ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಮಾವಿಗೆ ಹೆಚ್ಚಿದ ಬೇಡಿಕೆ

ಬಾದಾಮಿ: ನೈಸರ್ಗಿಕ ಮಾವಿಗೆ ಹೆಚ್ಚಿದ ಬೇಡಿಕೆ
Last Updated 27 ಮೇ 2018, 11:35 IST
ಅಕ್ಷರ ಗಾತ್ರ

ಬಾದಾಮಿ: ಪಟ್ಟಣದ ಮ್ಯೂಸಿಯಂ ರಸ್ತೆ, ತರಕಾರಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಮಾರಾಟ ಭರ್ಜರಿಯಾಗಿ ನಡೆದಿದೆ.   ವೈವಿಧ್ಯಮಯ ತಳಿಯ 1ಕೆ.ಜಿ. ಮಾವಿನ ಹಣ್ಣು ₹ 40ರಿಂದ ₹ 300 ವರೆಗೆ ಮಾರಾಟವಾಗುತ್ತಿದೆ.

ಅದರಲ್ಲೂ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಎನ್ನುತ್ತಾರೆ ಗ್ರಾಹಕರು ಮತ್ತು ವ್ಯಾಪಾರಿಗಳು. 
ಮೊದಲು ಜವಾರಿ ಮಾವಿನ ಹಣ್ಣಿನ ಗಿಡಗಳು ಇದ್ದವು. ಪ್ರತಿಯೊಂದು ಓಣಿಯಲ್ಲಿ ಮಾವಿನ ಹಣ್ಣಿನ ಭಟ್ಟಿಯನ್ನು ಹಾಕುತ್ತಿದ್ದರು. ರಸ್ತೆಯಲ್ಲಿ ಹಾಯ್ದು ಹೋದರೆ ಇಡೀ ಓಣಿಯೇ ಘಮಲು ಹೊರಹಾಕುತ್ತಿತ್ತು. ಈಗ ಅದು ಮಾಯವಾಗಿದೆ.

ಆದರೆ ಪಟ್ಟಣದಲ್ಲಿ ನೈಸರ್ಗಿಕ ಹಣ್ಣು ಮಾಗಿಸುವ ವ್ಯಾಪಾರಿಗಳು ಇದ್ದಾರೆ. ಅಂಥವರಲ್ಲಿ ಲಾಲಸಾಬ್‌ ಬಾಗವಾನ್‌  ಒಬ್ಬರು. ಇವರು ವರ್ಷದ ಮಟ್ಟಿಗೆ ಜಿಲ್ಲೆಯ ವಿವಿಧೆಡೆ ಮಾವಿನ ತೋಟಗಳನ್ನು ಗುತ್ತಿಗೆ ಪಡೆಯುತ್ತಾರೆ. ಇದಲ್ಲದೇ ಹೈದರಾಬಾದ್‌ನಿಂದಲೂ ಮಾವು ಖರೀದಿಸುತ್ತಾರೆ. ಇವರು ಮನೆಯಲ್ಲಿಯೇ ಹುಲ್ಲಿನಲ್ಲಿ ಭಟ್ಟಿಹಾಕಿ ಹಣ್ಣು ಮಾಡುತ್ತಾರೆ.

ತಾಲ್ಲೂಕಿನಲ್ಲಿ ಅಂದಾಜು 200 ಎಕರೆಯಲ್ಲಿ ಬೆಳೆಗಾರರು ಮಾವಿನ ಗಿಡ ಬೆಳೆದಿದ್ದಾರೆ. ಆದರೆ ಕೆಲವು ಮಾರಾಟಗಾರರು ಹಣ್ಣು ಮಾಡಲು ರಾಸಾಯನಿಕ ಬಳಕೆ ಮಾಡುವುದರಿಂದ ಅಂಥ ಸುವಾಸನೆ ಮತ್ತು ರುಚಿ  ಬರುವುದಿಲ್ಲ ಎನ್ನುತ್ತಾರೆ. ಅದಕ್ಕಾಗಿ ನೈಸರ್ಗಿಕ ವಿಧಾನ ಅನುಸರಿಸುತ್ತಿದ್ದೇವೆ ಎಂದರು ಸಾಬ್‌.

–ಎಸ್‌.ಎಂ. ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT