ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ಜೊತೆ ಇಂಟೆಲ್‌ ಇಂಡಿಯಾ ಒಪ್ಪಂದ

ನವೋದ್ಯಮಗಳಿಗೆ ನೆರವಾಗುವ ತಂತ್ರಜ್ಞಾನ ಆವಿಷ್ಕಾರ
Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಹಾಗೂ ಇಸ್ರೇಲ್‌ನ ನವೋದ್ಯಮಗಳು ಹಾಗೂ ಉದ್ಯಮಗಳ ಪ್ರಗತಿಗೆ ನೆರವಾಗುವ ಹೊಸ ತಂತ್ರಜ್ಞಾನ ಆವಿಷ್ಕಾರ ಒಪ್ಪಂದಕ್ಕೆ ಬೆಂಗಳೂರಿನಲ್ಲಿ ಇರುವ ಇಸ್ರೇಲ್‌ ಕಾನ್ಸುಲೇಟ್‌ ಹಾಗೂ ‘ಇಂಟೆಲ್‌ ಇಂಡಿಯಾ’ ಸಹಿ ಹಾಕಿವೆ.

ನಗರದಲ್ಲಿ ನಡೆದ ಸಮಾರಂಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದಿಂದಾಗಿ ಭಾರತ ಹಾಗೂ ಇಸ್ರೇಲ್‌ ತಂತ್ರಜ್ಞಾನದ ಸಹಕಾರವು ಮತ್ತೊಂದು ಮಜಲಿಗೆ ತಲುಪಲಿದೆ. ಇಸ್ರೇಲ್‌ನ ನವೋದ್ಯಮಗಳು ಪ್ರಗತಿ ಕಾಣಲಿವೆ.

ಹೊಸ ತಂತ್ರಜ್ಞಾನವು ಇಸ್ರೇಲ್‌ ನವೋದ್ಯಮಗಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಜೊತೆಗೆ ಭಾರತದ ಮಾರುಕಟ್ಟೆಯ ಅಗತ್ಯ, ಅವಕಾಶ ಮತ್ತು ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರ ಸೂಚಿಸಲಿದೆ.  ಪ್ರಬಲ ವ್ಯಾಪಾರ ಉದ್ದೇಶ, ಕೌಶಲ ಹೊಂದಿರುವ ಇಸ್ರೇಲ್‌ ತಂತ್ರಜ್ಞಾನದ ಹೊಸ ಮಾದರಿಗಳ ಬಳಕೆ, ಭವಿಷ್ಯದ ತಾಂತ್ರಿಕ ಜ್ಞಾನ ಹಾಗೂ ಸಾಮರ್ಥ್ಯವನ್ನು ತರಬೇತಿ, ಕಾರ್ಯಾಗಾರಗಳ ಮೂಲಕ ಒದಗಿಸಿಕೊಡುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ.

‘ನಮ್ಮ ಆವಿಷ್ಕಾರ ಪರಂಪರೆ’ಯ 70ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತ ಪ್ರಮುಖ ಪಾಲುದಾರ ರಾಷ್ಟ್ರವಾಗುತ್ತಿರುವುದು ಹೆಮ್ಮೆಯ ವಿಷಯ’ ಎಂದು ಇಸ್ರೇಲ್‌ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌ ಡಾನಾ ಕುರ್ಷ್‌ ಸಂತಸ ವ್ಯಕ್ತಪಡಿಸಿದರು. ಉಭಯ ರಾಷ್ಟ್ರಗಳು ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.

‘ನಾವು ಬಲಿಷ್ಠ ಸಂಶೋಧನಾ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಿದ್ದೇವೆ’ ಎಂದು ಇಂಟೆಲ್‌ ಇಂಡಿಯಾದ ನಿವ್ರತಿ ರಾಯ್‌ ಹೇಳಿದರು. ಪ್ರಧಾನಿ ಮೋದಿ ಅವರ ಇತ್ತೀಚಿನ ಇಸ್ರೇಲ್‌ ಭೇಟಿಯು ಉಭಯ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳಿಸಲಿದೆ ಎಂದು  ಕುರ್ಷ್‌ ಮತ್ತು ರಾಯ್‌ ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT