ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೆಂಡಿಂಗ್ ಆದ who is Radhika?

Last Updated 22 ಮೇ 2018, 9:39 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಕ್ಷಣಗಣನೆ ಆರಂಭವಾಗಿದ್ದಾರೆ ಅತ್ತ ನಟಿ ರಾಧಿಕ ಚಿತ್ರಗಳ ಹುಡುಕಾಟ ಗೂಗಲ್‌ನಲ್ಲಿ ಹವಾ ಎಬ್ಬಿಸಿದೆ.

ಗೂಗಲ್‌ನಲ್ಲಿ ರಾಧಿಕ ಕುರಿತ ಮಾಹಿತಿ ಹಾಗೂ ಚಿತ್ರಗಳ ಟ್ರೆಂಡಿಂಗ್ ಶುರುವಾಗಿದೆ.

ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರಾಧಿಕ ನಡುವಿನ ಸಂಬಂಧವೇ ಈ ಟ್ರೆಂಡಿಂಗ್‌ಗೆ ಕಾರಣವಾಗಿದೆ.

who is Radhika? ಎಂಬುದು ಸದ್ಯದ ಕೀವರ್ಡ್ ಆಗಿದೆ. ಗೂಗಲ್‌ನಲ್ಲಿ ಹಲವರು who is Radhika? ಎಂದು ಸರ್ಚ್ ಮಾಡುವ ಮೂಲಕ ರಾಧಿಕ ಅವರನ್ನು ಹುಡುಕಲು ಆರಂಭಿಸಿದ್ದಾರೆ. ಇದು ಗೂಗಲ್‌ನಲ್ಲಿ ಟ್ರೆಂಡಿಂಗ್‌ ಆಗಿದೆ.

2000ನೇ ವರ್ಷದಲ್ಲಿ ಚಂದನವನಕ್ಕೆ ರಾಧಿಕ ಅಡಿಯಿಟ್ಟರು. ಸಾಮಾಜಿಕ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ರಸಿಕರ ಮನ ಗೆದಿದ್ದರು. ನಟ ಶಿವರಾಜ್‌ ಕುಮಾರ್ ಜತೆ ತಂಗಿಯಾಗಿ ನಟಿಸಿದ್ದು ರಾಧಿಕಗೆ ಜನಪ್ರಿಯತೆ ತಂದು ಕೊಟ್ಟಿತ್ತು. ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದ ರಾಧಿಕ ನಷ್ಟ ಅನುಭವಿಸಿದ್ದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಜನರು ರಾಧಿಕಾ ಅವರ ಹೆಸರನ್ನು ಸರ್ಚ್ ಮಾಡುತ್ತಿದ್ದಾರೆ. ರಾಧಿಕಾ ಯಾರು (Who is Radhika?) ಎಂದು ಹುಡುಕಾಟ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT