ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲೂ ಡೇಟಿಂಗ್‌ ಸೇವೆ

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ತನ್ನ ಬಳಕೆದಾರರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಅದರಲ್ಲೂ ಏಕಾಂಗಿಯಾಗಿರುವ ಯುವಕ, ಯುವತಿಯರಿಗೆ ಈ ಸುದ್ದಿ ಖುಷಿ ತಂದಿರುವುದರಲ್ಲಿ ಎರಡು ಮಾತಿಲ್ಲ! ಯಾಕೆಂದರೆ ಫೇಸ್‌ಬುಕ್ ಇನ್ನು ಮುಂದೆ ಡೇಟಿಂಗ್‌ ಸೇವೆಯನ್ನು ನೀಡಲಿದೆ! ಹೌದು ಈ ವರ್ಷದ ಅಂತ್ಯದ ವೇಳೆಗೆ ಫೇಸ್‌ಬುಕ್ ಈ ಹೊಸ ಅಪ್ಲಿಕೇಷನ್‌ ಅನಾವರಣ ಮಾಡಲಿದೆ.

ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋಸ್‌ನಲ್ಲಿ ನಡೆದ ‘ಫೇಸ್‌ಬುಕ್ ಎಫ್‌8’ ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಝುಕರ್‌ಬರ್ಗ್ ಅವರು ಡೇಟಿಂಗ್ ಫೀಚರ್ ಪ್ರಕಟಿಸಿದರು. ಇದು ಮೊಬೈಲ್‌ ಆ್ಯಪ್ ಹಾಗೂ ವಿಂಡೊಸ್‌ ಮತ್ತು ಐಒಎಸ್ ಮಾದರಿಯಲ್ಲೂ ಲಭ್ಯವಿರಲಿದೆ. ಆರಂಭಿಕ ಹಂತದಲ್ಲಿ ಡೇಟಿಂಗ್ ಪೀಚರ್ ಅನ್ನು ಮೊಬೈಲ್ ಆ್ಯಪ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ.

ಡೇಟಿಂಗ್ ಸೇವೆ ನೀಡುವ ಮೂಲಕ ಯುವ ಜನರನ್ನು ಹೆಚ್ಚು ಹೆಚ್ಚು ಆರ್ಕರ್ಷಿಸುವುದು ‌ ಫೇಸ್‌ಬುಕ್ ಗುರಿ ಎನ್ನಲಾಗಿದೆ. ಸದ್ಯಕ್ಕೆ, ಫೇಸ್‌ಬುಕ್‌ನಲ್ಲಿ  20 ಕೋಟಿ ಬಳಕೆದಾರರು ಅವಿವಾಹಿತರು ಇದ್ದಾರೆ ಎಂದು ಅಂದಾಜಿಸಲಾಗಿದೆ.  ಹೀಗಾಗಿ ಆದಷ್ಟು ಬೇಗ ಈ ಸೇವೆಯನ್ನು ಜಾರಿಗೆ ತಂದರೆ ಬಳಕೆದಾರರನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದು ಮಾರ್ಕ್‌ ಜುಕರ್‌ಬರ್ಗ್ ಅವರ ಲೆಕ್ಕಚಾರವಾಗಿದೆ.

ಮೊಬೈಲ್‌ ಆ್ಯಪ್‌ನಲ್ಲಿ ಫೇಸ್‌ಬುಕ್ ಹೊಸ ಫೀಚರ್ ನೀಡಲಿದೆ. ಇದರ ಮೂಲಕ ಬಳಕೆದಾರರು ಡೇಟಿಂಗ್ ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳಬಹುದು. ಪ್ರೊಫೈಲ್ ಹೊಂದಿದವರ ಆಯ್ಕೆ, ಆದ್ಯತೆಗಳಿಗೆ ಹೊಂದಾಣಿಕೆಯಾಗುವ ವ್ಯಕ್ತಿಯನ್ನು ಫೇಸ್‌ಬುಕ್ ಡೇಟಿಂಗ್‌ಗೆ ಶಿಫಾರಸು ಮಾಡುತ್ತದೆ. ಈಗಾಗಲೇ ಫೇಸ್‌ಬುಕ್‌ ಸ್ನೇಹಿತರ ಪಟ್ಟಿಯಲ್ಲಿರುವವರನ್ನು ಹೊರತುಪಡಿಸಿ ಇತರರನ್ನು ಶಿಫಾರಸು ಮಾಡಲಿದೆ. ಫೇಸ್‌ಬುಕ್‌ನ ಬಳಕೆದಾರರು ಕ್ರಿಯೇಟ್ ಮಾಡಿರುವ ಡೇಟಿಂಗ್ ಪ್ರೊಫೈಲ್ ಅವರ ಸ್ನೇಹಿತರಿಗೆ ಕಾಣಿಸುವುದಿಲ್ಲ ಹಾಗೇ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎನ್ನಲಾಗಿದೆ.

ಅಮೆಜಾನ್‌: ಧ್ವನಿ ಬಳಸಿ ಖರೀದಿ ಸೌಲಭ್ಯ

ಭಾರತದಲ್ಲಿ ಆನ್‌ಲೈನ್‌ ಮೂಲಕ ಸರಕುಗಳನ್ನು ಮಾರಾಟ ಮಾಡುವ  ಇ–ಕಾಮರ್ಸ್‌ನ ದೈತ್ಯ ಕಂಪನಿ  ಅಮೆಜಾನ್, ಇದೀಗ ಧ್ವನಿ ಮೂಲಕ ಆದೇಶ ನೀಡಿ ಖರೀದಿ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ.

ಗೃಹ ಬಳಕೆಯ ಉತ್ಪನ್ನಗಳನ್ನು ಧ್ವನಿ ಕಮಾಂಡ್ ಮೂಲಕ ಖರೀದಿ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರಿಗೆ ಸಮಯ ಉಳಿತಾಯವಾಗಲಿದೆ ಎಂದು ಅಮೆಜಾನ್‌ ತಿಳಿಸಿದೆ. ಬಳಕೆದಾರರು ತಮ್ಮ ಖರೀದಿಯ ವಸ್ತುವನ್ನು ಅಮೆಜಾನ್ ಎಕೋ ಸಾಧನಕ್ಕೆ ವಾಯ್ಸ್ ಕಮಾಂಡ್ ಮೂಲಕ ಹೇಳಿದರೆ ಅದು ಆ ವಸ್ತುವನ್ನು ಬುಕ್ ಮಾಡುತ್ತದೆ. ಹಾಗೇ ಹಣ ಪಾವತಿಯ ವಿಧಾನವನ್ನು ಅದು ಕೇಳುತ್ತದೆ. ಇದರಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್‌ ಕಾರ್ಡ್, ನೇರ ಪಾವತಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಈ ಸೌಕರ್ಯ ಗೃಹಬಳಕೆಯ ಸೀಮಿತ ಸರುಕುಗಳಿಗೆ ಮಾತ್ರ ಎಂದು ಕಂ‍ಪನಿ ಹೇಳಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT