ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಯೇ ಅಭಿನಯ ಕಲಿಸಿತು...

Last Updated 24 ಮೇ 2018, 19:30 IST
ಅಕ್ಷರ ಗಾತ್ರ

‘ರಾಜ ಲವ್ಸ್‌ ರಾಧೆ’ ಸಿನಿಮಾದಲ್ಲಿ ವೀಕ್ಷಕರು ಮುದ್ದಾದ ಮುಖವೊಂದನ್ನು ಕಾಣಬಹುದು. ಈ ಮುದ್ದು ಮುಖದ ನಟಿಯನ್ನು ವೀಕ್ಷಕರು ‘ಪಂಟ’ ಚಿತ್ರದಲ್ಲೂ ಕಂಡಿದ್ದರು. ಅಂದಹಾಗೆ, ಈ ನಟಿಯ ಹೆಸರು ರಾಧಿಕಾ ಪ್ರೀತಿ. ‘ರಾಜ ಲವ್ಸ್‌...’ ಚಿತ್ರದಲ್ಲಿ ಈಕೆ ನಾಯಕಿ.

ಈ ಚಿತ್ರ ಶುಕ್ರವಾರ ತೆರೆಗೆ ಬರುತ್ತಿರುವ ಕಾರಣ, ‘ಚಂದನವನ’ ರಾಧಿಕಾ ಜೊತೆ ಮಾತಿಗೆ ಕುಳಿತಿತ್ತು. ರಾಧಿಕಾ ಅವರು ತಾವು ಸಿನಿಮಾ ರಂಗಕ್ಕೆ ಬಂದ ಬಗೆಯನ್ನು, ಪಾತ್ರಗಳ ಆಯ್ಕೆ ವಿಚಾರದಲ್ಲಿ ನಮ್ಮ ಒಲವು–ನಿಲುವುಗಳನ್ನು ಹೇಳಿಕೊಂಡರು.

‘ನನ್ನ ಸಿನಿಮಾ ಯಾನ ಶುರುವಾಗಿದ್ದು ಎಸ್. ನಾರಾಯಣ್ ನಿರ್ದೇಶನದ ಪಂಟ ಚಿತ್ರದ ಮೂಲಕ. ನಾರಾಯಣ್ ಅವರು ನನ್ನನ್ನು ಒಂದು ದೇವಸ್ಥಾನಕ್ಕೆ ಕರೆಸಿದ್ದರು. ಅಲ್ಲಿ ನನ್ನ ಚಿತ್ರಗಳನ್ನು ತೆಗೆದುಕೊಂಡರು. ನಂತರ, ಕರೆ ಮಾಡುವುದಾಗಿ ತಿಳಿಸಿ ನನ್ನನ್ನು ಕಳುಹಿಸಿದರು. ಎರಡು ವಾರಗಳ ನಂತರ ಕರೆ ಬಂತು, ಒಂದು ಕಡೆ ಬನ್ನಿ ಎಂದು ಅವರು ಹೇಳಿದರು. ಅಲ್ಲಿ ಪಂಟ ಚಿತ್ರೀಕರಣ ನಡೆಯುತ್ತಿತ್ತು. ಪಂಟ ಚಿತ್ರಕ್ಕೆ ನಾನು ಆಯ್ಕೆಯಾಗಿರುವುದನ್ನು ನಾರಾಯಣ್ ಸರ್ ತಿಳಿಸಿದರು. ನನಗೆ ನಂಬಲೇ ಆಗಲಿಲ್ಲ’ ಎನ್ನುತ್ತ ಮಾತು ಆರಂಭಿಸಿದರು ರಾಧಿಕಾ.

ಇದಾದ ನಂತರ ನಾರಾಯಣ್ ಅವರು ರಾಧಿಕಾ ಅವರನ್ನು ಕಚೇರಿಗೆ ಕರೆಸಿದ್ದರು. ಅಲ್ಲಿ ಒಂದು ಚಿಕ್ಕ ಸಂಭಾಷಣೆ ಕೊಟ್ಟು, ಅದನ್ನು ಅಭಿನಯಿಸಿ ತೋರಿಸುವಂತೆ ಹೇಳಿದರು. ಅದನ್ನು ರಾಧಿಕಾ ಅಭಿನಯಿಸಿ ತೋರಿಸಿದರು. ಇಷ್ಟಾಗಿದ್ದೇ, ‘ಚಿತ್ರೀಕರಣಕ್ಕೆ ಬಾ’ ಎಂದು ನಾರಾಯಣ್ ಹೇಳಿದರು. ಆಗಲೂ ರಾಧಿಕಾ ಅವರಿಗೆ ತಾವು ಚಿತ್ರಕ್ಕೆ ಆಯ್ಕೆ ಆಗಿರುವ ಬಗ್ಗೆ ನಂಬಿಕೆ ಹುಟ್ಟಿರಲಿಲ್ಲ. ‘ಕೊನೆಗೆ ಒಂದು ದಿನ ನಾರಾಯಣ್ ಸರ್ ನನಗೆ ಕರೆ ಮಾಡಿ, ನಾಳೆಯಿಂದ ಚಿತ್ರೀಕರಣ ಶುರು, ಬಾ ಎಂದು ಹೇಳಿದರು. ನಾನು ಆ ಚಿತ್ರದ ನಾಯಕಿ ಎಂದು ನಂಬಲು ಆಗುತ್ತಲೇ ಇರಲಿಲ್ಲ. ನಾನೇನಾ ನಾಯಕಿ ಎಂದು ನಾರಾಯಣ್ ಅವರಲ್ಲಿ ಮತ್ತೊಮ್ಮೆ ಕೇಳಿದ್ದೆ. ಯಾಕಮ್ಮಾ ಅನುಮಾನ ಎಂದು ಅವರು ಕೇಳಿದ್ದರು. ಅಭಿನಯ ಎಂಬುದು ನನ್ನಲ್ಲಿ ಮೊದಲು ಭಯ ಹುಟ್ಟಿಸಿತ್ತು. ನಂತರ ಅವರೇ ನನಗೆ ಮಾರ್ಗದರ್ಶನ ಮಾಡಿದರು’ ಎಂದು ರಾಧಿಕಾ ಹೇಳಿಕೊಂಡರು.

ರಾಧಿಕಾ ಅವರು ಚಿತ್ರೀಕರಣದ ಆರಂಭದ ದಿನಗಳಲ್ಲಿ, ಸಂಭಾಷಣೆಯ ಪ್ರತಿಯೊಂದನ್ನು ಮನೆಗೆ ಕೊಂಡೊಯ್ದು, ಅದನ್ನು ಅಭನಯಿಸುವುದನ್ನು ರಾತ್ರಿಯೆಲ್ಲಾ ಅಭ್ಯಾಸ ಮಾಡುತ್ತಿದ್ದರು. ಮಾರನೆಯ ದಿನ, ಚಿತ್ರೀಕರಣದ ಸ್ಥಳದಲ್ಲಿ ಆ ದೃಶ್ಯವನ್ನು ನಟಿಸಿ ತೋರಿಸುತ್ತಿದ್ದರು. ರಾಧಿಕಾ ಅವರು ಅದರಲ್ಲಿ ಏನಾದರೂ ತಿದ್ದಿಕೊಳ್ಳಬೇಕಾಗಿದ್ದರೆ, ನಾರಾಯಣ್ ಅವರು ಅದರ ಬಗ್ಗೆ ತಿಳಿಸುತ್ತಿದ್ದರು.

‘ಒಂದು ದಿನ ನನಗೆ ಚಿತ್ರೀಕರಣ ಕೆಲಸ ಇರಲಿಲ್ಲ. ಆದರೂ, ನನಗೆ ಚಿತ್ರೀಕರಣದ ಸ್ಥಳಕ್ಕೆ ಬರುವಂತೆ ತಿಳಿಸಿದರು. ಅಲ್ಲಿ ಮೂರು ಜನ ಬಂದರು – ವಿಜಯ್, ರಾಜಶೇಖರ್ ಮತ್ತು ಇನ್ನೊಬ್ಬರು. ನಾರಾಯಣ್ ಅವರು, ಇವರು ನಿನ್ನನ್ನು ಮುಂದಿನ ಸಿನಿಮಾಕ್ಕೆ ಆಯ್ಕೆ ಮಾಡಿದ್ದಾರೆ. ಸ್ಕ್ರಿಪ್ಟ್‌ ಕೇಳು. ನಿನಗೆ ಇಷ್ಟವಾದರೆ ಸಿನಿಮಾದಲ್ಲಿ ಅಭಿನಯಿಸು ಎಂದರು. ರಾಜ ಲವ್ಸ್ ರಾಧೆ ನಿರ್ದೇಶಕರು ಚಿತ್ರದ ಕಥೆ ಹೇಳಿದರು. ನನಗೆ ಇಷ್ಟವಾಯಿತು. ಅಲ್ಲಿಂದ ಈ ಸಿನಿಮಾ ಕೆಲಸ ಆರಂಭವಾಯಿತು’ ಎಂದು ರಾಧಿಕಾ, ಈಗಿನ ಚಿತ್ರಕ್ಕೆ ತಾವು ಆಯ್ಕೆ ಆಗಿದ್ದನ್ನು ತಿಳಿಸಿದರು.

ಇವರು ಶಾಲೆಯಲ್ಲಿ ಓದುತ್ತಿದ್ದಾಗ ಯಾರೇ ಕಂಡರೂ ‘ನೀನು ಹೀರೊಯಿನ್ ಆಗು’ ಎಂದು ಹೇಳುತ್ತಿದ್ದರಂತೆ. ಶಾಲೆಯ ಮಾಡುತ್ತಿದ್ದ ನಾಟಕಗಳಲ್ಲಿ ರಾಧಿಕಾ ಅವರಿಗೆ ಪ್ರಮುಖ ಪಾತ್ರಗಳನ್ನು ಕೊಡುತ್ತಿದ್ದರಂತೆ. ರಾಧಿಕಾ ಅವರು ಹತ್ತನೆಯ ತರಗತಿಯಲ್ಲಿ ಸ್ಲ್ಯಾಮ್ ಬುಕ್‌ನಲ್ಲಿ ‘ನಾನು ಹೀರೊಯಿನ್’ ಆಗಬೇಕು ಎಂದು ಬರೆದಿದ್ದರಂತೆ. ಅವರು ಬರೆದಿದ್ದು ನಿಜ ಜೀವನದಲ್ಲೂ ಆಯಿತು.

ಸಿನಿಮಾ ಕ್ಷೇತ್ರದ ಬಗ್ಗೆ ಬಹಳ ಖುಷಿಯಿಂದ ಹೇಳಿಕೊಳ್ಳುವ ರಾಧಿಕಾ, ‘ಈ ರಂಗ ನನ್ನನ್ನು ಯುವರಾಣಿಯಂತೆ ಕಂಡಿದೆ. ಖುಷಿಯ ಜೀವನ ಇಲ್ಲಿ ಸಿಕ್ಕಿದೆ. ಶಾಲೆ ಅಂದರೆ ಪರೀಕ್ಷೆ ಬರೆಯಬೇಕು, ಗಣಿತ ಕಲಿಯಬೇಕು, ಮನೆಯಲ್ಲಿ ಬೈಸಿಕೊಳ್ಳಬೇಕು. ಆದರೆ ಇಲ್ಲಿ ಖುಷಿ ಸಿಕ್ಕಿದೆ’ ಎನ್ನುತ್ತಾರೆ. ಅಭಿನಯದ ಪ್ರತಿಭೆಯನ್ನು ತೋರಿಸುವಂತಹ ಪಾತ್ರ ನಿಭಾಯಿಸುವುದು ಇವರಲ್ಲಿರುವ ಆಸೆ. ಆದರೆ, ಗ್ಲ್ಯಾಮರ್‌ ಪಾತ್ರಗಳ ಬಗ್ಗೆ ತಮಗೆ ಒಲವು ಇಲ್ಲ ಎನ್ನುತ್ತಾರೆ ರಾಧಿಕಾ. ಇವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಒಡಿಯಾ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

‘ಕನ್ನಡ ಚಿತ್ರರಂಗದಲ್ಲೇ ಮುಂದುವರಿಯಬೇಕು ಅನಿಸುತ್ತಿದೆ ನನಗೆ. ಇದು ನಮ್ಮ ಭಾಷೆ. ಈ ಕ್ಷೇತ್ರ ನನಗೆ ಸುರಕ್ಷಿತ ಅನಿಸುತ್ತದೆ’ ಎಂದರು ರಾಧಿಕಾ. ಇವರ ನಟನೆಯ ಕಲಿಕೆಯ ಬಗ್ಗೆ ಇಲ್ಲಿ ಒಂದು ಮಾತು ಹೇಳಬೇಕು, ಇವರು ಯಾವುದೇ ನಟನಾ ತರಬೇತಿ ಶಾಲೆಗೆ ಹೋದವರಲ್ಲ. ಮೂರು ವರ್ಷಗಳ ಕಾಲ ಕನ್ನಡಿ ಎದುರು ನಿಂತು, ಅಭಿನಯ ಕಲಿತವರು!

ಇವರು ಶಾಲೆಯಲ್ಲಿ ಓದುತ್ತಿದ್ದಾಗ ಯಾರೇ ಕಂಡರೂ ‘ನೀನು ಹೀರೊಯಿನ್ ಆಗು’ ಎಂದು ಹೇಳುತ್ತಿದ್ದರಂತೆ. ಶಾಲೆಯಲ್ಲಿ ಆಡುತ್ತಿದ್ದ ನಾಟಕಗಳಲ್ಲಿ ರಾಧಿಕಾ ಅವರಿಗೆ ಪ್ರಮುಖ ಪಾತ್ರಗಳನ್ನು ಕೊಡುತ್ತಿದ್ದರಂತೆ. ರಾಧಿಕಾ ಅವರು ಹತ್ತನೆಯ ತರಗತಿಯಲ್ಲಿ ಸ್ಲ್ಯಾಮ್ ಬುಕ್‌ನಲ್ಲಿ ‘ನಾನು ಹೀರೊಯಿನ್ ಆಗಬೇಕು’ ಎಂದು ಬರೆದಿದ್ದರಂತೆ. ಅವರು ಬರೆದಿದ್ದು ನಿಜ ಜೀವನದಲ್ಲೂ ಆಯಿತು.

ಸಿನಿಮಾ ಕ್ಷೇತ್ರದ ಬಗ್ಗೆ ಬಹಳ ಖುಷಿಯಿಂದ ಹೇಳಿಕೊಳ್ಳುವ ರಾಧಿಕಾ, ‘ಈ ರಂಗ ನನ್ನನ್ನು ಯುವರಾಣಿಯಂತೆ ಕಂಡಿದೆ. ಖುಷಿಯ ಜೀವನ ಇಲ್ಲಿ ಸಿಕ್ಕಿದೆ. ಶಾಲೆ ಅಂದರೆ ಪರೀಕ್ಷೆ ಬರೆಯಬೇಕು, ಗಣಿತ ಕಲಿಯಬೇಕು, ಮನೆಯಲ್ಲಿ ಬೈಸಿಕೊಳ್ಳಬೇಕು. ಆದರೆ ಇಲ್ಲಿ ಖುಷಿ ಸಿಕ್ಕಿದೆ’ ಎನ್ನುತ್ತಾರೆ. ಅಭಿನಯದ ಪ್ರತಿಭೆಯನ್ನು ತೋರಿಸುವಂತಹ ಪಾತ್ರ ನಿಭಾಯಿಸುವುದು ಇವರಲ್ಲಿರುವ ಆಸೆ. ಆದರೆ, ಗ್ಲ್ಯಾಮರ್‌ ಪಾತ್ರಗಳ ಬಗ್ಗೆ ತಮಗೆ ಒಲವು ಇಲ್ಲ ಎನ್ನುತ್ತಾರೆ ರಾಧಿಕಾ.

ಇವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಒಡಿಯಾ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ‘ಕನ್ನಡ ಚಿತ್ರರಂಗದಲ್ಲೇ ಮುಂದುವರಿಯಬೇಕು ಅನಿಸುತ್ತಿದೆ ನನಗೆ. ಇದು ನಮ್ಮ ಭಾಷೆ. ಈ ಕ್ಷೇತ್ರ ನನಗೆ ಸುರಕ್ಷಿತ ಅನಿಸುತ್ತದೆ’ ಎಂದರು ರಾಧಿಕಾ. ಇವರ ನಟನೆಯ ಕಲಿಕೆಯ ಬಗ್ಗೆ ಇಲ್ಲಿ ಒಂದು ಮಾತು ಹೇಳಬೇಕು, ಇವರು ಯಾವುದೇ ನಟನಾ ತರಬೇತಿ ಶಾಲೆಗೆ ಹೋದವರಲ್ಲ. ಮೂರು ವರ್ಷಗಳ ಕಾಲ ಕನ್ನಡಿ ಎದುರು ನಿಂತು, ಅಭಿನಯ ಕಲಿತವರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT