ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: 10 ವರ್ಷ ಕಠಿಣ ಶಿಕ್ಷೆ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕರೈಕಲ್‌, ಪುದುಚೇರಿ : ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿವನೇಸನ್‌ (44) ಎಂಬ ಶಿಕ್ಷಕನಿಗೆ ಇಲ್ಲಿಯ ಕೋರ್ಟ್‌ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಸುರಕುಡಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಶಿವನೇಸನ್‌, 2016ರಲ್ಲಿ 6ನೇ ತರಗತಿಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಹೋಂವರ್ಕ್‌ ತೋರಿಸಲು ಬಾಲಕಿ ಆತನ ಕೊಠಡಿಗೆ ಹೋಗಿದ್ದಾಗ ಈ ಕೃತ್ಯ ಎಸಗಲಾಗಿತ್ತು.  ಬಾಲಕಿ ಪ್ರತಿರೋಧ ಒಡ್ಡಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದ.

ಈ ಸಂಬಂಧ ಬಾಲಕಿಯ ಪೋಷಕರು ದೂರು ದಾಖಲು ಮಾಡಿದ್ದರು.

ಏಳು ವರ್ಷ ಶಿಕ್ಷೆ 
ಮುಂಬೈ
: ’ಬಾಲಕಿಯರ ಮೇಲಿನ ಅತ್ಯಾಚಾರವನ್ನು ಎಂದಿಗೂ ಸಹಿಸಲಾಗದು’ ಎಂದಿರುವ ಬಾಂಬೆ ಹೈಕೋರ್ಟ್‌, 16ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ 37 ವರ್ಷದ ವ್ಯಕ್ತಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿದೆ.

ಪುಣೆಯ ಸೆಷನ್ಸ್‌ ಕೋರ್ಟ್‌ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಅಪರಾಧಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ನ್ಯಾಯಮೂರ್ತಿ ಭಾರತಿ ಡಂಗ್ರೆ, ’ಇಂಥ ಘೋರ ಅಪರಾಧ ಮಾಡಿದವರನ್ನು ಎಂದಿಗೂ ಕ್ಷಮಿಸಲಾಗದು’ ಎಂದು ಹೇಳಿದರು.

2002ರಲ್ಲಿ ಘಟನೆ ನಡೆದಾಗ ಸಂತ್ರಸ್ತೆಗೆ 18 ವರ್ಷ ವಯಸ್ಸಾಗಿತ್ತು. ಅವಳ ಅನುಮತಿ ಮೇರೆಗೆ ತಾನು ದೈಹಿಕ ಸಂಪರ್ಕ ನಡೆಸಿದ್ದೆ ಎಂದು ಅರ್ಜಿಯಲ್ಲಿ ಅಪರಾಧಿ ಹೇಳಿದ್ದನು. ಆದರೆ ಘಟನೆ ನಡೆದ ಸಂದರ್ಭದಲ್ಲಿ ಆಕೆಗೆ 16 ವರ್ಷ ವಯಸ್ಸಾಗಿರುವುದನ್ನು ಪ್ರಾಸಿಕ್ಯೂಷನ್‌ ಪರ ವಕೀಲರು ಸಾಬೀತು ಮಾಡಿದರು.

ಜಾಮೀನಿನ ಮೇಲೆ ಹೊರಗೆ ಇದ್ದ ಅಪರಾಧಿಯನ್ನು ಕೂಡಲೇ ಬಂಧಿಸಿ, ಜೈಲಿನಲ್ಲಿ ಇಡುವಂತೆ ನ್ಯಾಯಮೂರ್ತಿಗಳು ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT