ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರಿಂದ ₹ 6.76 ಕೋಟಿ ವಶ

Last Updated 26 ಏಪ್ರಿಲ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ದಿನಗಳಿಂದ ಬೆಂಗಳೂರು ಹಾಗೂ ಮೈಸೂರಿನ 11 ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಇಲ್ಲದ ₹6.76 ಕೋಟಿ ವಶಪಡಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಐ.ಟಿ ಅಧಿಕಾರಿಗಳು ಒಟ್ಟು ₹10.62 ಕೋಟಿ  ವಶಪಡಿಸಿಕೊಂಡಂತಾಗಿದೆ. ಇದಕ್ಕೂ ಮೊದಲು
₹ 4.13 ಕೋಟಿ ನಗದು ಮತ್ತು ₹ 1.33 ಕೋಟಿ ಮೊತ್ತದ ಚಿನ್ನಾಭರಣ ಜಪ್ತು ಮಾಡಿದ್ದರು.

ಮೈಸೂರು ಭಾಗದ ನಾಲ್ವರು ಗುತ್ತಿಗೆದಾರರಿಗೆ ಸೇರಿದ ಹಣವನ್ನು ಬೇನಾಮಿ ಹೆಸರಿನಲ್ಲಿ ಬ್ಯಾಂಕ್‌ ಲಾಕರ್‌ಗಳಲ್ಲಿ ಇಡಲಾಗಿತ್ತು. ಎಲ್ಲವೂ
₹ 2000 ಮತ್ತು ₹ 500 ಮುಖಬೆಲೆಯ ನೋಟುಗಳಾಗಿದ್ದು, ಗುತ್ತಿಗೆದಾರರು ನಿರ್ವಹಿಸಿರುವ ಲೆಕ್ಕ ಪತ್ರಗಳಲ್ಲಿ ಇದರ ಉಲ್ಲೇಖವಿರಲಿಲ್ಲ ಎಂದೂ ಮೂಲಗಳು ತಿಳಿಸಿವೆ.

ದೇಶದ ಕೆಲವು ಭಾಗಗಳ ಎಟಿಎಂಗಳಲ್ಲಿ ದೊಡ್ಡ ಮುಖಬೆಲೆಯ ನೋಟುಗಳ ಕೊರತೆ ಉಂಟಾಗಿದ್ದು, ಕರ್ನಾಟಕದ ಚುನಾವಣೆ ಸಮಯದಲ್ಲಿ ಬಳಸಲು ಅಕ್ರಮವಾಗಿ ಸಂಗ್ರಹಿಸಿಡಲಾಗುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಐ.ಟಿ ಕಾರ್ಯೋನ್ಮುಖವಾಯಿತು.

ಅಲ್ಲದೆ, ರಾಜ್ಯದ ಮುಖ್ಯ ಕಾರ್ಯುದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದ ಕರ್ನಾಟಕ ಹಾಗೂ ಗೋವಾ ಐ.ಟಿ. ವೃತ್ತದ ತನಿಖಾ ವಿಭಾಗದ ಮಹಾ
ನಿರ್ದೇಶಕರು ಈ ವರ್ಷದ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ಕಂದಾಯ, ಲೋಕೋಪಯೋಗಿ, ಜಲ ಸಂಪನ್ಮೂಲ, ಪಶುಸಂಗೋಪನೆ ಸೇರಿದಂತೆ ಕೆಲವು ಇಲಾಖೆಗಳ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಹಣದ ವಿವರ ಕೇಳಿದ್ದರು.

ಅಟ್ಟಿಕಾ ಗೋಲ್ಡ್‌ ಕಂಪನಿ ಮೇಲೂ ದಾಳಿ

ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಅಟ್ಟಿಕಾ ಗೋಲ್ಡ್‌ ಕಂಪನಿ ಕಚೇರಿ ಹಾಗೂ ಅದರ ಮಾಲೀಕ ಬೊಮ್ಮನಹಳ್ಳಿ ಬಾಬು ಅವರ ಕ್ಲೈನ್‌ ರಸ್ತೆಯಲ್ಲಿರುವ ಮನೆಯ ಮೇಲೂ ಐ.ಟಿ ದಾಳಿ ನಡೆದಿದೆ. ಬುಧವಾರ ರಾತ್ರಿ 11ಗಂಟೆ ಸುಮಾರಿಗೆ ದಾಳಿ ಮಾಡಿದ ಅಧಿಕಾರಿಗಳು ಗುರುವಾರವೂ ಶೋಧ ಮುಂದುವರಿಸಿದ್ದಾರೆ.

ಬೊಮ್ಮನಹಳ್ಳಿ ಬಾಬು, ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ‘ನನ್ನ ಮೇಲೆ ಆಗಿರುವ ದಾಳಿ ರಾಜಕೀಯ ಪ್ರೇರಿತ. ಬಿಜೆಪಿ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಐ.ಟಿ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT