ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಸಾವಿರಕ್ಕೂ ಹೆಚ್ಚು ಮಂದಿ ಸ್ಪರ್ಧೆ

Last Updated 24 ಮೇ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: 11ನೇ ಆವೃತ್ತಿಯ ಟಿಸಿಎಸ್‌ ವಿಶ್ವ 10ಕೆ ಮ್ಯಾರಥಾನ್‌ ಸಾಗುವ ದಾರಿಯ ನಕ್ಷೆಯನ್ನು ಪ್ರೋಕ್ಯಾಮ್‌ ಸಂಸ್ಥೆಯು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದೆ.

ಇದೇ 27ರಂದು (ಭಾನುವಾರ) ಐದು ವಿಭಾಗಗಳಲ್ಲಿ ವಿಶ್ವ 10ಕೆ ಓಟ ನಡೆಯಲಿದೆ.  ಈ ಮ್ಯಾರಥಾನ್‌, ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಿ ಅದೇ ಸ್ಥಳದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಸ್‌ನ ನಿರ್ದೇಶಕ ಹ್ಯು ಜೋನ್ಸ್‌, ‘ಓಪನ್‌ 10ಕೆ ವಿಭಾಗದ ಓಟವು ಬೆಳಿಗ್ಗೆ 5.30ಕ್ಕೆ ಆರಂಭವಾಗಲಿದೆ. ಮಜಾ ರನ್‌, ಹಿರಿಯ ನಾಗರಿಕರ ವಿಭಾಗದ ಓಟ, ವಿಶ್ವ 10ಕೆ ಓಟಗಳು ಕ್ರಮವಾಗಿ ಬೆಳಿಗ್ಗೆ 6.45, 7.15 ಹಾಗೂ 8.50ಕ್ಕೆ ಶುರುವಾಗಲಿವೆ’ ಎಂದು ಹೇಳಿದರು.

‘ಎಲೀಟ್‌ ವಿಭಾಗ ಸಾಗುವ ದಾರಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಂಠೀರವ ಕ್ರೀಡಾಂಗಣದಿಂದ ಆರಂಭವಾಗುವ ಎಲ್ಲ ವಿಭಾಗಗಳ ಓಟಗಳು ವಿಧಾನ ಸೌಧ, ಮಹಾತ್ಮ ಗಾಂಧಿ ರಸ್ತೆ ಹಾಗೂ ಕಬ್ಬನ್‌ ಪಾರ್ಕ್‌ ಮಾರ್ಗವಾಗಿ ಸಾಗಲಿವೆ’ ಎಂದು ಅವರು ತಿಳಿಸಿದರು.

**

‘ಓಟ ನನ್ನ ವ್ಯಕ್ತಿತ್ವದಲ್ಲಿ ಮಿಳಿತವಾಗಿದೆ’

‘ಈ ಮ್ಯಾರಥಾನ್‌ನ ಪ್ರಚಾರ ರಾಯಭಾರಿಯಾಗಿ ಭಾರತಕ್ಕೆ ಬಂದಿರುವುದು ಸಂತಸ ತಂದಿದೆ. ಈ ರಾಷ್ಟ್ರವನ್ನು ನಾನು ಇಷ್ಟಪಡುತ್ತೇನೆ. ಇಲ್ಲಿನ ಜನರ ಪ್ರೀತಿ ಹಾಗೂ ವಿವಿಧ ಆಹಾರ ಪದಾರ್ಥಗಳು ನನ್ನನ್ನು ಸೆಳೆದಿವೆ’ ಎಂದು ವಿಶ್ವ 10ಕೆ ಓಟದ ಅಂತರರಾಷ್ಟ್ರೀಯ ರಾಯಭಾರಿಯಾಗಿರುವ ಹಿರಿಯ ಟೆನಿಸ್‌ ಆಟಗಾರ್ತಿ ಮೇರಿ ಪಿಯರ್ಸ್‌ ಹೇಳಿದರು.

ಗುರುವಾರ ಮಾತನಾಡಿದ ಅವರು, ‘ಮ್ಯಾರಥಾನ್‌ ನಡೆಯುವ ದಿನಕ್ಕಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT