ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಕಲಾಪದಿಂದ ಹೊರ ನಡೆದ ಬಿಜೆಪಿ; ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ ಘೋಷಣೆ

Last Updated 25 ಮೇ 2018, 12:40 IST
ಅಕ್ಷರ ಗಾತ್ರ

ಬೆಂಗಳೂರು: 24 ಗಂಟೆಗಳೊಳಗೆ ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ಕೊಡುತ್ತೇವೆ ಎಂದು ಹೇಳಿದ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಸುಧೀರ್ಘ ಭಾಷಣದ ಬಳಿಕ ವಿಧಾನಸಭೆ ಕಲಾಪವನ್ನು ಬಹಿಷ್ಕರಿಸಿ, ಪಕ್ಷದ ಸದಸ್ಯರ ಜತೆಗೂಡಿ ಸದನದಿಂದ ಹೊರನಡೆದರು.

ಶುಕ್ರವಾರ ಸಭಾಧ್ಯಕ್ಷರ ಆಯ್ಕೆ ಬಳಿಕ, ವಿಶ್ವಾಸಮತ ಯಾಚನೆ ಪ್ರಸ್ತಾಪ ಮಂಡಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಭಾಷಣದ ನಂತರ ಮಾತನಾಡಿದ ಯಡಿಯೂರಪ್ಪ ಅವರು, ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ರೈತರ ಸಾಲ ಮನ್ನಾ ವಿಚಾರ ಕುರಿತು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ₹ 57 ಸಾವಿರ ಕೋಟಿ ಸಾಲಾ, ಖಾಸಗಿಯವರ ಬಳಿ ಮಾಡಿರುವ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಅದರಂತೆ ಮನ್ನಾ ಮಾಡಿ. ಮಾತು ತಪ್ಪಿದರೆ, ಸೋಮವಾರ ಕರ್ನಾಟಕ ಬಂದ್‌ ಮಾಡುತ್ತೇವೆ ಎಂದು ಘೋಷಿಸಿದರು.

ವಿವಿಧ ಪಿಂಚಣಿ, ಸೇರಿದಂತೆ ಹಲವು ಭರವಸೆ ನೀಡಿದ್ದೀರಿ. ಕುಮಾರಸ್ವಾಮಿ ಅವರೇ ಈಗ ಬಹುಮತ ಪಡೆದ ಬಳಿಕ ಸಾಲಮನ್ನಾ ಮಾಡಿ ತೋರಿಸಿ. ನಿಮ್ಮ ಪ್ರಣಾಳಿಕೆಯಂತೆ ಕನಿಷ್ಠ ಪಕ್ಷ ಬರಗಾಲಕ್ಕೆ ಸಿಕ್ಕಿ ನಲುಗಿರುವ ಜನರಿಗೆ ನೆರವಾಗಿ ನಿಲ್ಲಿ ಎಂದು ಜೆಡಿಎಸ್‌ನ ಪ್ರಣಾಳಿಕೆ ಪ್ರತಿಯನ್ನು ಯಡಿಯೂರಪ್ಪ ಸದನದಲ್ಲಿ ತೋರಿಸಿದರು. ಮಾತು ತಪ್ಪಿ ನಡೆದ ಬಂದ್‌ ನಡೆಸುತ್ತೇವೆ ಎಂದು ಪಕ್ಷದ ಸದಸ್ಯರ ಜತೆಗೂಡಿ ಸದನದಿಂದ ಹೊರ ನಡೆದರು.

ಬಳಿಕ, ಮಾತು ಆರಂಭಿಸಿದ ಎಚ್‌.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ಸದನಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿದರು. ಚಿತ್ತ: ಎಎನ್‌ಐ ಟ್ವೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT