ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಗಡಿಯಲ್ಲಿ ಗಣಿಗಾರಿಕೆ: ಚೀನಾ ಸಮರ್ಥನೆ

Last Updated 21 ಮೇ 2018, 19:28 IST
ಅಕ್ಷರ ಗಾತ್ರ

ಬೀಜಿಂಗ್‌: ಅಮೂಲ್ಯ ಲೋಹಗಳ ನಿಕ್ಷೇಪ ಪತ್ತೆಯಾಗಿರುವ ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ಚೀನಾ ಬಲವಾಗಿ ಸಮರ್ಥಿಸಿಕೊಂಡಿದೆ.

‘ಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಚೀನಾಗೆ ಸೇರಿದೆ. ಈ ಪ್ರದೇಶದ ಮೇಲೆ ಸಾರ್ವಭೌಮ ಅಧಿಕಾರ ಹೊಂದಿದೆ.  ಹೀಗಾಗಿ, ಭೂವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಸುವುದು ನಮ್ಮ ಹಕ್ಕು’ ಎಂದು ಚೀನಾ ತಿಳಿಸಿದೆ.

ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಲ್ಹುಂಝೆ ಗ್ರಾಮದಲ್ಲಿ ಚಿನ್ನ, ಬೆಳ್ಳಿ ಹಾಗೂ ಇತರ ಅಮೂಲ್ಯ ಲೋಹಗಳ ನಿಕ್ಷೇಪ ಪತ್ತೆ ಮಾಡಿದ್ದ ಚೀನಾ, ಈಗ ಗಣಿಗಾರಿಕೆ ಆರಂಭಿಸಿದೆ.

‘ಚೀನಾ ತನ್ನ ಸುಪರ್ದಿಯಲ್ಲಿರುವ ಭೂಭಾಗದಲ್ಲಿ ನಿಯಮಿತವಾಗಿ ನಿಕ್ಷೇಪಗಳ ಅನ್ವೇಷಣೆ, ವೈಜ್ಞಾನಿಕ ಸಂಶೋಧನೆಯಂತಹ ಚಟುವಟಿಕೆ ಕೈಗೊಳ್ಳುತ್ತದೆ.
ಗಡಿಭಾಗದಲ್ಲಿ ಗಣಿಗಾರಿಕೆ ಕುರಿತ ವಿಷಯಗಳನ್ನು ವೈಭವೀಕರಿಸಿ ಪ್ರಕಟಿಸುವುದನ್ನು ಮಾಧ್ಯಮಗಳು ಬಿಡಬೇಕು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT