ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂ ಟ್ಯೂಬ್ ವಿಡಿಯೊ ಡೌನ್ ಲೋಡ್ ಮಾಡುವುದು ಹೇಗೆ?

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ಇಂಟರ್ನೆಟ್ ಸಂಪರ್ಕವಿಲ್ಲದೇ ಯೂಟ್ಯೂಬ್ ವಿಡಿಯೊಗಳನ್ನು ವೀಕ್ಷಿಸಬೇಕಾದರೆ ಅವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಹೀಗೆ ಡೌನ್ ಲೋಡ್ ಮಾಡಿದ ವಿಡಿಯೊಗಳು ಯೂ ಟ್ಯೂಬ್ ಆ್ಯಪ್‌ನ ಆಫ್ ಲೈನ್ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತವೆ.

ವಿಡಿಯೊ ಡೌನ್ ಲೋಡ್ ಮಾಡುವುದು ಸುಲಭ. ಯೂ ಟ್ಯೂಬ್ ವಿಡಿಯೊಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಹಲವಾರು ವಿಧಾನಗಳಿವೆ. ಸ್ಮಾರ್ಟ್ ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೊ ಪ್ಲೇ ಮಾಡಿ ಆ ವಿಡಿಯೊದ ಕೆಳಗೆ ಶೇರ್ ಬಟನ್‌ನ ಪಕ್ಕದಲ್ಲಿಯೇ ಡೌನ್ ಲೋಡ್ ಬಟನ್ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ವಿಡಿಯೊ ಡೌನ್ ಲೋಡ್ ಆಗುತ್ತದೆ. ಹೀಗೆ ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿದ ವಿಡಿಯೊಗಳನ್ನು ಕಂಪ್ಯೂಟರ್‌ಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಈ ವಿಡಿಯೊಗಳನ್ನು ಮೊಬೈಲ್ ನಲ್ಲಿ ಮಾತ್ರ ವೀಕ್ಷಿಸಬಹುದು.

ಕೆಲವೊಂದು ವಿಡಿಯೊಗಳಲ್ಲಿ ಮಾತ್ರ ಡೌನ್ ಲೋಡ್ ಮಾಡಲು ಅನುಮತಿ ಇರುತ್ತದೆ, ಡೌನ್ ಲೋಡ್ ಮಾಡುವ ಆಯ್ಕೆ ಇಲ್ಲದ ವಿಡಿಯೊಗಳನ್ನು savefrom.net, KeepVid ಮೊದಲಾದ ವೆಬ್ ಸೈಟ್‌ಗಳ ಸಹಾಯದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಡೌನ್ ಲೋಡ್ ಹೇಗೆ?
Savefrom.net ವೆಬ್ ಸೈಟ್ ಓಪನ್ ಮಾಡಿ ಅಲ್ಲಿ ಡೌನ್ ಲೋಡ್ ಮಾಡಬೇಕಾದ ಯೂ ಟ್ಯೂಬ್ ವಿಡಿಯೊದ ಲಿಂಕ್ ಪೇಸ್ಟ್ ಮಾಡಿ. ವಿಡಿಯೊ ಡೌನ್ ಲೋಡ್ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿದ ನಂತರ ಡೌನ್ ಲೋಡ್ ಬಟನ್ ಕ್ಲಿಕ್ ಮಾಡಿ. ವಿಡಿಯೊ ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಆಗುತ್ತದೆ.

ಸಾಫ್ಟ್‌ವೇರ್‌ ಬಳಸಿ ಡೌನ್‌ಲೋಡ್‌: ವಿಂಡೋಸ್, ಲಿನೆಕ್ಸ್, ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಯೂಟ್ಯೂಬ್ ವಿಡಿಯೊ ಡೌನ್ ಲೋಡ್ ಮಾಡಲು 4K Video Downloader ಎಂಬ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ.

4K Downloader ಓಪನ್ ಮಾಡಿ, ಡೌನ್ ಲೋಡ್ ಮಾಡಬೇಕಾಗಿರುವ ವಿಡಿಯೊ ಲಿಂಕ್  ಪೇಸ್ಟ್ ಮಾಡಿ ನಿಮ್ಮ ವಿಡಿಯೊ ಯಾವ ರೆಸಲ್ಯೂಷನ್‌ನಲ್ಲಿ ಬೇಕು ಎಂಬುದನ್ನು ಆಯ್ಕೆ ಮಾಡಿ, ಆನಂತರ ವಿಡಿಯೋ ಡೌನ್ ಲೋಡ್ ಮಾಡಿ . ಹೀಗೆ ಎಲ್ಲ ವಿಡಿಯೊಗಳನ್ನು ಡೌನ್ ಲೋಡ್ ಮಾಡಿ ಎಲ್ಲೆಂದರಲ್ಲಿ ಅಪ್ ಲೋಡ್ ಮಾಡುವಂತಿಲ್ಲ. ಕಾಪಿರೈಟ್ ನಿಯಮಾವಳಿಗೆ ಬದ್ಧವಾಗಿರುವ ವಿಡಿಯೊಗಳನ್ನು ಈ ರೀತಿ ಡೌನಲೋಡ್ ಮಾಡಿ ಬೇರೆ ವೆಬ್ ಸೈಟ್ ಅಥವಾ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡುವುದು ಮಾಡುವುದು ಸಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT