ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ಮಯಾಮೃತ’ದ ವೈದ್ಯ ಅಮರೇಶ

Last Updated 29 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ, ಸ್ಮರಣಶಕ್ತಿ ಹೆಚ್ಚಳಕ್ಕೆ ಹಾಗೂ ಶಾರೀರಿಕ–ಮಾನಸಿಕ ವಿಕಾಸಕ್ಕಾಗಿ ಇಲ್ಲಿನ ಅಮರೇಶ್ವರ ಕ್ಲಿನಿಕ್ ವೈದ್ಯ ಅಮರೇಶ ಎಸ್.ಮಿಣಜಗಿ ಕೆಲ ವರ್ಷಗಳಿಂದ ಮಕ್ಕಳಿಗೆ ಚಿನ್ಮಯಾಮೃತ (ಸ್ವರ್ಣ ಬಿಂದು) ಔಷಧಿ ಹಾಕುತ್ತಿದ್ದಾರೆ.

ನಿಗದಿತ ದಿನದಂದು ಸ್ವರ್ಣ ಬಿಂದು ಹಾಕಿಸಲು ಪಾಲಕರು, ಪೋಷಕರು ಪಾಳಿ ಹಚ್ಚುವುದು ಇಲ್ಲಿ ಸಹಜ. ತಮ್ಮ ಚಿನ್ಮಯಾಮೃತ ಬಗ್ಗೆ ಅಮರೇಶ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಈ ಪದ್ಧತಿ ಯಾವಾಗ ಆರಂಭವಾಯಿತು ?

ಪುರಾತನ ಕಾಲದಿಂದಲೂ ರೂಢಿಯಲ್ಲಿದ್ದ ಬಿಂದು ರೂಪದ ಪ್ರಾಷಾಣ ಪದ್ಧತಿ ಎಂದು ಆಯುರ್ವೇದಿಕ ಗ್ರಂಥದಿಂದ ದೃಢಪಟ್ಟಿದೆ. ಇದೀಗ ನವೀಕರಿಸಿದ ರೂಪದಲ್ಲಿ ಹೊರಹೊಮ್ಮಿದೆ.

* ಯಾರಿಗೆ, ಯಾವಾಗ ಹಾಕುತ್ತೀರಿ ?

ಹುಟ್ಟಿದ ಮಗುವಿನಿಂದ 15 ವರ್ಷದ ಒಳಗಿನ ಮಕ್ಕಳಿಗೆ ಈ ಔಷಧಿಯನ್ನು, ಪ್ರತಿ ತಿಂಗಳ ಪುಷ್ಯ ನಕ್ಷತ್ರ ದಿನದಂದು ಹಾಕಲಾಗುತ್ತಿದೆ.

* ಎಷ್ಟು ಮಕ್ಕಳು ಇದೀಗ ಔಷಧಿ ಹಾಕಿಸಿಕೊಳ್ಳುತ್ತಿದ್ದಾರೆ ?

ಆರಂಭದಲ್ಲಿ 300ಕ್ಕೂ ಹೆಚ್ಚು ಪಾಲಕರು ತಮ್ಮ ಮಕ್ಕಳಿಗೆ ಈ ಔಷಧಿ ಹಾಕಿಸುತ್ತಿದ್ದರು. ಸದ್ಯ 200ಕ್ಕೂ ಹೆಚ್ಚು ಮಕ್ಕಳಿಗೆ ಹಾಕಲಾಗುತ್ತಿದೆ.

* ಪಾಲಕರ ಪ್ರತಿಕ್ರಿಯೆ ಹೇಗಿದೆ ?

ಈ ಔಷಧಿ ಹಾಕಿಸುತ್ತಿರುವುದರಿಂದ ನಮ್ಮ ಮಕ್ಕಳು ಅಧ್ಯಯನ ಸೇರಿದಂತೆ, ವಿವಿಧ ಕೆಲಸಗಳಲ್ಲಿ ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದರೆ ಎಂದು ಅನೇಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

* ನಿಮ್ಮ ವೈದ್ಯಕೀಯ ವೃತ್ತಿ ಬಗ್ಗೆ ತಿಳಿಸಿ ?

ಐದು ವರ್ಷದಿಂದ ಸೇವೆ ಸಲ್ಲಿಸುತ್ತಿರುವೆ. ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತೇನೆ. ದಿನದ 24 ಗಂಟೆಯೂ ಸೇವೆ ಒದಗಿಸುವೆ. ತಡರಾತ್ರಿ ದೂರವಾಣಿ ಕರೆ ಬಂದರೆ ರೋಗಿಯ ಮನೆಗೆ ತೆರಳಿ ಚಿಕಿತ್ಸೆ ಜತೆಗೆ, ಉತ್ತಮ ಸಲಹೆ ನೀಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT