ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬೇಡ ಅಂದರು, ಶಾಸಕರ ಪಟ್ಟಿ ಕೊಟ್ಟರು

ಅಕ್ಷರ ಗಾತ್ರ

ದಾವಣಗೆರೆ: ‘ಚನ್ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ, ಆಕೆ ಕಟ್ಟಿಸಿದ ಕೋಟೆ ಮತ್ತು ಆಕೆಯ ಸಮಾಧಿ ರಾಷ್ಟ್ರೀಯ ಸ್ಮಾರಕ ಆಗಬೇಕು. ಇದಕ್ಕಾಗಿ ಹರಿಹರದಿಂದ ಬೆಳಗಾವಿಯ ಬೈಲಹೊಂಗಲಕ್ಕೆ ಪಾದಯಾತ್ರೆ ಹೊರಟಿದ್ದೇವೆ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತು ಮುಗಿಸುತ್ತಿದ್ದಂತೆ ಪತ್ರಕರ್ತರು ಸಮ್ಮಿಶ್ರ ಸರ್ಕಾರ ರಚನೆಯ ಬಗ್ಗೆ ಪ್ರಶ್ನೆಗಳ ಬಾಣ ಬಿಟ್ಟರು.

‘ಇದು ಪಾದಯಾತ್ರೆಗೆ ಸಂಬಂಧಿಸಿದ ಸುದ್ದಿಗೋಷ್ಠಿ, ಆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ’ ಎಂದರೂ ಪತ್ರಕರ್ತರು ಪ್ರಶ್ನೆಗಳನ್ನು ಎಸೆಯುವುದನ್ನು ಬಿಡಲಿಲ್ಲ. ಜಪ್ಪಯ್ಯ ಎಂದರೂ ಸ್ವಾಮೀಜಿ ರಾಜಕೀಯದ ಬಗ್ಗೆ ತುಟಿ ಬಿಚ್ಚಲಿಲ್ಲ. ಸ್ವಾಮೀಜಿ ಸಿಡಿಮಿಡಿಗೊಂಡಿದ್ದನ್ನು ಕಂಡ ಪತ್ರಕರ್ತರೇ ಕೊನೆಗೆ ಸುಮ್ಮನಾದರು.

ಆಗ ಮಾತು ಆರಂಭಿಸಿದ ಸಂಘದ ಅಧ್ಯಕ್ಷ ಬಾವಿ ಬೆಟ್ಟಪ್ಪ, ‘ನಮ್ಮ ಸಮಾಜ ಕರ್ನಾಟಕದ ಉದ್ದಗಲಕ್ಕೂ ಇದೆ. ಎಲ್ಲಾ ಪಕ್ಷಗಳಿಂದ ಪಂಚಮಸಾಲಿ ಸಮಾಜದ 20 ಶಾಸಕರು ಈ ಬಾರಿ ಆಯ್ಕೆಯಾಗಿ ಬಂದಿದ್ದಾರೆ’ ಎನ್ನುತ್ತಲೇ ಇಪ್ಪತ್ತೂ ಶಾಸಕರ ಹೆಸರುಗಳನ್ನು ಉಸುರಲಾರಂಭಿಸಿದರು. ‘ಇದು ಮಠದ ಹೇಳಿಕೆ ಅಲ್ಲ, ಪಂಚಮಸಾಲಿ ಸಂಘದ ಹೇಳಿಕೆ’ ಎಂದೂ ಸೇರಿಸಿದರು.

‘ಮಠವಿಲ್ಲದೇ ಸಮಾಜ, ರಾಜಕೀಯವಿಲ್ಲದೇ ಮಠ ನಡೆಯುವುದೇ? ಸ್ವಾಮೀಜಿ ರಾಜಕೀಯ ಬೇಡವೆಂದರೂ ಅದು ಅವರನ್ನು ಬೆಂಬಿಡದು ನೋಡುತ್ತಿರಿ’ ಎಂದು ಪತ್ರಕರ್ತರು ಗೊಣಗಿದ್ದು ಸ್ವಾಮೀಜಿ ಕಿವಿಗೆ ಬೀಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT