ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು : ಪ್ರಾಯೋಗಿಕ ಹಂತದಲ್ಲಿ ದೋಷ-ಕಾಂಗ್ರೆಸ್‌ ಆಕ್ಷೇಪ

Last Updated 31 ಆಗಸ್ಟ್ 2018, 11:30 IST
ಅಕ್ಷರ ಗಾತ್ರ

ಪುತ್ತೂರು : ನಗರಸಭೆಯ ಚುನಾವಣೆಗಾಗಿ ವಾರ್ಡ್‌ 19ರ ಪರ್ಲಡ್ಕ ಹಿರಿಯ ಪ್ರಾಥಮಿಕ ಪೂರ್ವ ಭಾಗದ ಮತಗಟ್ಟೆಯಲ್ಲಿ ಪ್ರಾಯೋಗಿಕ ಮತದಾನದ ವೇಳೆ ದೋಷ ಕಂಡು ಬಂದಿದ್ದು, ಚಲಾಯಿಸಿದ 10 ಮತಗಳ ಪೈಕಿ 6 ನೋಟಾಕ್ಕೆ ಪರಿವರ್ತನೆಗೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಮತ ಮಂತ್ರದಲ್ಲಿ ದೋಷ ಕಂಡು ಬಂದ ಕಾರಣ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಪುಷ್ಪಲತಾ ಅವರ ಪರ ಚುನಾವಣಾ ಏಜೆಂಟ್ ತಿಲಕ್ ಭಂಡಾರಿ ಅವರು ವಾರ್ಡ್‌ಗೆ ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ 3ನೇ ಬಾರಿಯ ಪ್ರಾಯೋಗಿಕ ಮತದಾನದ ವೇಳೆ ಯಂತ್ರ ಲೋಪ ಕಂಡು ಬಾರದ ಹಿನ್ನಲೆಯಲ್ಲಿ ಅದೇ ಮತ ಯಂತ್ರವನ್ನು ಬಳಸಿಕೊಂಡು ಮತದಾನ ಮುಂದುವರಿಸಲಾಗಿದೆ.

‘ಪ್ರಾಯೋಗಿಕ ಮತದಾನದ ವೇಳೆ ಚಲಾಯಿಸಲಾದ 10 ಮತಗಳ ಪೈಕಿ 6 ಮತಗಳು ನೋಟಾಕ್ಕೆ ಪರಿವರ್ತನೆಗೊಂಡಿದ್ದು, ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನೀಡದ ಮತಗಳು ದಾಖಲಾಗಿರುವುದಿಲ್ಲ. ಈ ಮತ ಯಂತ್ರವು ದೋಷಪೂರಿತವಾಗಿರುವುದರಿಂದ ನಮ್ಮ ಆಕ್ಷೇಪಣೆ ಇದ್ದು, ಬದಲಿ ಮತಯಂತ್ರವನ್ನು ಸ್ಥಾಪಿಸಿ ಚುನಾವಣೆ ನಡೆಸಬೇಕು’ ಎಂದು ತಿಲಕ್ ಭಂಡಾರಿ ಅವರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ತಿಳಿಸಿದ್ದಾರೆ.

ಈ ಗೊಂದಲದಿಂದಾಗಿ ಮತದಾನ ಪ್ರಕ್ರಿಯೆಯಲ್ಲಿ 15 ನಿಮಿಷ ವಿಳಂಬವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT