ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ತಳಿ ವೈವಿಧ್ಯತಾ ಮೇಳ

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ ಅಶ್ರಯದಲ್ಲಿ ಮೇ 24 ರಿಂದ 26ರ ತನಕ ಮಾವು ಮತ್ತು ಹಲಸಿನ ಹಣ್ಣಿನ ತಳಿ ವೈವಿಧ್ಯತಾ ಮೇಳವನ್ನು ಐಐಎಚ್ಆರ್ ಸಂಸ್ಥೆಯ ಅವರಣದಲ್ಲಿ ಆಯೋಜಿಸಿದೆ.

‘ಮೇಳದಲ್ಲಿ ಸುಮಾರು 350ಕ್ಕೂ ಹೆಚ್ಚಿನ ಮಾವಿನ ತಳಿ ಮತ್ತು 85ಕ್ಕೂ ಹೆಚ್ಚಿನ ಹಲಸಿನ ತಳಿಗಳನ್ನು ಪ್ರದರ್ಶನ ಮಾಡಲಾಗುವುದು. ತಳಿ ಮತ್ತು ಹಣ್ಣುಗಳ ಮಾರಾಟವಿದೆ. ತಳಿಗಳ ಬಗ್ಗೆ ಅನೇಕ ವಿದ್ವಾಂಸರು ಉಪನ್ಯಾಸಗಳನ್ನು ನೀಡುತ್ತಿದ್ದು ರೈತರು ಇದರ ಉಪಯೋಗ ಪಡೆದು ಕೊಳ್ಳಬಹುದು. ತಳಿಗಳನ್ನು ಉಪಯೋಗಿಸಿ ಕೊಳ್ಳುವ ರೀತಿ, ಅವುಗಳನ್ನು ಬೆಳೆಸುವ ವಿಧಿ ವಿಧಾನಗಳನ್ನು ಈ ಮೇಳದಲ್ಲಿ ಹೇಳಿ ಕೊಡಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಎಂ.ಆರ್.ದಿನೇಶ್ ತಿಳಿಸಿದರು.

‘ಮೇಳದಲ್ಲಿ ರೈತರೇ ಅಭಿವೃದ್ಧಿಪಡಿಸಿರುವ ವಿವಿಧ ತಳಿಗಳನ್ನು ಪ್ರದರ್ಶನ ಮಾಡಲಾಗುವುದು. ಸ್ವತಃ ರೈತರೇ ತಾವು ಅಭಿವೃದ್ಧಿ ಪಡಿಸಿದ ತಳಿಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡುತ್ತಾರೆ. ನಮ್ಮ ರೈತರಲ್ಲಿ ತಳಿಗಳ ಬಗ್ಗೆ ವಿಶೇಷ ಜ್ಞಾನವು ಇದರಿಂದ ಲಭ್ಯವಾಗುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ರೈತರು ಪಾಲ್ಗೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT