ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವಾರ್ಡ್‌ ಅಭಿವೃದ್ಧಿಗೆ ಪದವೀಧರೆಯ ಕನಸು

Last Updated 28 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

1. ನಗರಪಾಲಿಕೆ ಚುನಾವಣೆಯಲ್ಲಿ ನೀವು ಗೆಲ್ಲಲು ಸಹಾಯ ಮಾಡಿದ ಪ್ರಮುಖ ಅಂಶಗಳೇನು?

ಜಯನಗರದಲ್ಲಿನ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವಿಗೆ ಶ್ರಮಿಸಿದರು. ನನ್ನ ತಂದೆಯವರಾದ ಶಂಕರ್‌ ಅವರು ಇಲ್ಲಿ ಸಂಪಾದಿಸಿದ ಸ್ನೇಹ ನನ್ನ ಕೈಹಿಡಿಯಿತು. ಮುಖಂಡರಾದ ನಾರಾಯಣಗೌಡ, ಕೆಂಪಣ್ಣ, ಚೆನ್ನಪ್ಪ ಅವರು ತಮ್ಮ ಮನೆಮಗಳಂತೆ ನನಗೆ ಸಹಾಯ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಸಹಕರಿಸಿದರು. ನಮ್ಮೆಲ್ಲರ ಒಗ್ಗಟ್ಟು ಹಾಗೂ ಶ್ರಮ ಈ ಗೆಲುವಿಗೆ ಕಾರಣವಾಯಿತು.

ನಾನು ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದಿದ್ದೇನೆ. ಆದರೆ, ಮಹಿಳಾ ಸಹಕಾರ ಸಂಘಟನೆಗಳೊಂದಿಗೆ ಗುರುತಿಸಿಕೊಂಡ ಜನಸೇವೆ ಮಾಡಿದ ಅನುಭವವಿದೆ. ರಾಜಕೀಯ ಹೊಸತು. ಆದರೆ, ಜನಸೇವೆ ಮಾಡುವ ಆಶಯ ನನಗಿದೆ. ಹೆಣ್ಣು ರಾಜಕೀಯಕ್ಕೆ ಬರಬೇಕು, ಜನಸೇವೆ ಮಾಡಬೇಕು ಎನ್ನುವುದು ನನ್ನ ತಂದೆ ಹಾಗೂ ಪತಿಯ ಆಶಯ. ಹಾಗೆಂದು, ನಾನು ತೆರೆಯ ಹಿಂದೆ ಕೂರುವುದಿಲ್ಲ. ಸಕ್ರಿಯವಾಗಿ ಜನಪರ ಕೆಲಸ ಮಾಡುತ್ತೇನೆ.

2. ತಮ್ಮ ವಾರ್ಡಿನ ಪ್ರಮುಖ ಸಮಸ್ಯೆಗಳೇನು? ಬಗೆಹರಿಸಲು ಹೇಗೆ ಪ್ರಯತ್ನಿಸುವಿರಿ?

* ಮುಖ್ಯವಾಗಿ ನಮ್ಮಲ್ಲಿ ನೀರು ಹಾಗೂ ಒಳಚರಂಡಿ ಸಮಸ್ಯೆ ತುಂಬಾ ಇದೆ. ರಸ್ತೆಗಳು ಅಭಿವೃದ್ಧಿ ಹೊಂದಬೇಕಿವೆ. ಮತದಾರರು ನನಗೆ ಮತ ಕೊಟ್ಟಿರುವುದು ಜನಸೇವೆ ಮಾಡಲೆಂದು. ಅವರ ಸಮಸ್ಯೆಗಳನ್ನು ಗುರುತಿಸಿ ಅವನ್ನು ಬಗೆಹರಿಸುತ್ತೇನೆ. ಅಂತೆಯೇ, ಹೊಸ ಸಮಸ್ಯೆಗಳೇನೇ ಇದ್ದರೂ ನನ್ನಲ್ಲಿ ಮಾಹಿತಿ ನೀಡಿದಲ್ಲಿ ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

3. ವಾರ್ಡ್ ಪುನರ್ ಹಂಚಿಕೆಯಿಂದ ಜನ ಸಂಪರ್ಕ ಕಷ್ಟವಾಗಿದೆಯೇ?

* ವಾರ್ಡ್ ಬದಲಾಗಿದ್ದು ನಿಜ. ಆದರೆ, ನನ್ನ ವ್ಯಾಪ್ತಿಯ ಎಲ್ಲರ ಮನೆಗೆ ಹೋಗಿ ನನಗೆ ಮತ ಹಾಕುವಂತೆ ಜನರಲ್ಲಿ ಕೋರಿಕೊಂಡೆನು. ಜನರ ಪರಿಚಯ ಮಾಡಿಕೊಂಡೆ. ಇದು ನನ್ನ ಗೆಲುವಿಗೆ ಸಹಾಯ ಮಾಡಿತು. ಹಾಗಾಗಿ, ವಾರ್ಡ್ ಪುನರ್‌ ಹಂಚಿಕೆ ನನಗೆ ಸಮಸ್ಯೆಯಾಗಿ ಪರಿಣಮಿಸಲಿಲ್ಲ.

4. ಅಧಿಕಾರಿಗಳ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ ನಡೆಸುವುದು ಸುಲಭವೇ? ಇದಕ್ಕೆ ತಮ್ಮ ಕಾರ್ಯತಂತ್ರವೇನು?

* ನನ್ನ ಸ್ನೇಹಿತರು ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದಾರೆ. ಅವರ ಅನುಭವವನ್ನು ಆಲಿಸಿ ಅವರಿಂದ ಸಲಹೆ, ಮಾರ್ಗದರ್ಶನ ಪಡೆದು ಕೆಲಸ ಮಾಡುವೆ. ಅಧಿಕಾರಿಗಳಿಂದ ಕೆಲಸ ಮಾಡಿಸುವೆ. ಒಳ್ಳೆಯ ರೀತಿಯ ಸಂಪರ್ಕ ಇದ್ದಲ್ಲಿ ಕೆಲಸ ಮಾಡುವುದು ಕಷ್ಟವೇನೂ ಅಲ್ಲ. ಜನಪರವಾದ ಕೆಲಸಗಳನ್ನು ಮಾಡಿ ವಿಶ್ವಾಸ ಗಳಿಸುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT