ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ -22

ಅಕ್ಷರ ಗಾತ್ರ

1. ಕರ್ನಾಟಕ ಸಂಗೀತದಲ್ಲಿರುವ ಮೇಳಕರ್ತ ರಾಗಗಳ ಸಂಖ್ಯೆ ಎಷ್ಟು?
ಅ) 78 ಆ) 70 ಇ) 72 ಈ) 68

2. ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ಎಲ್ಲಿದೆ?
ಅ) ಬೆಂಗಳೂರು ಆ) ಮೈಸೂರು
ಇ) ಧಾರವಾಡ ಈ) ಮುಂಬೈ

3. ಮೈಕೆಲ್ ಫೆರೀರಾ ಯಾವ ಕ್ರೀಡೆಯ ಪ್ರಸಿದ್ಧ ಆಟಗಾರ?
ಅ) ಹಾಕಿ ಆ) ಟೆನಿಸ್ ಇ) ರಗ್ಬಿ ಈ) ಬಿಲಿಯರ್ಡ್ಸ್‌

4. ವಿ. ಪಿ. ಸಿಂಗ್‍ರ ಸರ್ಕಾರ  ಜಾರಿಮಾಡಲು ಯತ್ನಿಸಿದ ‘ಮಂಡಲ್ ವರದಿ’ ಯಾವುದನ್ನು ಕುರಿತದ್ದು?
ಅ) ಮೀಸಲಾತಿ ಆ) ಆರೋಗ್ಯ ಇ) ವಿಮೆ ಈ) ರಕ್ಷಣೆ

5. ‘ಸತ್ಯಾರ್ಥಪ್ರಕಾಶ’ವನ್ನು ರಚಿಸಿದವರು ಯಾರು?
ಅ) ಸ್ವಾಮಿ ರಮಾನಂದ ಆ) ಸ್ವಾಮಿ ದಯಾನಂದ
ಇ) ಸ್ವಾಮಿ ವಿವೇಕಾನಂದ ಈ) ಸ್ವಾಮಿ ಜಪಾನಂದ

6. ಜೀವಕೋಶಗಳನ್ನು ಕುರಿತಾದ ಅಧ್ಯಯನಕ್ಕೆ ಏನೆಂದು ಹೆಸರಿದೆ?
ಅ) ಸೆಲ್ಲಾಲಜಿ ಆ) ಸೈಕಿಯಾಟ್ರಿ ಇ) ಸೈಕಾಲಜಿ ಈ) ಸೈಟಾಲಜಿ

7. ಟೆನಿಸ್ ಕ್ರೀಡೆಗೆ ಪ್ರಸಿದ್ಧವಾದ ‘ಫಾರೆಸ್ಟ್ ಹಿಲ್ಸ್’ ಎಲ್ಲಿದೆ?
ಅ) ಅಮೆರಿಕ ಆ) ಜಪಾನ್ ಇ) ಇಟಲಿ ಈ) ಇಂಗ್ಲೆಂಡ್

8. ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಎಲ್ಲಿಂದ ಆಮದಾಗುತ್ತಿತ್ತು?
ಅ) ಟರ್ಕಿ ಆ) ಚೀನಾ ಇ) ಅರೇಬಿಯಾ ಈ) ಜಪಾನ್

9. ‘ಏಂಜಲ್ ಜಲಪಾತ’ ಯಾವ ದೇಶದಲ್ಲಿದೆ?
ಅ) ಕೊಲಂಬಿಯ ಆ) ಜಾವಾ ಇ) ಫಿಲಿಪೈನ್ಸ್ ಈ) ವೆನಿಜುವೆಲಾ

10. ಇವುಗಳಲ್ಲಿ ಯಾವುದನ್ನು ‘ದ್ರವರೂಪದ ಚಿನ್ನ’ ಎನ್ನುತ್ತಾರೆ?
ಅ) ಪೆಟ್ರೋಲ್ ಆ) ಪಾದರಸ ಇ) ನಗದು ಹಣ ಈ) ಕರಗಿಸಿದ ಬೆಳ್ಳಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು:
1. ಕಾಲು 2. ಪೂರ್ಣಚಂದ್ರ ತೇಜಸ್ವಿ 3. ರಾಜ್ಯಪಾಲರು 4. ಗಂಧಕ 5. ಅರ್ಜುನ 6. ಪಾವೆಂ ಆಚಾರ್ಯ 7. ಎನ್.ಇ.ಇ.ಟಿ 8. ಹುಬ್ಬಳ್ಳಿ 9. ರವಿಶಂಕರ ಪ್ರಸಾದ್ 10. ಮನಿಲಾ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT