ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ ನ್ಯೂ 2018 ಕ್ರೆಟಾ’ ಕಾರು ಮಾರುಕಟ್ಟೆಗೆ

ಉಡುಪಿ, ಮಂಗಳೂರಿನ ಕಾಂಚನಾ ಹುಂಡೈನಲ್ಲಿ ಬಿಡುಗಡೆ
Last Updated 27 ಮೇ 2018, 10:00 IST
ಅಕ್ಷರ ಗಾತ್ರ

ಮಂಗಳೂರು: ನಗರದ ಪಡೀಲ್ ಮತ್ತು ಉಡುಪಿಯ ನಿಟ್ಟೂರಿನಲ್ಲಿರುವ ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್‌ನ ಅಧಿಕೃತ ಡೀಲರ್ ಮತ್ತು ಸರ್ವಿಸ್ ಸೆಂಟರ್‌ನಲ್ಲಿ ‘ದಿ ನ್ಯೂ 2018 ಕ್ರೆಟಾ’ ಕಾರು ಶನಿವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಉಡುಪಿಯಲ್ಲಿ ಮಣಿಪಾಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಗೌತಮ್ ಪೈ ಹಾಗೂ ಮಂಗಳೂರಿನಲ್ಲಿ ಯುವ ಉದ್ಯಮಿ ಫಹಾದ್ ಬಿ.ಎ. ಅವರು ಫೋರಂ ಫಿಝಾ ಮಾಲ್‌ನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ವಿಧ್ಯುಕ್ತವಾಗಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ 8 ಪ್ರಥಮ ಗ್ರಾಹಕರಿಗೆ ಹಾಗೂ ಉಡುಪಿಯಲ್ಲಿ 10 ಪ್ರಥಮ ಗ್ರಾಹಕರಿಗೆ ನೂತನ ಕಾರಿನ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.

ಎಸ್‌ಯುವಿ ಶ್ರೇಣಿಯಲ್ಲಿ ಅತ್ಯುನ್ನತವೆಂದು ಪರಿಗಣಿಸಿರುವ ಕ್ರೆಟಾ ಕಾರು, ಈಗಾಗಲೇ ವಿಶ್ವದಾದ್ಯಂತ 4 ಲಕ್ಷ ಗ್ರಾಹಕರನ್ನು ಹೊಂದಿದೆ. ಪ್ರಯಾಣಿಕರ ಅನುಕೂಲಕ್ಕೆಂದೇ ನಿರ್ಮಿಸಲಾಗಿರುವ ‘ದಿ ನ್ಯೂ 2018 ಕ್ರೆಟಾ’ ನೋಡಲು ಮನೋಹರವಾಗಿದೆ. ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ಫ್ರೂಪ್ ಮತ್ತು ಪವರ್ ಡ್ರೈವರ್ ಸೀಟುಗಳನ್ನು ಈ ಕಾರು ಹೊಂದಿದ್ದು, ಇಂತಹ ಶ್ರೇಣಿಯಲ್ಲಿ ಇದು ಪ್ರಥಮವಾಗಿದೆ. ಸ್ಮಾರ್ಟ್ ಕೀ ಬೋರ್ಡ್, ವೈರ್‌ಲೆಸ್ ಫೋನ್ ಚಾರ್ಜರ್, ಅಟೋಲಿಂಕ್ ಕನೆಕ್ಟೆಡ್ ಕಾರ್‌ ಟೆಕ್ನಾಲಜಿಯೊಂದಿಗೆ ಚಾಲನೆಗೆ ಅತ್ಯಂತ ಸುಲಭವಾಗಿದೆ.

ರೋಡ್ ಸೈಡ್ ಅಸಿಸ್ಟೆಂಟ್‌ನೊಂದಿಗೆ ಮಿತಿಯಿಲ್ಲದೆ ಕಿ.ಮೀ.ನೊಂದಿಗೆ 3 ವರ್ಷಗಳ ವಾರಂಟಿಯೂ ಲಭ್ಯವಿದೆ. ನೂತನ ಬೈ-ಫಂಕ್ಷನಲ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಎಲ್‍ಇಡಿ ಡಿಆರ್‍ಎಲ್ ಆಂಡ್ ಪೊಸಿಸನಿಂಗ್ ಲ್ಯಾಂಪ್ಸ್, ಆರ್ 17 ಡೈಮಂಡ್ ಕಟ್ ಅಲ್ಲೋಯ್ಸ್, ಡ್ಯುಯಲ್ ಟೋನ್ ಫ್ರಂಟ್‌ ಆಂಡ್ ರ‍್ಯಾರ್‌ ಬಂಪರ್, ಬೋಲ್ಡ್ ಫ್ರಂಟ್ ಆಂಡ್ ರ‍್ಯಾರ್‌ ಸ್ಕಿಡ್ ಪ್ಲೇಟ್ಸ್, ಶಾರ್ಕ್ ಫಿನ್ ಆಂಟೆನಾ ಇತ್ಯಾದಿ ಅನೇಕ ವಿಶಿಷ್ಟತೆಗಳನ್ನು ಕ್ರೆಟಾ ಕಾರು ಹೊಂದಿದೆ.

ಕಾಂಚನಾ ಹುಂಡೈ 2006ರಲ್ಲಿ ಹುಂಡೈ ಮೋಟರ್ ಇಂಡಿಯಾದ ಕಾರುಗಳ ಅಧಿಕೃತ ಡೀಲರ್ ಆಗಿ ಕರಾವಳಿ ಕರ್ನಾಟಕದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಸದ್ಯಕ್ಕೆ ಕರ್ನಾಟಕದ 3ನೇ ಅತ್ಯಂತ ದೊಡ್ಡ ಡೀಲರ್‌ಶಿಪ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯು ಪ್ರತಿ ವರ್ಷವೂ 3ಸಾವಿರಕ್ಕೂ ಮಿಗಿಲಾಗಿ ಹುಂಡೈ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಉಡುಪಿಯಲ್ಲಿ ಮುಖ್ಯ ಕಚೇರಿ, ಮಂಗಳೂರಿನಲ್ಲಿ ಕಾರ್ಪೊರೇಟ್ ಕಚೇರಿ ಮತ್ತು ಪುತ್ತೂರು, ಕುಂದಾಪುರ, ಶಿರಸಿ, ಕಾರವಾರ, ಕಾರ್ಕಳ ಹಾಗೂ ಕುಮಟಾದಲ್ಲಿ ಮಳಿಗೆ ಹಾಗೂ ಸರ್ವೀಸ್‌ ಸೆಂಟರ್‌ಗಳನ್ನು ಹೊಂದಿದೆ. ಶೀಘ್ರದಲ್ಲೇ ಸುರತ್ಕಲ್‌ನಲ್ಲಿ ಸುಸಜ್ಜಿತ ಮಳಿಗೆ ಹಾಗೂ ಸರ್ವಿಸ್ ಸೆಂಟರ್‌ ತೆರೆಯಲಿದೆ.

ಈ ನೂತನ ಕಾರು ಕಾಂಚನಾ ಹುಂಡೈ ಪಡೀಲ್ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇದ್ದು, ಬುಕ್ಕಿಂಗ್ ತೆರೆದಿದೆ. ಟೆಸ್ಟ್ ಡ್ರೈವ್‌ಗೂ ಅವಕಾಶವಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT