ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ಪಡೆಯಲು ವಿಪುಲ ಅವಕಾಶ

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ಚಟುವಟಿಕೆಯನ್ನು ಉತ್ತಮ ಕಂಪನಿಗಳಲ್ಲಿ ನಡೆಸಿದರೆ ಸ್ವಲ್ಪಮಟ್ಟಿನ ಸುರಕ್ಷತೆ ಸಾಧ್ಯ. ಉತ್ತಮ ಕಂಪನಿಗಳು ಎಂಬುದಕ್ಕೆ ಮಾನದಂಡವೇನು ಎಂಬುದು ಓದುಗರ ಪ್ರಶ್ನೆ. ಸಾಮಾನ್ಯವಾಗಿ ಪುಸ್ತಕಗಳಲ್ಲಿ ಕಂಪನಿಯ ಗುಣಮಟ್ಟವನ್ನು ಬುಕ್ ವ್ಯಾಲ್ಯೂ, ಇಪಿಎಸ್,  ಕಂಪನಿಯ ಹೂಡಿಕೆದಾರರ ಸ್ನೇಹಿ ಗುಣ, ಕಾರ್ಪೊರೇಟ್ ಫಲ ವಿತರಣಾ ಮಟ್ಟ, ಕಂಪನಿಯ ಪ್ರವರ್ತಕರ ಚಿಂತನೆ ಮುಂತಾದವುಗಳೊಂದಿಗೆ ಕಂಪನಿಯ ಸಾಧನೆಯ ಮಟ್ಟ ಮುಖ್ಯ ಆಗಿರುತ್ತದೆ. ಆದರೆ, ಈಗಿನ ಪೇಟೆಗಳಲ್ಲಿ ಈ ಅಂಶಗಳು ಗಣನೆಗೆ ಬರದೇ ಇರುವಷ್ಟರ ಮಟ್ಟಿಗೆ ರಭಸದ ಏರಿಳಿತಗಳು ಪ್ರದರ್ಶಿತವಾಗುತ್ತಿವೆ.

ವಹಿವಾಟುದಾರರು ಕಂಪನಿಯ ಬ್ರ್ಯಾಂಡ್‌ಗೆ ಹೆಚ್ಚು ಹೆಚ್ಚು ಮಾನ್ಯತೆಯನ್ನು ನೀಡುತ್ತಿರುವುದು ಹವ್ಯಾಸವಾಗಿದೆ ಮತ್ತು ಕೈಗೆಟುಕುವ ಅವಕಾಶಗಳ ಲಾಭ ಪಡೆಯುವ ಬಗ್ಗೆಯೇ ಗಮನ ಇರುತ್ತದೆ. ಈ ದಿಸೆಯಲ್ಲಿ ವ್ಯಾಲ್ಯೂ ಪಿಕ್ ಪ್ರಕ್ರಿಯೆಗೆ ಹೆಚ್ಚು ಮಹತ್ವ ನೀಡಬಹುದಾಗಿದೆ ಎಂಬುದನ್ನು ಈ ವಾರದ ಬೆಳವಣಿಗೆಗಳು ದೃಢಪಡಿಸುತ್ತವೆ.

ಅಗ್ರಮಾನ್ಯ ಕಂಪನಿಗಳಾದ ಅಶೋಕ್ ಲೇಲ್ಯಾಂಡ್ ಷೇರಿನ ಬೆಲೆ ₹132 ರ ಸಮೀಪಕ್ಕೆ ಕುಸಿದು ನಂತರ ವೇಗವಾದ ಏರಿಕೆಯಿಂದ ₹147 ರ ವರೆಗೂ ತಲುಪಿ ₹145ರ ಸಮೀಪ ವಾರಾಂತ್ಯ ಕಂಡಿತು.  ಪ್ರತಿ ಷೇರಿಗೆ ₹18.50 ಯಂತೆ ಲಾಭಾಂಶ ನೀಡಲಿರುವ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್, ಷೇರು ಲಾಭಾಂಶ ವಿತರಣೆಗೆ ಮುನ್ನವೇ ₹262 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಚೇತರಿಸಿಕೊಂಡು ₹281ರ ಸಮೀಪ ವಾರಾಂತ್ಯ ಕಂಡಿತು.

ಗುರುವಾರ ತೈಲ ಉತ್ಪಾದನಾ ಕಂಪನಿಗಳ ಮೇಲೆ ವಿಂಡ್‌ಫಾಲ್ ತೆರಿಗೆ ವಿಧಿಸಬಹುದೆಂಬ ಸುದ್ದಿಯಿಂದ ಒಎನ್‌ಜಿಸಿ ಷೇರು ₹155 ರ ವಾರ್ಷಿಕ ಕನಿಷ್ಠಕ್ಕೆ ಕುಸಿದರೆ, ಆಯಿಲ್ ಇಂಡಿಯಾ ₹233 ರ ಗರಿಷ್ಠದಿಂದ ₹205 ರವರೆಗೂ ಕುಸಿದು ₹215 ರ ಸಮೀಪ ಕೊನೆಗೊಂಡಿದೆ. ನಿರೀಕ್ಷಿತ ಫಲಿತಾಂಶ ಬರಲಿಲ್ಲವೆಂಬ ಕಾರಣಕ್ಕೆ ಮದರ್ಸನ್ ಸುಮಿ ಷೇರು ₹295 ರವರೆಗೂ ಕುಸಿದು ₹301 ರ ಸಮೀಪ ಕೊನೆಗೊಂಡಿತು. ಎಸಿಸಿ ಷೇರಿನ ಬೆಲೆ ₹1,290 ರವರೆಗೂ ಕುಸಿದ ನಂತರ ಚೇತರಿಸಿಕೊಂಡು ₹1,350 ರವರೆಗೂ ಏರಿಕೆ ಕಂಡು ₹1,332 ರ ಸಮೀಪ ಕೊನೆಗೊಂಡಿತು.

ಗುರುವಾರ ಸರ್ಕಾರಿ ವಲಯದ ಗೇಲ್ ಇಂಡಿಯಾ ಕಂಪನಿಯು ತನ್ನ ಫಲಿತಾಂಶವನ್ನು ಪ್ರಕಟಿಸಿದ ನಂತರ ಷೇರಿನ ಬೆಲೆಯೂ ₹299 ರ ಸಮೀಪಕ್ಕೆ ಕುಸಿದು, ಮೌಲ್ಯಾಧಾರಿತ ಖರೀದಿಯ  ಕಾರಣ ಅಲ್ಪ ಚೇತರಿಕೆ ಕಂಡಿತಾದರೂ ಶುಕ್ರವಾರ ಷೇರಿನ ಬೆಲೆ ₹324 ರವರೆಗೂ ಜಿಗಿತ ಕಂಡು ₹319 ರ ಸಮೀಪ ಕೊನೆಗೊಂಡಿತು.

ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಷೇರುಗಳಲ್ಲಿನ ಹೂಡಿಕೆಯ ಅಪಾಯದ ಮಟ್ಟ ಹೆಚ್ಚಿಗೆ ಇರುತ್ತದೆ.  ಪ್ರಮುಖವಾಗಿ ವಕ್ರಾಂಗಿ ಷೇರು ಕಂಡಿರುವ ಭರ್ಜರಿ ಕುಸಿತ ಹೆಚ್ಚು ಆಘಾತಕಾರಿಯಾಗಿದೆ. ಆಲ್‌ಸೆಕ್ ಟೆಕ್ನಾಲಜಿಸ್  ಷೇರಿನ ಬೆಲೆ ಒಂದೇ ವಾರದಲ್ಲಿ ₹396 ರ ಸಮೀಪದಿಂದ ₹300 ರವರೆಗೂ ಕುಸಿದು ₹315 ರಲ್ಲಿ ವಾರಾಂತ್ಯ ಕಂಡಿದೆ.  ಗೋವಾ ಕಾರ್ಬನ್ ಕಂಪನಿ ಷೇರಿನ ಬೆಲೆಯೂ ಒಂದೇ ತಿಂಗಳಲ್ಲಿ ₹843 ರಿಂದ ₹662 ರವರೆಗೂ ಕುಸಿದಿದೆ.  ರೇನ್ ಇಂಡಸ್ಟ್ರೀಸ್ ಷೇರಿನ ಬೆಲೆ ₹345 ರ ಸಮೀಪದಿಂದ ₹228 ರವರೆಗೂ ಕುಸಿದಿದೆ.

ಲಾಭಾಂಶ: ₹2 ರ ಮುಖಬೆಲೆಯ ಷೇರುಗಳು: ಫಿನೋಲಿಕ್ಸ್ ಇಂಡಸ್ಟ್ರೀಸ್: ₹10,  ಕಮ್ಮಿನ್ಸ್: ₹10  ಗ್ರಾಸಿಮ್: ₹6.20, ವಾಟೆಕ್ ವಭಾಗ್:₹4, ಜಾಗ್ರನ್ ಪ್ರಕಾಶನ್: ₹3, ಸಿಪ್ಲಾ: ₹3,  ಸೊಮಾನಿ ಸಿರಾಮಿಕ್ಸ್ : ₹2.70,  ಸಿಸಿಎಲ್ ಪ್ರಾಡಕ್ಟ್ಸ್: ₹2.50,  ಭಾರತ್ ಫೋರ್ಜ್: ₹2.50,  ಕೆಪಿಐಟಿ ಟೆಕ್: ₹2.40,  63ಮೂನ್ಸ್: ₹2,  ಅಲ್ಕಾರ್ಗೋ ಲಾಜಿಸ್ಟಿಕ್ಸ್: ₹2,  ಇಂದ್ರಪ್ರಸ್ಥ ಗ್ಯಾಸ್: ₹2

₹1 ರ ಮುಖಬೆಲೆ ಷೇರುಗಳು: ಎಲ್ ಅಂಡ್  ಟಿ ಇನ್ಫೊಟೆಕ್‌: ₹13.50, ಕಾಲ್ಗೇಟ್: ₹11,  ಮೋತಿಲಾಲ್ ಓಸ್ವಾಲ್ ಫೈನಾನ್ಶಿ
ಯಲ್‌ ಸರ್ವಿಸಸ್: ₹4.50,  ಕ್ಯಾಡಿಲ್ಲ ಹೆಲ್ತ್‌ ಕೇರ್ ₹3.50,  ರೂಪಾ ಆ್ಯಂಡ್ ಕೋ: ₹3,  ಹ್ಯಾಟ್ಸನ್ ಆಗ್ರೊ ಪ್ರಾಡಕ್ಟ್ಸ್: ₹3, ವಿನೈಲ್ ಕೆಮಿಕಲ್ಸ್: ₹2.40,  ಮದರ್ಸನ್‌ ಸುಮಿ: ₹2.25,  ಸನ್ ಫಾರ್ಮ: ₹2, ವಿರಾಟ್ ಇಂಡಸ್ಟ್ರೀಸ್: ₹1.25, ಸನ್ ಟೆಕ್ ರಿಯಾಲ್ಟಿ: ₹1.50, ಜಮುನಾ ಆಟೋ: ₹0.55

ಬೋನಸ್  ಷೇರು

* ಜನರಲ್ ಇನ್ಶುರನ್ಸ್‌ ಕಾರ್ಪೊರೇಷನ್ 1:1 ರ ಅನುಪಾತದ ಬೋನಸ್ ವಿತರಿಸಲಿದೆ.

* ಮಿಂದಾ ಇಂಡಸ್ಟ್ರೀಸ್ 2:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ

* ಗೃಹ ಫೈನಾನ್ಸ್ ಕಂಪನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಜೂನ್‌ 7 ನಿಗದಿತ ದಿನ.

* ಪ್ರಭಾತ್ ಟೆಲಿಕಾಂ ಕಂಪನಿ 1:5 ರ ಅನುಪಾತದ ಬೋನಸ್ ಪ್ರಕಟಿಸಿದೆ.

* ಸಿಟಿ ಯೂನಿಯನ್ ಬ್ಯಾಂಕ್ 1:10 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

* ಡಿಐಎಲ್ ಲಿಮಿಟೆಡ್ ಕಂಪನಿ ಜೂನ್ 18 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ: ಡಿಐಎಲ್ ಲಿಮಿಟೆಡ್ ಕಂಪನಿ ಜೂನ್ 18 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

ಅಮಾನತು ತೆರವು: 2013ರ ಡಿಸೆಂಬರ್‌ 30 ರಿಂದ ಅಮಾನತ್ತಿನಲ್ಲಿದ್ದ ಯುನೈಟೆಡ್ ವ್ಯಾನ್‌ಡರ್‌ ಹಾರ್ಸ್ಟ್‌ ಲಿಮಿಟೆಡ್‌ನ ಅಮಾನತು ತೆರವುಗೊಳಿಸಿರುವುದರಿಂದ ಮೇ 30 ರಿಂದ ಎಕ್ಸ್ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

(ಮೊ : 98863 13380, ಸಂಜೆ 4.30ರ ನಂತರ)

ವಾರದ ಮುನ್ನೋಟ

ಒಂದೆರಡು ತಿಂಗಳುಗಳಿಂದ ಸತತವಾಗಿ ಇಳಿಕೆಯಲ್ಲಿದ್ದ ಪ್ರಮುಖ ಕಂಪನಿಗಳ ಷೇರಿನ ಬೆಲೆಗಳು ಮೂಲಾಧಾರಿತ ಪೇಟೆಯ ಚುಕ್ತಾ ವಾರವಾದ್ದರಿಂದ ಶೂನ್ಯ ಮಾರಾಟ ಚಟುವಟಿಕೆಯ ಕಾರಣ ಸ್ವಲ್ಪ ಚೇತರಿಕೆಗೆ ಅವಕಾಶವಿರುತ್ತದೆ.

ರೂಪಾಯಿ ಬೆಲೆಯಲ್ಲಿ ಸ್ವಲ್ಪ ಚೇತರಿಕೆ,  ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಗೆ ತಡೆಯಾಗಿ ಸ್ವಲ್ಪ ಇಳಿಕೆ ಇವು ಪೇಟೆಯಲ್ಲಿ ಚುರುಕು ಮೂಡಿಸುವ ಸಾಧ್ಯತೆ ಇದೆ. ಮ್ಯುಚುವಲ್ ಫಂಡ್‌ಗಳ ಎಸ್‌ಐಪಿ ಮೂಲಕ ದಾಖಲೆ ಸಂಖ್ಯೆಯಲ್ಲಿ ಹೊಸ ಖಾತೆಗಳು ಆರಂಭವಾಗಿ ಹೆಚ್ಚಿನ ಒಳ ಹರಿವು ಬರುತ್ತಿದೆ. ಅದು ಸಹ ಪೇಟೆಯ ಕಡೆಗೆ ಹರಿದುಬರುವುದರಿಂದ ಪೇಟೆಯಲ್ಲಿ ಚಟುವಟಿಕೆ ಚುರುಕಾಗಿಸುತ್ತದೆ.

ಬಹುತೇಕ  ಕಂಪನಿಗಳು ತಮ್ಮ ಫಲಿತಾಂಶಗಳನ್ನು ಪ್ರಕಟಿಸಿದ್ದು, ಇನ್ನು ಮುಂದೆ ತಮ್ಮ ವಾರ್ಷಿಕ ಸಾಮಾನ್ಯ ಸಭೆ ನಡೆಸುವುದು ಸಹ ಕಂಪನಿಗಳ ಷೇರುಗಳಲ್ಲಿ ಉತ್ಸಾಹಭರಿತ ಚಟುವಟಿಕೆಗೆ ಕಾರಣವಾಗುವ ಸಾಧ್ಯತೆ ಇದೆ.  ಪೇಟೆಗಳು ಏರಿಕೆ ಕಂಡಾಗ ತುಲನಾತ್ಮಕ ನಿರ್ಧಾರ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT