ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಗಳಲ್ಲಿ ರಾಷ್ಟ್ರಧ್ವಜಾರೋಹಣ

ಚೀನಾ ಇಸ್ಲಾಮಿಕ್‌ ಅಸೋಸಿಯೇಷನ್‌ ಸೂಚನೆ
Last Updated 21 ಮೇ 2018, 19:36 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದಲ್ಲಿರುವ ಎಲ್ಲಾ ಮಸೀದಿಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು. ಸಂವಿಧಾನವನ್ನು ಬೋಧಿಸಬೇಕು ಎಂದು ಚೀನಾ ಇಸ್ಲಾಮಿಕ್‌ ಅಸೋಸಿಯೇಷನ್‌ ಹೇಳಿದೆ.

‘ಸಮಾಜವಾದದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ರಾಷ್ಟ್ರದ ಪರಿಕಲ್ಪನೆ ಮೂಡಿಸಿ, ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು’ ಎಂಬ ಅಸೋಸಿಯೇಷನ್‌ನ ಹೇಳಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಚೀನಾದಲ್ಲಿ 2ಕೋಟಿ ಮುಸ್ಲಿಮರಿದ್ದು, 35 ಸಾವಿರ ಮಸೀದಿಗಳಿವೆ.

‘ಈ ನಡೆಯಿಂದ ಸಮಾಜವಾದಿ ತತ್ವ ಆಧರಿತ ಸಮಾಜ ಹಾಗೂ ಧಾರ್ಮಿಕತೆಯ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಸರ್ಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

‘ದೇಶದ ಕಾನೂನು ಕುರಿತು ಮಸೀದಿಗಳಲ್ಲಿ ಬೋಧಿಸಬೇಕು. ಈ ರೀತಿ ಮಾಡುವುದರಿಂದ ಧಾರ್ಮಿಕ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಜೊತೆಗೆ ಕಾನೂನಿಗೆ ಅನುಗುಣವಾಗಿ ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುವುದು’ ಎಂದೂ ಅಸೋಸಿಯೇಷನ್‌ ಅಭಿಪ್ರಾಯಪಟ್ಟಿದೆ.

ಅಸೋಸಿಯೇಷನ್‌ನ ಈ ನಡೆಯನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿ
ಸುವುದು ಧರ್ಮ ಮತ್ತು ರಾಜಕೀಯ ಬೆರಸಬಾರದು ಎಂಬ ತತ್ವಕ್ಕೆ ವಿರುದ್ಧವಲ್ಲವೇ ಎಂದಿದ್ದಾರೆ. ಆದರೆ, ಧಾರ್ಮಿಕ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸುವುದನ್ನು ಬೆಂಬಲಿಸಿರುವ ಕೆಲವು ತಜ್ಞರು, ‘ರಾಷ್ಟ್ರ ಧ್ವಜ ದೇಶವನ್ನು ಪ್ರತಿನಿಧಿಸುತ್ತದೆಯೇ ಹೊರತು ರಾಜಕೀಯ ಪಕ್ಷವನ್ನಲ್ಲ. ಮಸೀದಿಗಳಲ್ಲಿ ಧ್ವಜಾರೋಹಣವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದು’ ಎಂದಿದ್ದಾರೆ.

ಚೀನಾದಲ್ಲಿ 2ಕೋಟಿ ಮುಸ್ಲಿಮರಿದ್ದು, 35 ಸಾವಿರ ಮಸೀದಿಗಳಿವೆ

ಕಾನೂನು ಕುರಿತು ಮಸೀದಿಗಳಲ್ಲಿ ಬೋಧಿಸಲು ಸೂಚನೆ

ಸಾಮಾಜಿಕ ಜಾಲತಾಣ ಗಳಲ್ಲಿ ಕೆಲವರ ಆಕ್ಷೇಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT