ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಗೇಟ್: ಬ್ಯಾರೇಜ್‌ ಖಾಲಿ

ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
Last Updated 27 ಮೇ 2018, 9:55 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ದಿಕ್ಸಂಗಾ(ಕೆ) ಗ್ರಾಮದ ಹತ್ತಿರ ಅಮರ್ಜಾ ಬೋರಿ ಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್‌ಗೆ ಅವೈಜ್ಞಾನಿಕ ಗೇಟ್ ಅಳವಡಿಸಿದ್ದರಿಂದ ಬ್ಯಾರೇಜ್‌ ಸಂಪೂರ್ಣ ಖಾಲಿಯಾಗಿದೆ. ಈ ಭಾಗದ 8– 10 ಗ್ರಾಮಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದೆ.

ಇಲ್ಲಿನ ಅಮರ್ಜಾ ಬೋರಿ ಹಳ್ಳಕ್ಕೆ 20 ವರ್ಷಗಳ ಹಿಂದೆ ಬ್ಯಾರೇಜ್‌ ನಿರ್ಮಾಣ ಮಾಡಲಾಗಿದೆ. ನೀರಾವರಿ ಇಲಾಖೆ ಬ್ಯಾರೇಜ್‌ ನಿರ್ವಹಣೆ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಗೇಟ್ ಹಾಕದೆ ಇರುವುದರಿಂದ ಮತ್ತು ಗೇಟ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದರಿಂದ ನೀರು ಖಾಲಿಯಾಗುತ್ತದೆ. ಇನ್ನೊಂದು ಕಡೆ ಬ್ಯಾರೇಜ್‌ನಲ್ಲಿ 1 ಕಿ.ಮೀ.ವರೆಗೂ ಹೂಳು ತುಂಬಿಕೊಂಡಿದೆ. ಹೀಗಾಗಿ ನೀರು ನಿಲ್ಲುವ ಸಾಮರ್ಥ್ಯ ಕಡಿಮೆಯಾಗಿದೆ. ಬ್ಯಾರೇಜ್‌ ಬತ್ತಿ ಹೋಗಿದ್ದರಿಂದ ಈ ಭಾಗದ 8– 10 ಗ್ರಾಮಗಳ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಕಡಿಮೆಯಾಗಿದೆ.

ಗೌರ(ಬಿ) ಗ್ರಾಮದ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಭೀಮರಾವ್ ಗೌರ ಮಾಹಿತಿ ನೀಡಿ, ‘ಸಣ್ಣ ನೀರಾವರಿ ಇಲಾಖೆಯವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪ್ರತಿವರ್ಷ ಬ್ಯಾರೇಜ್‌ ಖಾಲಿಯಾಗುತ್ತಿದೆ. ಹೂಳು ತೆಗೆದರೆ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಗೌರ(ಬಿ), ಗೌರ(ಕೆ), ನಂದರಗಿ, ತೆಲ್ಲುಣಗಿ, ಜೇವರ್ಗಿ ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಈ ಭಾಗದ ರೈತರ ಬೆಳೆಗಳು ಒಣಗುತ್ತಿವೆ. ಇಲಾಖೆಯವರು ಮಳೆ ಮುಗಿದ ತಕ್ಷಣ ಗೇಟ್ ಹಾಕಬೇಕು. ಗೇಟ್ ಸೋರಿಕೆ ಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT