ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಕನ್ನಡಿಗರ ಶುಭಾರಂಭ

50ಕೆ ಟೂರ್ನಿ: ಪ್ರಿ ಕ್ವಾರ್ಟರ್‌ ಫೈನಲ್‌ಗೆ ಶಾಹುಲ್‌, ಅಲೋಕ್‌
Last Updated 21 ಮೇ 2018, 19:42 IST
ಅಕ್ಷರ ಗಾತ್ರ

ದಾವಣಗೆರೆ: ಅಗ್ರ ಶ್ರೇಯಾಂಕದ ಆಟಗಾರ, ಕರ್ನಾಟಕದ ಶಾಹುಲ್‌ ಅನ್ವರ್‌ 6–2, 6–0ರಲ್ಲಿ ರಾಜ್ಯದ ಸಚಿನ್‌ ವಸಂತಕುಮಾರ್‌ ಅವರನ್ನು ಸುಲಭವಾಗಿ ಮಣಿಸುವ ಮೂಲಕ ಸೋಮವಾರ ಆರಂಭಗೊಂಡ ಪುರುಷರ 50ಕೆ ಟೆನಿಸ್‌ ಟೂರ್ನಿಯ ಪ್ರಿ–ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಶ್ರಯದಲ್ಲಿ ಜಿಲ್ಲಾ ಟೆನಿಸ್‌ ಸಂಸ್ಥೆ ಹಮ್ಮಿಕೊಂಡಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಶಾಹುಲ್‌ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದರು.

ಮೊದಲ ಸೆಟ್‌ ಅನ್ನು 6–2ರಲ್ಲಿ ಗೆದ್ದ ಅವರು, ಎರಡನೇ ಸೆಟ್‌ನಲ್ಲಿ ಮೂರು ಬ್ರೇಕ್‌ ಪಾಯಿಂಟ್‌ ಸೇರಿ 6–0ರಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಫಲಿತಾಂಶ:

ರಾಜ್ಯದ ಅಲೋಕ್‌ ಆರಾಧ್ಯಗೆ 6–1, 7–6ರಲ್ಲಿ ತಮಿಳುನಾಡಿನ ಲಕ್ಷ್ಮಣ ರಾಜ್‌ ವಿರುದ್ಧ ಗೆಲುವು

ವಿನಾಯಕ ಕುಂಬಾರಗೆ 6–4, 6–0ರಲ್ಲಿ ರಾಮಪ್ರಸಾದ್‌ ಕುಲಕರ್ಣಿ ಎದುರು; ಅಮರ್‌ ದರಿಯಣ್ಣವರ್‌ ಅವರಿಗೆ 6–1, 6–2ರಲ್ಲಿ ತಮಿಳುನಾಡಿನ ವಿ. ರೋಹಿತ್‌ ವಿರುದ್ಧ; ದರ್ಶನ್‌ ಶ್ರೀನಿವಾಸ್‌ಗೆ 6–3, 6–1ರಲ್ಲಿ ಮಹಾರಾಷ್ಟ್ರದ ಕಪೀಶ ಖಂಡಗೆ ಎದುರು; ರಿಭವ್‌ ರವಿಕಿರಣ್‌ಗೆ 6–3, 6–0ರಲ್ಲಿ ಎ.ದೀಪಕ್‌ ವಿರುದ್ಧ; ಎಂ. ಧೀಮಂತ್‌ಗೆ 6–4, 4–6, 6–7, 7–6(7–5)ರಲ್ಲಿ ನವೀನ್‌ ನಿಶಾಂತ್‌ ಎದುರು; ವಿನಯಕುಮಾರ್‌ಗೆ 6–2, 6–2ರಲ್ಲಿ ತಮಿಳುನಾಡಿನ ತರುಣ್‌ ಕುಮಾರವೇಲು ವಿರುದ್ಧ ಜಯ.

ತಮಿಳುನಾಡಿನ ದೇವ್‌ ಸಿನ್ಹಾ 3–6, 6–3, 6–2ರಲ್ಲಿ ಮಹಾರಾಷ್ಟ್ರದ ಸಾಹಿಲ್‌ ಕಿಶೋರ್‌ ಧನವಾಣಿ ಅವರನ್ನು; ಒಡಿಶಾದ ಆದಿತ್ಯ ಸಾತಪತಿ 6–2, 6–2ರಲ್ಲಿ, ರಾಜ್ಯದ ಆಯುಷ್‌ ಪಿ. ಭಂಡಾರಿ ಅವರನ್ನು; ತೆಲಂಗಾಣದ ಹೇಮಂತ ಕುಮಾರ್‌ 6–0, 6–1ರಲ್ಲಿ ಕರ್ನಾಟಕದ ಗಿರೀಶ ದೇಶಪೇಟೆ ಅವರನ್ನು; ತೆಲಂಗಾಣದ ರೋಹಿತ್‌ ಕೃಷ್ಣಾ 6–1, 6–2ರಲ್ಲಿ ಕರ್ನಾಟಕದ ಕೃತಿಕ್‌ ಎಂ.ಎಸ್‌ ಅವರನ್ನು; ಆಂಧ್ರಪ್ರದೇಶದ ಉಮೇರ್‌ ಶೇಖ್‌ 6–1, 6–2ರಲ್ಲಿ ಮಧ್ಯಪ್ರದೇಶದ ಜೇಮ್ಸ್‌ ಅಲ್ಬರ್ಟ್‌ ಅವರನ್ನು; ತಮಿಳುನಾಡಿನ ವಿಮಲ್‌ರಾಜ್‌ 6–2, 6–0ರಲ್ಲಿ ರಾಜ್ಯದ ಸಿ. ಸಚಿನ್‌ ಅವರನ್ನು; ಮಹಾರಾಷ್ಟ್ರದ ಹಿತೇಶ್‌ ಶರ್ಮ 6–4, 6–1ರಲ್ಲಿ ರಾಜ್ಯದ ಟಿ. ಅನುರಾಗ್‌ ಅವರನ್ನು; ಮಹಾರಾಷ್ಟ್ರದ ಕಲ್ಮೇಶ್‌ 6–4, 6–1ರಲ್ಲಿ ಕರ್ನಾಟಕದ ಅಭೋದ್‌ ಕುಂದ್ರಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT