ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣವು ಮುಖ್ಯ

ಅಕ್ಷರ ಗಾತ್ರ

ನಮ್ಮ ಮನೆಯ ಪಕ್ಕದಲ್ಲಿ
ಹೆಣ್ಣು ನಾಯಿ ಒಂದಿತ್ತು‌
ಹೊಟ್ಟೆಯಲ್ಲಿ ಮರಿಯ ಹೊತ್ತು
ಹೆರಿಗೆಗಾಗಿ ಕಾದಿತ್ತು!
ಸೂಕ್ತ ಜಾಗಕಾಗಿ ತಾನು
ಅಲ್ಲಿ ಇಲ್ಲಿ ಅಲೆದಿತ್ತು
ನಮ್ಮ ಮನೆಯ ಹಿತ್ತಲನ್ನು
ಯೋಗ್ಯವೆಂದು ಆಯ್ದಿತ್ತು!

ಒಂದು ದಿನ ಬೆಳಗಿನಲ್ಲಿ
ನಾಲ್ಕು ಮರಿಯ ಹಾಕಿತ್ತು
ಪ್ರೀತಿಯಿಂದ ಲಲ್ಲೆಗರೆದು
ಮುದ್ದು ಮಾಡಿ ಬೆಳೆಸಿತ್ತು!
ಮೂರು ಬಿಳಿಯ ಮರಿಯು
ಒಂದು ಮಾತ್ರ ಕರಿಯು
ತಾಯ ಪ್ರೀತಿ ಮುಂದೆ
ಬಣ್ಣಗಳೆಲ್ಲ ಒಂದೆ!

ಎರಡು ವಾರ ಕಳೆದವು
ಮರಿ ಕಣ್ಣು ತೆರೆದವು
ದಿನಗಳುರುಳಿದಂತೆ ಅವು
ಬೆಳೆದು ದೊಡ್ಡದಾದವು!
ಬಿಳಿಯ ಮರಿಗಳನ್ನು ಜನರು
ನನಗೆ ತನಗೆ ಎಂದರು
ಕಪ್ಪು ಬಣ್ಣ ಇದ್ದುದಕ್ಕೆ
ಒಂದನ್ನಲ್ಲೇ ಬಿಟ್ಟರು!

ಕಪ್ಪು ಹುಡುಗನೊಬ್ಬ ಬಂದು
ನಾನು ನೀನು ಒಂದೇ ಎಂದು
ಮರಿಯ ಎತ್ತಿಕೊಂಡ
ಪ್ರೀತಿಯಿಂದ ಸಾಕಿಕೊಂಡ!
ಬಣ್ಣದಲ್ಲಿ ಏನೂ ಇಲ್ಲ
ಗುಣವು ಮುಖ್ಯ ಜಗಕೆಲ್ಲ
ಎಂಬ ಸತ್ಯ ಸಾರಿದ
ಬುದ್ಧಿ ಮಾತ ಹೇಳಿದ!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT