ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪ ಕೊಲ್ಲುತ್ತಿದೆ!

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

1. ನನಗೆ ತುಂಬಾ ಕೋಪ. ಚಿಕ್ಕ ಚಿಕ್ಕ ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ. ಕೋಪದಿಂದ ಅನೇಕ ಬಾರಿ ಎಡವಟ್ಟು ಮಾಡಿಕೊಂಡಿದ್ದೇನೆ. ಕೋಪ ಕಡಿಮೆಯಾಗಲೂ ಏನು ಮಾಡಬೇಕು ತಿಳಿಸಿ. 
ಹೆಸರು, ಊರು ಬೇಡ

ಕೋಪದ ಸಮಸ್ಯೆಯೇ ನಿಮಗೆ ತೊಂದರೆ ನೀಡುತ್ತಿದೆ ಎಂದರೆ ಬಹುಶಃ ನೀವು ಶಾರ್ಟ್ ಟೆಂಪರ್ ಆಗಿರಬಹುದು. ಅತಿಯಾದ ಕೋಪ, ತಾಳ್ಮೆ ಕಳೆದುಕೊಳ್ಳುವುದು ಮತ್ತು ಕಾರಣವಿಲ್ಲದೇ ಕೋಪಗೊಳ್ಳುವುದು ಮಾಡುವುದರಿಂದ ನಿಮ್ಮ ವೈಯಕ್ತಿಕ ಹಾಗೂ ಕೆಲಸದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಅತಿಕೋಪವನ್ನು ನಿಯಂತ್ರಿಸುವ ದಾರಿಗಳನ್ನು ಕಂಡುಕೊಳ್ಳಿ, ಕೋ‍ಪವನ್ನು ನಿಯಂತ್ರಣ ಮಾಡಿಕೊಳ್ಳುವುದರಿಂದ ಜೀವನದ ಗುಣಮಟ್ಟವನ್ನು ಉತ್ತಮ ಪಡಿಸಿಕೊಳ್ಳಬಹುದು ಮತ್ತು ನಿಮ್ಮ ಹೊರಗಿನ ಸಂಬಂಧಗಳನ್ನು ಅಭಿವೃದ್ಧಿಗೊಳಿಸಿಕೊಳ್ಳಬಹುದು.

ಮಾತನಾಡುವ ಮೊದಲು ಯೋಚಿಸಿ, ಸಮಯ ತೆಗೆದುಕೊಳ್ಳಿ, ಶಾಂತರಾಗಿ ಮತ್ತು ಆಗ ನಿಮ್ಮ ಸಿಟ್ಟನ್ನು ತೋರಿಸಿ, ಈ ಸಮಯದಲ್ಲಿ ನಿಮ್ಮ ಅವಾಚ್ಯ ಭಾಷೆಗಳನ್ನು ನಿಯಂತ್ರಿಸಿ ಮತ್ತು ತಕ್ಷಣದ ಪ್ರತಿಕ್ರಿಯೆ ನಿಮ್ಮನ್ನು ನೋವನ್ನುಂಟು ಮಾಡಬಹುದು. ನಿಮ್ಮ ಭಾವನೆ ಹಾಗೂ ಸಿಟ್ಟನ್ನು ನಿಯಂತ್ರಿಸಲು ಏಕ್ಸ್‌ಸೈಜ್ ಹಾಗೂ ಧ್ಯಾನ ಉತ್ತಮ ಔಷಧ. ಯಾರ ಮೇಲೂ ದ್ವೇಷ ಇರಿಸಿಕೊಳ್ಳಬೇಡಿ ಅಥವಾ ನಿಮ್ಮ ಸಿಟ್ಟನ್ನು ಹೆಚ್ಚಿಸುವ ಯಾವುದೇ ವಿಷಯದ ಬಗ್ಗೆ ತಲೆ ಕೆಡೆಸಿಕೊಳ್ಳಬೇಡಿ, ಕ್ಷಮೆಯೇ ಎಲ್ಲದ್ದಕ್ಕೂ ಉತ್ತಮ ಸಾಧನ,

ತಕ್ಷಣಕ್ಕೆ ಕೋಪವನ್ನು ನಿಯಂತ್ರಿಸುವುದು ಎಲ್ಲರಿಗೂ ಚಾಲೆಂಜ್, ಆದರೆ ನೀವು ನಿಮ್ಮ ಸಿಟ್ಟನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಆಪ್ತಸಮಾಲೋಚಕರ ಸಲಹೆ ಪಡೆಯಿರಿ.

2. ನಾನು ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದೇನೆ. ನನಗೆ ಓದಲು ಆಸಕ್ತಿಯೇ ಇಲ್ಲ, ಯಾವಾಗಲೂ ಫೋನ್ ಹಿಡಿದುಕೊಂಡೇ ಇರುತ್ತೇನೆ. ಓದಬೇಕು ಎಂದುಕೊಂಡು ಕುಳಿತ ಮೇಲೂ ಫೋನ್ ನೋಡಬೇಕು ಎನ್ನಿಸುತ್ತದೆ. ನನಗೆ ಓದಬೇಕು ಎಂಬ ಆಸೆ, ಆದರೆ ಪೋನ್ ದೂರ ಮಾಡಲು ಸಾಧ್ಯವಾಗುತ್ತಿಲ್ಲ.
ರೇಖಾ, ಹಾವೇರಿ

ನಿಜವಾಗಿಯೂ ನೀವು ಅತಿಯಾದ ಫೋನ್ ಬಳಕೆಯನ್ನು ಎಂದುಕೊಂಡರೇ ನೀವೇ ನಿಮ್ಮೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳಬೇಕು. ‘ನಾನು ಈ ದಿನದಲ್ಲಿ ಅನಿವಾರ್ಯ ಕಾರಣಗಳಿಗೆ ಮಾತ್ರ ಫೋನ್ ಬಳಸುತ್ತೇನೆ’ ಎಂದು ದೃಢವಾಗಿ ಹೇಳಿಕೊಳ್ಳಿ. ಅದು ಆಟವಾಡಲು, ಸಂದೇಶ ಕಳುಹಿಸಲು ಅಥವಾ ಸಾಮಾಜಿಕ ಜಾಲಾತಾಣಗಳನ್ನು ಬಳಸಲು – ಈ ರೀತಿ ಕಾರಣ ಯಾವುದಾದರೂ ಆಗಿರಬಹುದು. ಅದಕ್ಕೆಂದೇ ಸಮಯ ನಿಗದಿಪಡಿಸಿಕೊಳ್ಳಿ ಮತ್ತು ಆ ಸಮಯಕ್ಕೆ ಬದ್ಧರಾಗಿರಿ. ನಿಮಗೆ ನಂಬಿಕೆ ಇರುವ ಸ್ನೇಹಿತರು ಅಥವಾ ಪೋಷಕರ ಬಳಿ ನಿಮ್ಮ ಫೋನ್ ಇರಿಸಿಕೊಳ್ಳುವಂತೆ ಕೇಳಿ. ನೀವು ಮೊಬೈಲ್ ಬಳಸಲು ನಿಗದಿ ಪಡಿಸಿಕೊಂಡ ಸಮಯ ಬಿಟ್ಟು ಉಳಿದ ಸಮಯದಲ್ಲಿ ಫೋನ್‌ ಅನ್ನು ಅವರ ಬಳಿ ನೀಡಿ. ಓದುವ ಸಮಯದಲ್ಲಿ ಮೊಬೈಲ್‌ನಿಂದ ದೂರ ಇರಲು ಇದು ಸುಲಭದ ದಾರಿ. ಮುಖ್ಯವಾಗಿ ನಾವು ಪದೇ ಪದೇ ಮೊಬೈಲ್ ಪರದೆಯನ್ನು ನೋಡಲು ಮತ್ತು ಮೊಬೈಲ್ ನಮಗೆ ನೋಡುವಂತೆ ಪ್ರಚೋದಿಸುವಂತೆ ಮಾಡಲು ಕಾರಣ ಹೊಸ ಸಂದೇಶಗಳು ಮತ್ತು ಕೆಲವು ಅಫ್ಲಿಕೇಶನ್‌ಗಳಿಂದ ಬರುವ ನೋಟಿಫಿಕೇಶನ್‌ಗಳು. ಹಾಗಾಗಿ ಓದುವ ಸಮಯದಲ್ಲಿ ಈ ನೋಟಿಫಿಕೇಶನ್‌ಗಳನ್ನು ಬಂದ್ ಮಾಡಿ ಇಡಿ.

ಸ್ಮಾರ್ಟ್‌ಫೋನ್‌ ಬಳಸದೇ ಇರುವುದರಿಂದ ಅನೇಕ ಉಪಯೋಗಗಳಿವೆ. ಅದರಲ್ಲಿ ವ್ಯಾಕುಲತೆಯಿಂದ ದೂರವಿರುವುದು ಒಂದು. ಆದರೆ ಅನೇಕ ಕಾರಣಗಳಿಗೆ ನಮಗೆ ಮೊಬೈಲ್‌ನ ಅವಶ್ಯಕತೆ ಇದೆ. ಅದಕ್ಕಾಗಿ ನೀವು ಈಗ ಬಳಸುತ್ತಿರುವ ಮೊಬೈಲ್ ಬದಲು ಸಾಧಾರಣ ಫೋನ್ ಬಳಸಿ. ಅದು ಕೇವಲ ಕರೆ ಮಾಡಲು ಹಾಗೂ ಸ್ವೀಕರಿಸಲಿ ಮಾತ್ರ ಎಂಬತಿರಲಿ. ಸಾಧ್ಯವಾದರೆ ನೀವು ಯಾವಾಗಲೂ ಬಳಸುವ ಆಟ, ಮೆಸೇಜಿಂಗ್ ಜೊತೆಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಮುಂತಾದ ಅಫ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಯಾವುದೇ ಕೆಲಸವನ್ನು ಮಾಡುವಾಗಾಗಲೀ ನಿಮ್ಮ ಕೆಲಸದ ಜಾಗದಿಂದ ನಿಮ್ಮ ಮೊಬೈಲ್‌ ಅನ್ನು ದೂರ ಇರಿಸಿಕೊಳ್ಳಿ. ಇದು ಅನೇಕರು ಮಾಡುವ ತಪ್ಪು ಹೌದು. ಮತ್ತು ಮೊಬೈಲ್‌ಗೆ ಅಂಟಿಕೊಳ್ಳಲು ಇದು ಒಂದು ಕಾರಣ. ಇನ್ಸ್ಟಾಗ್ರಾಂನಂತಹ ಆ್ಯಪ್‌ಗಳು ತುಂಬಾ ತೊಂದರೆ ಮಾಡುತ್ತವೆ. ಅವುಗಳನ್ನು ಡಿಲೀಟ್ ಮಾಡುವುದರಿಂದ ಸ್ಮಾರ್ಟ್‌ಫೋನಿಗೆ ಅಂಟಿಕೊಳ್ಳುವುದರಿಂದ ದೂರ ಇರಬಹುದು.

ಮೊಬೈಲ್ ನೋಡಲೇಬೇಕು ಎಂಬ ಪ್ರಚೋದನೆ ನಿಮಗಿದ್ದರೆ ಮಾನಸಿಕವಾಗಿ ಬಿಡುವು ಪಡೆದುಕೊಳ್ಳಿ. 10ರಿಂದ 15 ನಿಮಿಷ ಕಣ್ಣು ಮುಚ್ಚಿಕೊಂಡು ದೀರ್ಘವಾಗಿ ಉಸಿರು ತೆಗೆದುಕೊಳ್ಳಿ. ಯಾವುದೇ ಚಟದಿಂದ ಹೊರಬರಲು ಇರುವ ಉತ್ತಮ ಮಾರ್ಗವೆಂದರೆ ವ್ಯಾಯಾಮ. ಇಷ್ಟೆಲ್ಲಾ ಆದ ಮೇಲೂ ನಿಮಗೆ ಮೊಬೈಲ್‌ನಿಂದ ದೂರವಿರಲು ಸಾಧ್ಯವಾಗಿಲ್ಲ ಎಂದರೆ ಈ ಬಗ್ಗೆ ನಿಮ್ಮ ಸ್ನೇಹಿತರು ಅಥವಾ ಕುಟಂಬಸ್ಥರ ಜೊತೆ ಮಾತನಾಡುವುದು ಒಳಿತು. ಅವರಿಂದಲೂ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ವೈದ್ಯರ ಬಳಿ ತೋರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT