ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

46ರ ಹೊಸ್ತಿಲಲ್ಲಿ ಕರಣ್‌ ಜೋಹರ್‌

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ಬಹುಮುಖಿ ಪ್ರತಿಭೆ ಕರಣ್‌ ಜೋಹರ್‌ 46ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ (ಮೇ 25, 1972). ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ, ವಸ್ತ್ರ ವಿನ್ಯಾಸ, ನಟನೆ, ಕಿರುತೆರೆ ಶೋಗಳ ನಿರೂಪಕ... ಕೆಜೋ ಯಾನೆ ಕರಣ್‌ ಜೋಹರ್‌ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿರುವ ಪ್ರಮುಖ ಕ್ಷೇತ್ರಗಳಿವು.

ಕರಣ್‌, ಹೀರೂ ಜೋಹರ್‌ ಮತ್ತು ಚಿತ್ರ ನಿರ್ಮಾಪಕ ಯಶ್‌ ಜೋಹರ್‌‌ ಮಗ. 1989ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ಇಂದ್ರಧನುಷ್‌’ ಧಾರಾವಾಹಿಯಲ್ಲಿ ‘ಶ್ರೀಕಾಂತ್‌’ ಎಂಬ ಪಾತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದವರು ಕರಣ್‌. 1995ರಲ್ಲಿ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ಯಲ್ಲಿ ಅವರು ಸಹನಿರ್ದೇಶಕ.

ಆದರೆ ಬಾಲಿವುಡ್‌ ಬೆಚ್ಚಿಬೀಳುವಂತೆ ಮಾಡಿದ್ದು 1998ರಲ್ಲಿ ನಿರ್ದೇಶಿಸಿದ ‘ಕುಛ್‌ ಕುಛ್‌ ಹೋತಾ ಹೈ’. ಇತ್ತೀಚೆಗೆ ಬಿಡುಗಡೆಯಾದ ‘ರಾಝಿ’ ಕರಣ್‌ ಅವರ ನಿರ್ಮಾಣದ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT