ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟಾ’ಗೆ ಪ್ರಚಾರ ಕೊಡಿ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚುನಾವಣಾ ಆಯೋಗವು ‘ನೋಟಾ’ ಪರಿಚಯಿಸಿ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರನಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಒಳ್ಳೆಯ ನಡೆ. ಆದರೆ ನೋಟಾದ ಉದ್ದೇಶ– ಅಗತ್ಯಗಳ ಬಗ್ಗೆ ಅರಿವು ಇರುವ ಮತದಾರರ ಪ್ರಮಾಣ ಅತ್ಯಲ್ಪ. ಆದ್ದರಿಂದ ನೋಟಾದ ಬಗ್ಗೆ ಇನ್ನಷ್ಟು ಅರಿವು ಮೂಡಿಸುವುದು ಅಗತ್ಯವೆನಿಸುತ್ತದೆ.

ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದಂತೆ, ಚುನಾವಣಾ ಆಯೋಗವು ಹಳ್ಳಿ ಹಳ್ಳಿಗಳಿಗೆ ಹೋಗಿ, ‘ಕಣದಲ್ಲಿ ಸೂಕ್ತ ಎನಿಸುವ ಅಭ್ಯರ್ಥಿ ಇಲ್ಲ ಎಂದೆನಿಸಿದರೆ ನೋಟಾಕ್ಕೆ ಮತ ನೀಡಬಹುದು’ ಎಂದು ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ಆಯೋಗವೇ ಕ್ಷೇತ್ರವಾರು ತಂಡಗಳನ್ನು ರಚಿಸಿ ಈ ಕೆಲಸ ಮಾಡಬೇಕು.

ಎಚ್.ಪಿ ಮಹದೇವಸ್ವಾಮಿ, ಹೊರಳಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT