ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

Last Updated 26 ಮೇ 2018, 9:18 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿನ ಶಾಲಾ ಕಾಲೇಜುಗಳ ಮತ್ತು ಕಚೇರಿಗಳ ಗೋಡೆಗಳು ಕರಪತ್ರಗಳನ್ನು ಅಂಟಿಸಿದ್ದರಿಂದ ಅಂದಗೆಟ್ಟಿವೆ.

ನೀಲಾಂಬಿಕಾ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣಗೋಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದ ಉಪ ವಿಭಾಗಾಧಿಕಾರಿ ನಿವಾಸದ ಗೋಡೆ, ಲೋಕೋಪಯೋಗಿ ಕಚೇರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಕಚೇರಿಯ ಆವರಣ ಗೋಡೆ ಮತ್ತು ತಹಶೀಲ್ದಾರ್ ಅವರ ಹಳೆಯ ಕಟ್ಟಡದ ಆವರಣಗೋಡೆಯಲ್ಲಿ ಸ್ವಲ್ಪವೂ ಜಾಗ ಬಿಡದಂತೆ ವಿವಿಧ ಕರಪತ್ರಗಳನ್ನು ಅಂಟಿಸಲಾಗಿದೆ.

ಈ ಗೋಡೆಗಳಲ್ಲಿ ಕರಪತ್ರಗಳಿಂದಾಗಿ ಬಣ್ಣ ಮುಚ್ಚಿಹೋಗಿದೆ. ಹೀಗಾಗಿ ನೋಡುಗರಿಗೆ ಅಸಹ್ಯವಾಗಿ ಕಾಣುತ್ತಿದೆ. ‘ಗೋಡೆಗಳ ತುಂಬ ಕರಪತ್ರಗಳನ್ನು ಮೆತ್ತಿದ್ದರೂ ಸಂಬಂಧಪಟ್ಟವರು ಸುಮ್ಮನೆ ಕುಳಿತಿರುವುದು ಸರಿಯಲ್ಲ. ದೂಳಿನಿಂದ ಮತ್ತು ಕರಪತ್ರಗಳಿಂದ ಅಂದಗೆಟ್ಟಿರುವ ಗೋಡೆಗಳಿಗೆ ಬಣ್ಣ ಬಳಿಯಬೇಕಾದುದು ಸಂಬಂಧಿತ ಇಲಾಖೆಯ ಕರ್ತವ್ಯವಾಗಿದೆ’ ಎಂದು ಶಂಕರರಾವ್ ಅಭಿಪ್ರಾಯಪಟ್ಟಿದ್ದಾರೆ.

‘ನೀಲಾಂಬಿಕಾ ಸರ್ಕಾರಿ ಪ್ರೌಢ ಶಾಲೆಯ ಆವರಣಗೋಡೆ ತುಂಬೆಲ್ಲ ಕರಪತ್ರಗಳು ಅಂಟಿಸಿದ್ದರೂ ಶಾಲೆಯವ ರಾಗಲಿ, ಇತರೆ ಅಧಿಕಾರಿಗಳಾಗಲಿ ಕಣ್ಣುಮುಚ್ಚಿ ಕುಳಿತಿರುವುದು ಸರಿಯಲ್ಲ. ತಕ್ಷಣ ಕರಪತ್ರಗಳನ್ನು ತೆಗೆಯಬೇಕು. ಇನ್ನು ಮುಂದೆ ಇಂಥವನ್ನು ಅಂಟಿಸದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು
ಆರ್.ಧನರಾಜ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT