ಬಿವಿಬಿ ಕಾಲೇಜಿನ ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು

ಜಿಲ್ಲೆಯಲ್ಲಿ ಶೇ 67.66 ಮತದಾನ

ಜಿಲ್ಲೆಯಲ್ಲಿ ಒಟ್ಟು ಶೇ 67.66ರಷ್ಟು ಮತದಾನವಾಗಿದೆ. ಕಣದಲ್ಲಿ ಉಳಿದಿರುವ 64 ಅಭ್ಯರ್ಥಿಗಳ ಭವಿಷ್ಯ ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದೆ. ಮತದಾರನ ನಿರ್ಧರ ಹೊರಬೀಳಲು ಇನ್ನೊಂದೇ ದಿನ ಬಾಕಿ ಇದೆ.

ಬೀದರ್: ಜಿಲ್ಲೆಯಲ್ಲಿ ಒಟ್ಟು ಶೇ 67.66ರಷ್ಟು ಮತದಾನವಾಗಿದೆ. ಕಣದಲ್ಲಿ ಉಳಿದಿರುವ 64 ಅಭ್ಯರ್ಥಿಗಳ ಭವಿಷ್ಯ ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದೆ. ಮತದಾರನ ನಿರ್ಧರ ಹೊರಬೀಳಲು ಇನ್ನೊಂದೇ ದಿನ ಬಾಕಿ ಇದೆ.

ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ; ಅಂದರೆ ಶೇ 73.66ರಷ್ಟು ಆಗಿದೆ. ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿ ಶೇ 63.51ರಷ್ಟು ಆಗಿದೆ. ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಶೇ 69.55, ಔರಾದ್‌ನಲ್ಲಿ ಶೇ 68.28, ಹುಮನಾಬಾದ್‌ನಲ್ಲಿ ಶೇ 66.42, ಬಸವಕಲ್ಯಾಣದಲ್ಲಿ ಶೇ 64.56 ರಷ್ಟು ಮತದಾನವಾಗಿದೆ.

ಮತದಾನ ಪ್ರಕ್ರಿಯೆ ಶನಿವಾರ ಸಂಜೆ ಪೂರ್ಣಗೊಂಡ ಕೂಡಲೇ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳು ಹಾಗೂ ಮತ ಖಾತರಿ ಯಂತ್ರಗಳನ್ನು (ವಿವಿ ಪ್ಯಾಟ್‌ಗಳು) ಸುರಕ್ಷಿತವಾಗಿ ತಂದು ಭೂಮರೆಡ್ಡಿ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಟ್ಟರು.

ಮತಯಂತ್ರಗಳ ಭದ್ರತೆಗಾಗಿ ಅರೆ ಸೇನಾಪಡೆ ಮತ್ತು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರೆ ಸೇನಾಪಡೆ ಸಿಬ್ಬಂದಿ ಭದ್ರತಾ ಕೊಠಡಿಗಳ ಬಾಗಿಲು ಮುಂದೆ ನಿಂತುಕೊಂಡು ಮತಯಂತ್ರಗಳನ್ನು ಕಾಯುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಮೇ 15ರಂದು ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕಾಲೇಜು ಕಟ್ಟಡದಲ್ಲಿ ಅಗತ್ಯದಷ್ಟು ಮತ ಎಣಿಕೆಯ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

ಚಿಟಗುಪ್ಪ
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

26 May, 2018

ಬಸವಕಲ್ಯಾಣ
ಹುಲಸೂರ ರಸ್ತೆ ಸುಧಾರಣೆಗೆ ಆಗ್ರಹ

ಬಸವಕಲ್ಯಾಣ– ಹುಲಸೂರ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಶುಕ್ರವಾರ ಇಲ್ಲಿನ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಾಂತಗೌಡ...

26 May, 2018

ಬೀದರ್
ದೇಶದಲ್ಲಿ ಏಳು ಸಾವಿರ ಸೊಳ್ಳೆ ಪ್ರಭೇದ 

‘ವಿಶ್ವದಲ್ಲಿ ಹನ್ನೊಂದು ಸಾವಿರ ಸೊಳ್ಳೆ ಪ್ರಭೇದಗಳಿವೆ. ಭಾರತದಲ್ಲಿ ಏಳು ಸಾವಿರ ಪ್ರಭೇದಗಳು ಕಾಣಸಿಗುತ್ತವೆ. ಅರಣ್ಯ ಪ್ರದೇಶದಲ್ಲಿರುವ ಸೊಳ್ಳೆಗಳಿಗಿಂತ ಜನವಸತಿ ಪ್ರದೇಶ ದಲ್ಲಿರುವ ಸೊಳ್ಳೆಗಳು ಇತ್ತೀಚಿನ...

26 May, 2018
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

ಬಸವಕಲ್ಯಾಣ
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

26 May, 2018
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

ಬಸವಕಲ್ಯಾಣ
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

25 May, 2018