ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಅಭಿವೃದ್ಧಿಗೆ ಆದ್ಯತೆ

Last Updated 4 ಜೂನ್ 2018, 12:13 IST
ಅಕ್ಷರ ಗಾತ್ರ

ಕೆಲವೊಂದು ವರದಿ ಗಮನಿಸಿದ್ದೀನೆ. ನೂತನವಾಗಿ ಆಯ್ಕೆಯಾದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಮೊದಲು ಮಾಡಬೇಕಾದ ಕೆಲಸದ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿರುವುದು ಶ್ಲಾಘನೀಯ. ಪತ್ರಿಕೆಯ ವರದಿ ನಮ್ಮ ಆಡಳಿತಕ್ಕೂ ದಿಕ್ಸೂಚಿಯಾಗಿದೆ. ಇಂತಹ ಸಮಾಜಮುಖಿ ವರದಿಗಳು ಇನ್ನೂ ಹೆಚ್ಚು ಪ್ರಕಟವಾಗಲಿ ಎಂಬುದು ನನ್ನ ಆಶಯ.

ಖಂಡಿತಾ ಉಳಿಸಿಕೊಳ್ಳುತ್ತೇನೆ. ತಾಲ್ಲೂಕಿನ ಮತದಾರರು ಹಣ ಬಲವನ್ನು ಧಿಕ್ಕರಿಸಿ ನಿರೀಕ್ಷೆಗಿಂತ ಅಧಿಕ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ಜನರ ಅಭಿಪ್ರಾಯದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನಸಾಮಾನ್ಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುವುದಿಲ್ಲ. ಧರ್ಮ, ಜಾತಿ, ಪಕ್ಷಭೇದ ಮಾಡದೇ ಎಲ್ಲ ಜನರಿಗೂ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಾರದರ್ಶಕವಾಗಿ ಒದಗಿಸುತ್ತೇನೆ.

ಜನರ ನಿರೀಕ್ಷೆಗಳು ಹಂತ ಹಂತವಾಗಿ ಈಡೇರುತ್ತವೆ. ಶಾಸಕನಾದ ತಕ್ಷಣ ಪಟ್ಟಣದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸ್ವಂತ ಹಣದಲ್ಲಿ 9 ಕೊಳವೆ ಬಾವಿ ಕೊರೆಸಿದ್ದೇನೆ. ಅದರಲ್ಲಿ 6 ಬೋರ್‌ವೆಲ್‌ನಲ್ಲಿ 3 ಇಂಚಿಗೂ ಅಧಿಕ ನೀರು ಲಭ್ಯವಾಗಿದೆ. ಅದೃಷ್ಟವಶಾತ್‌ ನಾನು ಶಾಸಕ ಆದಾಗಿನಿಂದ ಉತ್ತಮವಾಗಿ ಮಳೆ ಬರುತ್ತಿದೆ. ಇದರಿಂದ ಜನರು ಹಾಗೂ ಜಾನುವಾರು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪರಿಹಾರ ಸಿಕ್ಕಿದೆ. ನೀರಿನ ಸಮಸ್ಯೆ ರಸ್ತೆ, ವಿದ್ಯುತ್‌, ಚರಂಡಿ ನಿರ್ಮಾಣ ಸೇರಿದಂತೆ ಇನ್ನಿತರ ಮೌಲಸೌಕರ್ಯಗಳನ್ನು ಕ್ಷೇತ್ರದ ಜನರಿಗೆ ಒದಗಿಸಲು ಹಗಲಿರುಳು ಶ್ರಮಿಸುತ್ತೇನೆ.

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ನಮ್ಮ ಮುಂದಿರುವ ದೊಡ್ಡ ಸವಾಲು. ಸ್ಥಗಿತವಾಗಿರುವ ಈ ಯೋಜನೆಯ ಕೆಲಸ ಮುಂದುವರಿಸಲು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಹಾಗೆಯೇ ಕಾಮಗಾರಿ ಆರಂಭಿಸುವ ಮೊದಲು ಈ ನೀರಾವರಿ ಯೋಜನೆ ಜಾರಿಗೆ ಜಮೀನು ನೀಡಿರುವ ರೈತರಿಗೆ ಪರಿಹಾರ ಧನವನ್ನು ಹೆಚ್ಚಿಸಬೇಕು. ಹಾಗೆಯೇ ದುಗ್ಗಾವರ, ಗೂಳಿಹಟ್ಟಿ ಸೇರಿ ತಾಲ್ಲೂಕಿನ 50ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಕ್ರಿಯಾಯೋಜನೆ ತಯಾರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು.

ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಹೇಮಾವತಿ ನಾಲೆ ನೀರು ಹರಿಸುವುದು. ಮಾಡದಕೆರೆ ಹೋಬಳಿ–ಮತ್ತೋಡು–ಶ್ರೀರಾಂಪುರ ಹೋಬಳಿಗೆ ನೇರ ಸಾರಿಗೆ ಸಂಪರ್ಕಕ್ಕೆ ವಾಣಿವಿಲಾಸ ಜಲಾಶಯದ ಹಿನ್ನೀರಿನಲ್ಲಿ (ಬೇವಿನಹಳ್ಳಿ ಬಳಿ) ಸೇತುವೆ ಅಥವಾ ಬ್ಯಾರೇಜ್‌ ನಿರ್ಮಿಸವ ಚಿಂತನೆ ಇದೆ.

ಮರಳು ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮರಳು ದಂಧೆ ನೆಪದಲ್ಲಿ ಹಿಂದಿನ ಸರ್ಕಾರ ಕೆಲ್ಲೋಡು ಬಳಿ ವೇದಾವತಿ ನದಿಗೆ ಅಡ್ಡಲಾಗಿ ಸ್ಥಾಪಿಸಲು ಉದ್ದೇಶಿಸಿದ್ದ ಸೇತುವೆ ನಿರ್ಮಾಣದ ಬಗ್ಗೆ ಅಧಿಕಾರಿಗಳ ಸಭೆ ಕರೆದು ತೀರ್ಮಾನಿಸಲಾಗುವುದು. ಸ್ಥಳೀಯವಾಗಿ ಉದ್ಯೋಗಾವಕಾಶಗಳ ಸೃಷ್ಟಿಗೆ ಜವಳಿ ಉದ್ಯಮ ಅಭಿವೃದ್ಧಿಪಡಿಸಲಾಗುವುದು. ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರುತ್ತೇನೆ.

ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT