ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜನಾ ಜಗನ್ನಾಥ್ ರಂಗಪ್ರವೇಶ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

‘ಶಿವಪ್ರಿಯ’ ನೃತ್ಯಶಾಲೆಯ ನಾಟ್ಯಗುರು ಡಾ.ಸಂಜಯ್ ಶಾಂತಾರಾಂ ಅವರ ಮಾರ್ಗದರ್ಶನದಲ್ಲಿ ಪ್ರಫುಲ್ಲವಾಗಿ ರೂಪುಗೊಂಡ ಉದಯೋನ್ಮುಖ ಕಲಾವಿದೆ ಸಂಜನಾ.

ಕಳೆದ ಹತ್ತು ವರ್ಷಗಳಿಂದ ಬದ್ಧತೆಯಿಂದ ಭರತನಾಟ್ಯ ಕಲಿಯುತ್ತಿರುವ ಇವರು ಇದೀಗ ರಂಗಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಮೇ 26 ಶನಿವಾರ ನಗರದ ಎ.ಡಿ.ಎ. ರಂಗಮಂದಿರದಲ್ಲಿ ಕಲಾಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕಳಾಗಿರುವ ಸಂಜನಾ, ತನ್ನ ಹೆಚ್ಚಿನ ನೃತ್ಯತಾಲೀಮನ್ನು ‘ಶಿವಪ್ರಿಯ’ ಸಂಸ್ಥೆಯ ಮತ್ತೊಬ್ಬ ನಾಟ್ಯಗುರು ಸಜಿನಿ ಅವರ ಬಳಿ ವಿಸ್ತೃತವಾಗಿ ಪಡೆದುಕೊಂಡಿರುವುದು ವಿಶೇಷ.

ಜಗನ್ನಾಥ್ ಮತ್ತು ಲಕ್ಷ್ಮಿ ದಂಪತಿಗಳ ಪುತ್ರಿಯಾದ ಸಂಜನಾಗೆ ನೃತ್ಯ, ಬಾಲ್ಯದ ಒಲವು. ಶಾಸ್ತ್ರೀಯ ರೀತ್ಯ ವಿದ್ಯೆ ಕರಗತ ಮಾಡಿಕೊಳ್ಳತೊಡಗಿದ ಸಂಜನಾ, ಲಯ ಮತ್ತು ತಾಳ ಜ್ಞಾನದ ಅರಿವಿಗೆ ಗುರು ಶೈಲಜಾ ಅವರಲ್ಲಿ ಕರ್ನಾಟಕ ಸಂಗೀತವನ್ನೂ ಕಲಿತು, ನೃತ್ಯ ಸಂಗೀತ ಎರಡರ ‘ಜ್ಯೂನಿಯರ್’ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಂದ ಯಶಸ್ವಿ ಸಾಧಿಸಿದ್ದು ಆಕೆಯ ಹೆಚ್ಚುಗಾರಿಕೆ.

ನಗರದ ಸಿಂಧೀ ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಸಂಜನಾ, ಉತ್ತಮ ಕ್ರೀಡಾಪಟು ಕೂಡ. ಬ್ಯಾಸ್ಕೆಟ್ ಬಾಲ್ ಮತ್ತು ಈಜುಗಾರಿಕೆಯಲ್ಲಿ ನೈಪುಣ್ಯ ಪಡೆದಿರುವ ಈಕೆ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದು.

ಶಿವಪ್ರಿಯದ ಪ್ರಮುಖ ನೃತ್ಯರೂಪಕಗಳಾದ ರೂಪ-ವಿರೂಪ, ನಕ್ಷತ್ರ, ಕರ್ನಾಟಕ ವೈಭವ, ನವರಸ ಕೃಷ್ಣ ಮತ್ತು ರಾಜಾಸಿಂಹ ಮುಂತಾದ ಎಲ್ಲ ಜನಪ್ರಿಯ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ತನ್ನ ಪ್ರತಿಭಾ ಛಾಪನ್ನೊತ್ತಿದ್ದಾರೆ ಸಂಜನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT