ನಾಗಠಾಣ

ಗೋವಿಂದ ಕಾರಜೋಳ ಪುತ್ರ ಸೋಲು

ಮೀಸಲು ಕ್ಷೇತ್ರವಾದ ನಾಗಠಾಣದಲ್ಲಿ ತೀವ್ರ ಸ್ಪರ್ಧೆವೊಡ್ಡಿದ್ದ ಮುಧೋಳ ಶಾಸಕ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಸ್ವಪಕ್ಷದಲ್ಲಿ ಉಂಟಾದ ಭಿನ್ನಮತದಿಂದ 5000 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ನಾಗಠಾಣ: ಮೀಸಲು ಕ್ಷೇತ್ರವಾದ ನಾಗಠಾಣದಲ್ಲಿ ಜೆಡಿಎಸ್ ಅಭ್ಯರ್ಥಿ ದೇವಾನಂದ ಚಹ್ವಾಣ ಹ್ಯಾಟ್ರಿಕ್ ಸೋಲಿನಿಂದ ಹೊರ ಬಂದು ಗೆಲುವಿನ ನಗೆ ಬೀರಿದ್ದಾರೆ.

ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆವೊಡ್ಡಿದ್ದ ಮುಧೋಳ ಶಾಸಕ ಗೋವಿಂದ ಕಾರಜೋಳ ಪುತ್ರ ಗೋವಿಂದ ಕಾರಜೋಳ ಸ್ವಪಕ್ಷದಲ್ಲಿ ಉಂಟಾದ ಭಿನ್ನಮತದಿಂದ 5000 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ವಿಠ್ಠ ಕಟಕಧೋಂಡ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದರಿಂದ ಕಾಂಗ್ರೆಸ್ ಸೇರಿ, ಅಭ್ಯರ್ಥಿಯಾಗಿ ತೀವ್ರ ಪೈಪೋಟಿ ನೀಡಿದ್ದರು. ಬಿಜೆಪಿ–ಕಾಂಗ್ರೆಸ್ ಗೊಂದಲ, ಭಿನ್ನಮತದ ಲಾಭ ಹಾಗೂ ಸತತ ಸೋಲಿನ ಅನುಕಂಪ ಪಡೆದು ದೇವಾನಂದ ಚವ್ಹಾಣ ಗೆಲುವು ಸಾಧಿಸಿದ್ದಾರೆ.

 

Comments