ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದೆ ಒಲೆಯಲ್ಲಿ ತಯಾರಿಸಿದ ಧಮ್‌ ಬಿರಿಯಾನಿ

‘ಮೈಸೂರು ದೊನ್ನೆ ಬಿರಿಯಾನಿ’ ರೆಸ್ಟೊರೆಂಟ್‌ನಲ್ಲಿ ತರಹೇವಾರಿ ಖಾದ್ಯಗಳು ಲಭ್ಯ
Last Updated 28 ಸೆಪ್ಟೆಂಬರ್ 2018, 12:16 IST
ಅಕ್ಷರ ಗಾತ್ರ

ಸೌದೆ ಒಲೆಯಲ್ಲಿ ತಯಾರಿಸಿದ ಅಡುಗೆ ಹೆಚ್ಚು ಸ್ವಾದಿಷ್ಟಕರ. ಅದು ಅಪ್ಪಟ ದೇಸಿ ರುಚಿಯನ್ನು ಕೊಡುತ್ತದೆ. ಆದರೆ, ಹಳ್ಳಿಗಳಲ್ಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಿಸುವ ಸಂಸ್ಕೃತಿ ದಿನೇದಿನೇ ಕ್ಷೀಣಿಸುತ್ತಿದೆ. ನಗರ ಪ್ರದೇಶಗಳಲ್ಲಂತೂ ಅಪರೂಪ. ಹೋಟೆಲ್‌ ಅಥವಾ ರೆಸ್ಟೊರೆಂಟ್‌ಗಳಲ್ಲಿ ಸೌದೆ ಬಳಕೆ ತೀರಾ ಕಡಿಮೆ. ಆದರೆ, ಸರಸ್ವತಿಪುರಂನ 5ನೇ ಮುಖ್ಯರಸ್ತೆಯ 3ನೇ ಅಡ್ಡರಸ್ತೆಯಲ್ಲಿರುವ ‘ಮೈಸೂರು ದೊನ್ನೆ ಬಿರಿಯಾನಿ’ ರೆಸ್ಟೊರೆಂಟ್‌ ಇದಕ್ಕೆ ಅಪವಾದವಾಗಿ ನಿಲ್ಲುತ್ತದೆ.

ಈ ರೆಸ್ಟೊರೆಂಟ್‌ ಮೈಸೂರು ಶೈಲಿಯ ಧಮ್‌ ಬಿರಿಯಾನಿಗೆ ಪ್ರಸಿದ್ಧಿ. ಇಲ್ಲಿ ಸೌದೆ ಒಲೆಯಲ್ಲಿ ಬಿರಿಯಾನಿ ಮಾಡಲಾಗುತ್ತದೆ. ಯಾವುದೇ ಬಣ್ಣಗಳು, ಟೇಸ್ಟಿಂಗ್‌ ಪುಡಿ, ಡಾಲ್ಡಾ ಸೇರಿದಂತೆ ಆರೋಗ್ಯಕ್ಕೆ ಹಾನಿಕಾರಕವಾದ ವಸ್ತುಗಳನ್ನು ಬಳಸುವುದಿಲ್ಲ. ಹೀಗಾಗಿ, ಇದು ಮನೆಯಲ್ಲಿ ಮಾಡುವ ಬಿರಿಯಾನಿಯಂತೆಯೇ ಇರುತ್ತದೆ. ಬಿರಿಯಾನಿಗೆ ಬೇಕಾದ ಎಲ್ಲ ಪದಾರ್ಥಗಳನ್ನು ಸೇರಿಸಿ, ಅದನ್ನು ಅರ್ಧ ಬೇಯಿಸಿದ ಬಳಿಕ ಪಾತ್ರೆಯ ಮೇಲೆ ಬೆಂಕಿಕೆಂಡಗಳನ್ನು ಹಾಕಿ ಧಮ್‌ ಕಟ್ಟಿಸಲಾಗುತ್ತದೆ. ಹೀಗಾಗಿ, ಮೂಲ ಮೈಸೂರು ಶೈಲಿಯ ಧಮ್‌ ಬಿರಿಯಾನಿ ಸವಿಯಬೇಕೆಂದರೆ ಈ ರೆಸ್ಟೊರೆಂಟ್‌ಗೆ ಹೋಗಬೇಕು.

ಇಲ್ಲಿ ಮಾಂಸಾಹಾರ ಹಾಗೂ ಸಸ್ಯಾಹಾರ ಸಿಗುತ್ತದೆ. ಇದು ಬಿರಿಯಾನಿಗೆ ಹೆಚ್ಚು ಪ್ರಸಿದ್ಧಿ ಪಡೆದಿದ್ದರೂ ಚಿಕನ್‌, ಮಟನ್‌, ಸೀಫಿಶ್‌ನಿಂದ ತಯಾರಿಸಿದ ಸುಮಾರು 250 ತರಹದ ವೈವಿಧ್ಯಮಯ ಖಾದ್ಯಗಳು ಸಿಗುತ್ತವೆ. 75 ವಿಧದ ಸಸ್ಯಾಹಾರ ಖಾದ್ಯಗಳೂ ಇಲ್ಲಿ ಲಭ್ಯ.

ಮಾಂಸಾಹಾರದಲ್ಲಿ ಚಿಕನ್‌ ಬಿರಿಯಾನಿ, ಮಟನ್‌ ಬಿರಿಯಾನಿ, ಮೊಟ್ಟೆ ಬಿರಿಯಾನಿ, ಕಬಾಬ್‌, ತಂದೂರಿ ಚಿಕನ್‌ ಸೇರಿದಂತೆ ತರಹೇವಾರಿ ಖಾದ್ಯಗಳನ್ನು ಸವಿಯಬಹುದು. ಸಸ್ಯಾಹಾರದಲ್ಲಿ ವೆಜ್‌ ಬಿರಿಯಾನಿ, ದಾಲ್‌ ಕಿಚಡಿ, ತರಕಾರಿಯಿಂದ ತಯಾರಿಸಿದ ಕ್ರಿಸ್ಪಿ ವೆಜ್‌, ಹರಬರ ಕಬಾಬ್‌, ಪನ್ನೀರ್‌, ಗೋಬಿ ಮಂಚೂರಿ ಸೇರಿದಂತೆ ವೈವಿಧ್ಯಮಯ ಖಾದ್ಯಗಳು ಲಭ್ಯ.

‘ಮೈಸೂರು ದೊನ್ನೆ ಬಿರಿಯಾನಿ’ಯ ಶಾಖೆಗಳನ್ನು ಶಿವರಾಂಪೇಟೆಯ ವಿನೋಬಾ ರಸ್ತೆ ಹಾಗೂ ಕಾಳಿದಾಸ ರಸ್ತೆಯಲ್ಲಿ ತೆರೆಯಲಾಗಿದೆ. ಸರಸ್ವತಿಪುರಂನ ರೆಸ್ಟೊರೆಂಟ್‌ ಹಾಗೂ ಶಿವರಾಂಪೇಟೆಯ ಶಾಖೆಯಲ್ಲಿ ಒಮ್ಮೆಲೆ ತಲಾ 80 ಮಂದಿ ಕುಳಿತು ಊಟ ಮಾಡಬಹುದು. ಕಾಳಿದಾಸ ರಸ್ತೆಯ ಶಾಖೆಯಲ್ಲಿ 20 ಮಂದಿ ಊಟ ಮಾಡಬಹುದು. ಶುಚಿತ್ವ ಹಾಗೂ ರುಚಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಮಧ್ಯಾಹ್ನ 12ರಿಂದ ರಾತ್ರಿ 11ರವರೆಗೆ ರೆಸ್ಟೊರೆಂಟ್‌ಗಳು ತೆರೆದಿರುತ್ತವೆ. ಸರಸ್ವತಿಪುರಂನಲ್ಲಿರುವ ಹೋಟೆಲ್‌ನಲ್ಲಿ ಕೇಂದ್ರೀಕೃತ ಅಡುಗೆ ಮನೆ ಇದೆ. ಇಲ್ಲಿ ಧಮ್‌ ಬಿರಿಯಾನಿಯನ್ನು ತಯಾರಿಸಿದ ಬಳಿಕ, ಅದನ್ನು ಶಾಖಾ ರೆಸ್ಟೊರೆಂಟ್‌ಗಳಿಗೆ ಪೂರೈಸಲಾಗುತ್ತದೆ. ಹೀಗಾಗಿ, ಧಮ್‌ ಬಿರಿಯಾನಿ ಮೂರು ಕಡೆಗಳಲ್ಲಿ ಒಂದೇ ರುಚಿ ಇರುತ್ತದೆ.

ಮನೆಗೆ ಡೆಲಿವರಿ: ಮೂರು ಕಿ.ಮೀ. ಒಳಗೆ ₹500 ಮೌಲ್ಯದ ಊಟವನ್ನು ಆರ್ಡರ್‌ ಮಾಡಿದರೆ ಮನೆಗೇ ಉಚಿತವಾಗಿ ತಂದು ಕೊಡುತ್ತಾರೆ. 3 ಕಿ.ಮೀ. ಮೇಲ್ಪಟ್ಟರೆ ₹30 ಸೇವಾಶುಲ್ಕ ಪಡೆಯುತ್ತಾರೆ. ಉಬರ್‌ ಈಟ್‌, ಸ್ವಿಗ್ಗಿ, ಜೊಮ್ಯಾಟೊ ಆನ್‌ಲೈನ್‌ ಸೇವೆಯೂ ಲಭ್ಯವಿದೆ.

ಬಿರಿಯಾನಿ ಪ್ರಿಯರು ಮಾಹಿತಿಗೆ 72040 04500, 81500 22227 (ಸರಸ್ವತಿಪುರಂ), 70220 47334, 73377 12666 (ವಿನೋಬಾ ರಸ್ತೆ), 81500 22225, 81500 22229 (ಕಾಳಿದಾಸ) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT