ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಟ್ಯಾಕ್ಸಿಗೆ ಐಷಾರಾಮಿ ನಿಲ್ದಾಣ ‘ಸ್ಕೈಪೋರ್ಟ್’

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನಕ್ಕೆ ಎಲ್ಲೆ ಎಲ್ಲಿದೆ? ಈ ಪ್ರಶ್ನೆಯನ್ನು ಪದೇ ಪದೇ ನೆನಪಿಸುವ ಅದೆಷ್ಟೋ ಆವಿಷ್ಕಾರಗಳು ಪ್ರತಿದಿನವೂ ನಡೆಯುತ್ತಿರುತ್ತವೆ. ಒಂದಕ್ಕಿಂತ ಮತ್ತೊಂದು ಹೆಚ್ಚು ಎನ್ನುವಂಥ ಹೊಸ ಹೊಸ ಆಲೋಚನೆಗಳು ತಂತ್ರಜ್ಞಾನ ಲೋಕದಲ್ಲಿ ಸುಳಿಯುತ್ತಿರುತ್ತವೆ. ಅದಕ್ಕೆ ಸದ್ಯದ ಉದಾಹರಣೆ ಎಂದರೆ ಸ್ಕೈಪೋರ್ಟ್.

ಈಗ ಏರ್‌ಟ್ಯಾಕ್ಸಿ ವಿಚಾರ ಎಲ್ಲೆಲ್ಲೂ ಸುದ್ದಿಯಾಗಿದೆ. ಆದರೆ ಏರ್‌ಟ್ಯಾಕ್ಸಿ ಪರಿಚಯಕ್ಕಿಂತ ಮೊದಲು ಹೆಲಿಕಾಪ್ಟರ್‌ನಂಥ ಆ ಟ್ಯಾಕ್ಸಿಗಳನ್ನು ಲ್ಯಾಂಡ್ ಮಾಡುವುದಾದರೂ ಎಲ್ಲಿ ಎಂಬ ಪ್ರಶ್ನೆ ಎದುರಾಗಿತ್ತು. ನಗರ ಪ್ರದೇಶದಲ್ಲಿ ಈ ಒಂದು ವಿಷಯವೇ ಏರ್‌ಟ್ಯಾಕ್ಸಿ ಪರಿಕಲ್ಪನೆಯ ಹಿನ್ನಡೆಗೂ ಕಾರಣವಾಗಬಹುದು ಎಂಬ ತಜ್ಞರ ಅಂದಾಜಿತ್ತು.

ಆದರೆ 2020ರ ಹೊತ್ತಿಗೆ ಏರ್‌ಟ್ಯಾಕ್ಸಿಗಳನ್ನು ಆಗಸಕ್ಕೆ ಬಿಡುವ ತಯಾರಿಯಲ್ಲಿರುವ ಊಬರ್ ಏರ್ ಸಂಸ್ಥೆಗೆ ಈ ಸ್ಕೈಪೋರ್ಟ್‍ನ ಆಲೋಚನೆ ಹೊಳೆಯಿತು. ಕೆಲವೇ ತಿಂಗಳ ಹಿಂದೆ ಈ ಟ್ಯಾಕ್ಸಿಗಳ ನಿಲ್ದಾಣ ‘ಸ್ಕೈಪೋರ್ಟ್’ ಪರಿಕಲ್ಪನೆಯಲ್ಲಿ ಪ್ರಾಜೆಕ್ಟ್‌ಗಳನ್ನು ಆಹ್ವಾನಿಸಿತು ಸಂಸ್ಥೆ.

ಕೊನೆಗೆ ಕಾರ್ಗನ್ ಎಂಬ ವಿನ್ಯಾಸ ಸಂಸ್ಥೆ ಆಯ್ಕೆಯಾಗಿದ್ದು, ಸ್ಕೈಪೋರ್ಟ್‍ನ ಮಾದರಿಯನ್ನು ಬಿಡುಗಡೆಗೊಳಿಸಿದೆ. ಮೊನ್ನೆಮೊನ್ನೆ ನಡೆದ ಎಲಿವೇಟ್ 2018ರ ಸಮಾವೇಶದಲ್ಲಿ ಅದರ ಮಾದರಿಯನ್ನು ಪರಿಚಯಿಸಲಾಗಿದೆ, ಆ ಪರಿಕಲ್ಪನೆಯ ವಿವರಗಳೇ ಅಚ್ಚರಿ ತರುವಂತಿದೆ.

ಜನನಿಬಿಡ ನಗರ ಪ್ರದೇಶಗಳಲ್ಲಿನ ಸ್ಥಳಾಭಾವವನ್ನು ಗಮನದಲ್ಲಿಟ್ಟುಕೊಂಡೇ ಎತ್ತರದಲ್ಲಿ ಸ್ಕೈಪೋರ್ಟ್ ರೂಪಿಸಲಾಗುತ್ತದೆ. ಒಂದು ಗಂಟೆಗೆ 4000 ಪ್ರಯಾಣಿಕರನ್ನು ಸಾಗಿಸಲು ಈ ನಿಲ್ದಾಣ ಅನುವು ಮಾಡಿಕೊಡಲಿದೆ. ಒಟ್ಟು ನಾಲ್ಕು ಭಾಗಗಳಾಗಿ ಸ್ಕೈಪೋರ್ಟ್ ವಿಂಗಡನೆಯಾಗಿದೆ. ಮೊದಲನೆಯದಾಗಿ ಪ್ರಯಾಣಿಕರಿಗೆ ನೆರವಾಗುವ ಕನೆಕ್ಷನ್ ಪ್ಲಾಜಾ. ಹೈಪೊಥೆಟಿಕಲ್ ಸ್ಟೇಷನ್ ಇದ್ದು, ಅಲ್ಲಿ ಗ್ರಾಹಕರ ಅನುಕೂಲಕ್ಕೆ ರೆಸ್ಟೊರೆಂಟ್, ಶಾಪಿಂಗ್ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿರುತ್ತದೆ. ‘ಬ್ರಿಜ್’ ಎಂಬ ಹಂತ ಮೂರನೇಯದ್ದು, ಕೊನೆಯದಾಗಿ ಏರ್‌ಟ್ಯಾಕ್ಸಿಗಳ ನಿಲ್ದಾಣವಾದ ಫ್ಲೈಟ್ ಡೆಕ್. ಲ್ಯಾಂಡಿಂಗ್, ಟೇಕಾಫ್‍ಗಳ ಸಂಖ್ಯೆಯನ್ನಾಧರಿಸಿ ನಿಲ್ದಾಣದ ಎಲ್ಲಾ ಹಂತವೂ ನಿಯಂತ್ರಿತಗೊಳ್ಳುತ್ತದೆ.

ಸೌಲಭ್ಯಗಳ ವಿಚಾರದಲ್ಲಷ್ಟೇ ಅಲ್ಲ, ಗಂಟೆಗೆ 180 ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿರುವುದು ದೊಡ್ಡ ಸವಾಲೇ.

ಇನ್ನು ಇದರ ಪ್ರಾಯೋಗಿಕ ತಯಾರಿ ನಡೆಯುತ್ತಿದ್ದು, 2020ರ ವೇಳೆಗೆ ಆಕಾಶದಲ್ಲೂ ಟ್ಯಾಕ್ಸಿ ಸೇವೆ ಶುರುವಾಗುವ ಸೂಚನೆಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT