಳಿಸಿದ ದೇಶದ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡಾಲರ್‌ ಎದುರಿನ ರೂಪಾಯಿ ವಿನಿಮಯ ದರ ಗುರುವಾರ ಮಧ್ಯಾಹ್ನ ₹ 66.77 ಇತ್ತು. ಈ ಲೆಕ್ಕದಲ್ಲಿ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ವಹಿವಾಟಿನ ಅಂತ್ಯದ ವೇಳೆಗೆ ₹ 13,869 ಕೋಟಿಗಳಷ್ಟು ಏರಿಕೆ ಕಂಡಿತ್ತು. ಇದರಿಂದ ಒಟ್ಟಾರೆ ಮಾರುಕಟ್ಟೆ ಮೌಲ್ಯ ₹ 6,77,715 ಕೋಟಿಗೆ (101.5 ಶತಕೋಟಿ ಡಾಲರ್‌) ತಲುಪಿದೆ.

ಸೋಮವಾರದ ವಹಿವಾಟಿನಲ್ಲಿಯೇ ಸಂಸ್ಥೆಯು ಈ ದಾಖಲೆ ತಲುಪಿತ್ತು. ಆದರೆ, ವಹಿವಾಟಿನ ಕೊನೆಯವರೆಗೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT