ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ–ಮೀರತ್‌ ಎಕ್ಸ್‌ಪ್ರೆಸ್ ಹೆದ್ದಾರಿ ಉದ್ಘಾಟಿಸಿದ ಪ್ರಧಾನಿ ಮೋದಿ

Last Updated 27 ಮೇ 2018, 6:42 IST
ಅಕ್ಷರ ಗಾತ್ರ

ನವದೆಹಲಿ: ಬಹುನಿರೀಕ್ಷೆಯ ದೆಹಲಿ–ಮೀರತ್ ನಡುವಿನ ಮೊದಲ ಹಂತದ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು.

ಇದೇ ವೇಳೆ ದೆಹಲಿ ಮತ್ತು ಯುಪಿ ಗೇಟ್ ನಡುವಿನ 14 ಪಥದ ರಸ್ತೆಯನ್ನು ಉದ್ಘಾಟನೆ ಮಾಡಿದರು.

ದೆಹಲಿ–ಮೀರತ್ ನಡುವಿನ ಮೊದಲ ಹಂತದ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಸುಮಾರು 7.500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವಾಗುವುದರ ಜೊತೆಗೆ ಈ ಹೆದ್ದಾರಿಯಲ್ಲಿ ಸುರಕ್ಷೆಯ ಜತೆಗೆ ಸುಖಕರ ಪ್ರಯಾಣ ಮಾಡಬಹುದಾಗಿದೆ.

ಒಟ್ಟು 82 ಕಿ.ಮೀಟರ್‌ ಯೋಜನೆ ಇದಾಗಿದ್ದು ಮೊದಲ ಹಂತದಲ್ಲಿ 28 ಕಿ,ಮೀ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ. ಈ 28 ಕಿ.ಮೀ ರಸ್ತೆಯಲ್ಲಿ ಮೊದಲು 32 ಟ್ರಾಫಿಕ್ ಸಿಗ್ನಲ್‌ಗಳಿದ್ದವು ಇದೀಗ ಸಿಗ್ನಲ್‌ ಮುಕ್ತ ಮಾಡಿರುವುದರಿಂದ ಪ್ರಯಾಣಿಕರಿಗೆ ಸಮಯ ಉಳಿಯಲಿದೆ.

ಪ್ರಧಾನಿ ಹೆದ್ದಾರಿ ಉದ್ಘಾಟನೆ ಮಾಡಿದ ಬಳಿಕ ದೆಹಲಿ–ಮೀರತ್ ಎಕ್ಸ್‌ಪ್ರೆಸ್‌ ರಸ್ತೆಯಲ್ಲಿ ರೋಡ್‌ ಶೋ ನಡೆಸಿದರು. 9 ಕಿ.ಮೀ ರೋಡ್‌ ಶೋನಲ್ಲಿ ರಸ್ತೆಯ ಉದ್ದಗಲಕ್ಕೂ ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದು ಮೋದಿ, ಮೋದಿ ಎಂದು ಘೋಷಣೆಗಳನ್ನು ಕೂಗುತ್ತಿದ್ದರು.

ಪ್ರಧಾನಿ ಅವರ ಜತೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT