ಭಾವುಕರಾದ ಶ್ರೀರಾಮುಲು

ಬಾದಾಮಿಯಲ್ಲಿ ನಾನು ನೈತಿಕವಾಗಿ ಗೆದ್ದಿದ್ದೇನೆ : ಶ್ರೀರಾಮುಲು

ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಂತಿದ್ದ ಬಿಜೆಪಿ ಅಭ್ಯರ್ಥಿ  ಶ್ರೀರಾಮುಲು 1797 ಮತಗಳ ಅಂತರದಿಂದ ಸೋಲನ್ನು ಅಪ್ಪಿದ್ದು, ಬಾಗಲಕೋಟೆಯಲ್ಲಿ ನಾನು ಸೋತಿದ್ದರು ಇದು ನನ್ನ ನೈತಿಕ ಗೆಲುವು ಎಂದು ಹೇಳಿಕೆ ನೀಡಿದ್ದಾರೆ.

ಶ್ರೀರಾಮುಲು

ಬಾಗಲಕೋಟೆ: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಂತಿದ್ದ ಬಿಜೆಪಿ ಅಭ್ಯರ್ಥಿ  ಶ್ರೀರಾಮುಲು 1,797 ಮತಗಳ ಅಂತರದಿಂದ ಸೋಲನಪ್ಪಿದ್ದಾರೆ. ‘ಬಾದಾಮಿಯಲ್ಲಿ ನಾನು ಸೋತಿದ್ದರು, ನೈತಿಕವಾಗಿ ಗೆದ್ದಿದ್ದೇನೆ’ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

‘ಸಿದ್ದರಾಮಯ್ಯರ ಗೆಲುವು, ಗೆಲುವು ಅಲ್ಲ.. ನನ್ನದು ನೈತಿಕ ಗೆಲುವು. ನನ್ನ  ಸೋಲಿಗೆ  ಜೆಡಿಎಸ್  ಹೆಚ್ಚು  ಮತ ತೆಗೆದುಕೊಂಡಿದ್ದೆ ಕಾರಣ. ಜೆಡಿಎಸ್  ಅಭ್ಯರ್ಥಿ ಬಾದಾಮಿಯಲ್ಲಿ ಇಷ್ಟೊಂದು ಮತ ಪಡೆಯುತ್ತಾರೆ ಎಂದು ನಾನು ಊಹಿಸಿರಲಿಲ್ಲ’ ಎಂದರು.

‘ಬಾದಾಮಿಯಿಂದ ಗೆಲ್ಲಬೇಕೆನ್ನುವ ಆಸೆಯಿತ್ತು. ಸೋತಿರೋದಕ್ಕೆ ಭಾವುಕನಾದೆ ಅಷ್ಟೇ. ಬಾಗಲಕೋಟೆ  ಜಿಲ್ಲೆಯಲ್ಲಿ ಬಿಜೆಪಿ  ಜಯ ಸಾಧಿಸಿದೆ. ರಾಜ್ಯದಲ್ಲಿ ಬಿಜೆಪಿ  ಅಧಿಕಾರದ ಗದ್ದುಗೆ ಏರಲಿದೆ. ನಾನು ಬಾದಾಮಿಯಲ್ಲಿ ಸೋಲನ್ನು ಕಂಡಿರಬಹುದು. ಆದರೆ ಆಗಾಗ ಬಾದಾಮಿಗೆ ಭೇಟಿ ನೀಡುವೆ’ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಸೋಮವಾರ ಹೊಳಲ್ಕೆರೆ ಸಂಪೂರ್ಣ ಬಂದ್: ಶಾಸಕ ಎಂ.ಚಂದ್ರಪ್ಪ

ಸಾಲ ಮನ್ನಾಕ್ಕೆ ಆಗ್ರಹ
ಸೋಮವಾರ ಹೊಳಲ್ಕೆರೆ ಸಂಪೂರ್ಣ ಬಂದ್: ಶಾಸಕ ಎಂ.ಚಂದ್ರಪ್ಪ

26 May, 2018
ಕಾವೇರಿ ವಿವಾದದ ಸುಪ್ರೀಂ ಕೋರ್ಟ್ ತೀರ್ಪು ಟೀಕಿಸಿದ ರೈತನಿಗೆ 6 ತಿಂಗಳು ಜೈಲು

ಆಕ್ಷೇಪಾರ್ಹ ಟೀಕೆ
ಕಾವೇರಿ ವಿವಾದದ ಸುಪ್ರೀಂ ಕೋರ್ಟ್ ತೀರ್ಪು ಟೀಕಿಸಿದ ರೈತನಿಗೆ 6 ತಿಂಗಳು ಜೈಲು

26 May, 2018
ಬೆಂಗಳೂರು, ಮಂಗಳೂರು, ದಾವಣಗೆರೆ ಸೇರಿದಂತೆ 7 ಜಿಲ್ಲೆ ವ್ಯಾಪ್ತಿಯಲ್ಲಿ ಚಂಡಮಾರುತ ಪ್ರಭಾವ; ಮುನ್ನೆಚ್ಚರಿಕೆ

ಭಾರಿ ಗುಡುಗು, ಸಿಡಿಲು
ಬೆಂಗಳೂರು, ಮಂಗಳೂರು, ದಾವಣಗೆರೆ ಸೇರಿದಂತೆ 7 ಜಿಲ್ಲೆ ವ್ಯಾಪ್ತಿಯಲ್ಲಿ ಚಂಡಮಾರುತ ಪ್ರಭಾವ; ಮುನ್ನೆಚ್ಚರಿಕೆ

26 May, 2018
ಚನ್ನಗಿರಿ: ಹಿರೇಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ

ರಾಮಗಿರಿ ಸುತ್ತ ಭಾರಿ ಮಳೆ
ಚನ್ನಗಿರಿ: ಹಿರೇಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ

26 May, 2018
ತುಮಕೂರಿನಲ್ಲಿ ಕೋರ್ಟ್ ಕಟ್ಟಡದಿಂದ ಜಿಗಿದು ಕೈದಿ ಆತ್ಮಹತ್ಯೆ

ತುಮಕೂರು
ತುಮಕೂರಿನಲ್ಲಿ ಕೋರ್ಟ್ ಕಟ್ಟಡದಿಂದ ಜಿಗಿದು ಕೈದಿ ಆತ್ಮಹತ್ಯೆ

26 May, 2018