ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಾವತಿ ಶಾಲೆಗೆ ಮೊದಲ ಬಹುಮಾನದ ಗರಿ

ಸ್ವಚ್ಛ ಭಾರತ ಕುರಿತಾದ ಕ್ವಿಜ್: ವಿಜೇತರಿಗೆ ಪ್ರಮಾಣಪತ್ರ ವಿತರಣೆ
Last Updated 19 ಸೆಪ್ಟೆಂಬರ್ 2018, 16:21 IST
ಅಕ್ಷರ ಗಾತ್ರ

ಬಾಗಲಕೋಟೆ:ಜಿಲ್ಲಾಡಳಿತ, ನಗರಸಭೆ ಹಾಗೂ ಬೆಂಗಳೂರಿನ ವಾಲ್‌ನೆಟ್ ಸಲ್ಯೂಷನ್ಸ್ ಸಹಯೋಗದಲ್ಲಿ ಬುಧವಾರ ಇಲ್ಲಿನ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯ 8ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ಸ್ವಚ್ಛತೆಯ ಅರಿವಿನ ಬಗ್ಗೆ ಕ್ವಿಜ್ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ರಬಕವಿಯ ಪದ್ಮಾವತಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳಾದ ಗಗನ್ ಎಸ್.ಕಡಪಟ್ಟಿ, ವಿದ್ಯಾಸಾಗರ ಎಸ್.ಗುಂಡಿ ₹10 ಸಾವಿರ ನಗದು ಬಹುಮಾನದೊಂದಿಗೆ ‍ಪ್ರಶಸ್ತಿ ತಮ್ಮದಾಗಿಸಿಕೊಂಡರು.

ದ್ವಿತೀಯ ಸ್ಥಾನವನ್ನು ಕಮತಗಿಯ ಹುಚ್ಚೇಶ್ವರ ಪಿಯು ಕಾಲೇಜು ವಿದ್ಯಾರ್ಥಿಗಳಾದ ಚೈತ್ರಾ ಎಂ.ಸುರೇಬಾನ, ಕಾವೇರಿ ಎನ್.ಹುಲ್ಲೂರ ₹6 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದರು.

ತೃತೀಯ ಬಹುಮಾನ ಬಾಗಲಕೋಟೆಯ ಬಿ.ವಿ.ವಿ ಸಂಘದ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕೃಪಾಲ ಡಿ.ಕಿಲ್ಲೇದ, ಸಿದ್ದಲಿಂಗರಾಜು ಎ.ದೇವನಗಾಂವಿ ಪಾಲಾಯಿತು. ₹4 ಸಾವಿರ ನಗದು ಬಹುಮಾನ ಜೇಬಿಗಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT