ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಬಾಕು ದುಷ್ಪರಿಣಾಮ ಜಾಗೃತಿ ಅಗತ್ಯ’

ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಬಸವರಾಜ್ ಚೇಂಗಟಿ ಸಲಹೆ
Last Updated 1 ಜೂನ್ 2018, 12:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಕೀಲರ ಸಂಘದ ಸಹಯೋಗದಲ್ಲಿ ನಗರದ ಟಿಎಂಎಸ್ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ವಿಶ್ವಸಂಸ್ಥೆಯು 1988ರ ಮೇ 31ರಂದು ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲು ಆರಂಭಿಸಿತು. ತಂಬಾಕು ಬಳಕೆ ಕಡಿಮೆಗೊಳಿಸುವ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿತು ಎಂದರು.

ಭಾರತದಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ತಂಬಾಕು ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ದೇಶದಲ್ಲಿ ಶೇ 48ರಷ್ಟು ತಂಬಾಕು ಜಗಿಯಲು, ಶೇ 38ರಷ್ಟು ಬೀಡಿ, ಶೇ 14ರಷ್ಟು ಸಿಗರೇಟ್‌ ತಯಾರಿಕೆಗೆ ಬಳಕೆಯಾಗುತ್ತದೆ. ತಂಬಾಕು ಉತ್ಪಾದನೆಗಳಿಗೆ ವಿಧಿಸುವ ಸುಂಕದಿಂದ ದೇಶಕ್ಕೆ ಶೇ 85ರಷ್ಟು ಆದಾಯ ಬರುತ್ತಿದೆ ಎಂದು ಅವರು ಹೇಳಿದರು.

ದೇಶದ ತಂಬಾಕು ಉತ್ಪದನಾ ಕೈಗಾರಿಕೆಗಳಲ್ಲಿ 4.5 ಕೋಟಿ ಜನರು ಕೆಲಸ ಮಾಡುತ್ತಿದ್ದಾರೆ. ತಂಬಾಕು ಕೈಗಾರಿಕೆಗಳನ್ನು ಮುಚ್ಚಿದರೆ ಅವರೆಲ್ಲರೂ ಬದುಕಿಗೆ ತೊಂದರೆಯಾಗುವುದು. ತಂಬಾಕು ಬಳಕೆ ನಿಯಂತ್ರಿಸಲು ಉತ್ಪಾದನೆಗಳ ಮೇಲೆ ಕೇಂದ್ರ ಸರ್ಕಾರ ಹೆಚ್ಚು ತೆರಿಗೆ ವಿಧಿಸುತ್ತಿದೆ. ಆದರೂ ತಂಬಾಕಿನ ಉಪಯೋಗ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.

ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ ನಿಯಂತ್ರಿಸುವ (ಕೋಟ್ಪಾ)-2003)ಕಾಯ್ದೆ ಜಾರಿಯಿಂದ ಚಿತ್ರಮಂದಿರ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಒಳಗೊಂಡಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮ
ಪಾನ ಮಾಡುವುದು ಕಡಿಮೆಯಾಗಿದೆ. ಮನೆಯ ಸುತ್ತಲಿನವರಿಗೆ, ಸಂಬಂಧಿ
ಗಳಿಗೆ ತಂಬಾಕು ಬಳಕೆಯಿಂದಾಗುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು ಮನವಿರಿಕೆ ಮಾಡಬೇಕು ಎಂದರು.

ಡಾ.ಶ್ರೀನಿವಾಸ್ ಮಾತನಾಡಿ, ‘ತಂಬಾಕು ಎರಡು ವಿಧದಲ್ಲಿ ಬಳಕೆಯಾಗುತ್ತಿದೆ. ಹೊಗೆ ಸಹಿತ ತಂಬಾಕಿನಿಂದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ. ಹೊಗ ರಹಿತ ತಂಬಾಕಿನಿಂದ ದಂತ ಕ್ಯಾನ್ಸರ್‌ ಉಂಟಾಗುತ್ತದೆ’ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸಂಘ ದೋಷದಿಂದ ತಂಬಾಕು ಬಳಕೆಗೆ ಒಳಗಾಗುತ್ತಾರೆ. ಬಳಕೆ ಹೆಚ್ಚುತ್ತ ಅವರು ತಂಬಾಕು ವ್ಯಸನಿಯಾಗುತ್ತಾರೆ ಎಂದರು.

ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ನಗರದ ತಾಲ್ಲೂಕು ಕಚೇರಿ ಆವರಣದಿಂದ ಜಿಲ್ಲಾ
ಸ್ಪತ್ರೆವರೆಗೆ ಜಾಗೃತಿ ಜಾಥಾ ನಡೆಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಲಜಾಕ್ಷಿ, ಡಾ.ಎಂ.ಚಂದ್ರಶೇಖರ್, ದಂತ ವೈದ್ಯ ಡಾ.ಪ್ರೇಂ ಕುಮಾರ್, ವಕೀಲ ಆರ್.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT