ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿ: ವಿದ್ಯಾರ್ಥಿಗಳ ಅನಿಸಿಕೆ...

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಟ್ಯೂಷನ್‌ಗೆ ಸೇರಿದ್ದೇನೆ

‘ಪ್ರಜಾವಾಣಿ ಶೈಕ್ಷಣಿಕ ನೆರವು’ ನಿಧಿಯಿಂದ ನೀಡಿದ ವಿದ್ಯಾರ್ಥಿವೇತನದಿಂದ ನನಗೆ ಅಕ್ಷರಶಃ ನೆರವಾಯಿತು. ಈಗ ಕೆ.ಆರ್‌.ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದೇನೆ. ಮುಂದೆ ಎಂಟೆಕ್‌ ಅಥವಾ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಉದ್ದೇಶ ಹೊಂದಿದ್ದೇನೆ. ತಂದೆ ತಾಯಿ ಕೂಲಿ ಮಾಡಿ ನನ್ನನ್ನು ಓದಿಸುತ್ತಿದ್ದಾರೆ. ಮುಂದೆ ಚೆನ್ನಾಗಿ ಓದಿ ಅವರಿಗೆ ಹಾಗೂ ನಾಲ್ಕಾರು ವಿದ್ಯಾರ್ಥಿಗಳಿಗೆ ನೆರವು ನೀಡಬೇಕು ಎಂದುಕೊಂಡಿದ್ದೇನೆ. ಪ್ರಜಾವಾಣಿ ನೀಡಿದ ಹಣವನ್ನು ಬಳಸಿಕೊಂಡು ಟ್ಯೂಷನ್‌ಗೆ ದಾಖಲಾಗಿದ್ದೇನೆ.

–ಕೆ.ಎಂ. ಭರತ್‌, ಕೆಸ್ತೂರು, ಕೆ.ಆರ್‌.ನಗರ ತಾಲ್ಲೂಕು

ಕಷ್ಟಕಾಲದಲ್ಲಿ ನೆರವಾಯಿತು

‘ಪ್ರಜಾವಾಣಿ ಶೈಕ್ಷಣಿಕ ನೆರವು’ ನಿಧಿಯಿಂದ ನೀಡಿದ ಸ್ಕಾಲರ್‌ಷಿಪ್ ಕಷ್ಟಕಾಲದಲ್ಲಿ ನೆರವಾಯಿತು. ಪುಸ್ತಕ ಹಾಗೂ ಸಮವಸ್ತ್ರ ಖರೀದಿಸಲು ಸಹಾಯವಾಯಿತು. ಈಗ ಮೈಸೂರಿನ ವಿಜಯ ವಿಠಲ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ಎಂಬಿಬಿಎಸ್‌ ಓದುವ ಗುರಿ ಹೊಂದಿದ್ದೇನೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಬೆಂಬಲಕ್ಕೆ ನಿಂತು, ಪ್ರೋತ್ಸಾಹಿಸುತ್ತಿರುವ ‘ಪ್ರಜಾವಾಣಿ ಶೈಕ್ಷಣಿಕ ನೆರವು’ ನಿಧಿಯ ಈ ಕಾರ್ಯ ನಿರಂತವಾಗಿ ಸಾಗಲಿ.

–ಇಂಚರಾ ಬಿ.ಎಸ್‌, ಬನ್ನೂರು, ತಿ.ನರಸೀಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT