ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳಾ ತಂಡಕ್ಕೆ ಜಯ

Last Updated 21 ಮೇ 2018, 19:32 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಭಾರತದ ಮಹಿಳಾ ತಂಡವು ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ನೇತೃತ್ವದ ತಂಡವು ಆಸ್ಟ್ರೇಲಿಯಾ ತಂಡವನ್ನು 4–1ರಿಂದ ಸೋಲಿಸಿತು.

ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ಸೈನಾ ಅವರು ಸುವಾನ್‌ ಯು ವೆಂಡಿ ಅವರನ್ನು 21–14, 21–19ರಿಂದ ಮಣಿಸಿ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ಎಸ್‌. ರಾಮ್‌ ಜೋಡಿಯು 13–21, 16–21ರಿಂದ ಆಸ್ಟ್ರೇಲಿಯಾದ ಗ್ರೋನ್ಯಾ ಸೊಮರ್‌ವಿಲ್ಲೆ ಹಾಗೂ ರೆನುಗಾ ವೀರನ್‌ ಜೋಡಿಗೆ ಶರಣಾಯಿತು.

ಮುಂದಿನ ಪಂದ್ಯದಲ್ಲಿ ವೈಷ್ಣವಿ ಜಕ್ಕಾರೆಡ್ಡಿ ಅವರು ಜೆನಿಫರ್‌ ಟ್ಯಾಮ್‌ ಅವರನ್ನು 21–17, 21–13ರಿಂದ ಸೋಲಿಸಿದರು. ಇದರೊಂದಿಗೆ ಭಾರತವು 2–1ರ ಮುನ್ನಡೆ ಸಾಧಿಸಿತು.

ಡಬಲ್ಸ್‌ ವಿಭಾಗದ ಎರಡನೇ ಪಂದ್ಯದಲ್ಲಿ ಭಾರತದ ಸನ್ಯೋಗಿತಾ ಘೋರ್ಪಡೆ ಹಾಗೂ ಪ್ರಜಕ್ತಾ ಸಾವಂತ್‌ ಜೋಡಿಯು ಆಸ್ಟ್ರೇಲಿಯಾದ ಲೂಯಿಸಾ ಮಾ ಹಾಗೂ ಆ್ಯನ್‌ ಲೂಯಿಸ್‌ ಸ್ಲೀ ಜೋಡಿಯನ್ನು 21–19, 21–11ರಿಂದ ಸೋಲಿಸಿತು.

ಕೊನೆಯ ಪಂದ್ಯದಲ್ಲಿ ಅನುರಾ ಪ್ರಭುದೇಸಾಯಿ ಅವರು ಜೆಸಿಲಿ ಫಂಗ್‌ ಅವರನ್ನು 21–6, 21–7ರಿಂದ ಮಣಿಸಿದರು.

ಭಾರತದ ಮಹಿಳಾ ತಂಡವು ಬುಧವಾರ ಜಪಾನ್‌ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT