ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನೆ ಬಳಿ ಹಣದ ಕೊರತೆ: ಕೇವಲ 2.5 ಲಕ್ಷ ರೈಫಲ್‌ ಖರೀದಿಗೆ ಸಿದ್ಧತೆ

Last Updated 4 ಜೂನ್ 2018, 14:45 IST
ಅಕ್ಷರ ಗಾತ್ರ

**

ನವದೆಹಲಿ: ರಕ್ಷಣೆಗೆ ಮೀಸಲಿರಿಸಿದ್ದ ಹಣದ ಕೊರತೆಯಿಂದಾಗಿ ಅಗತ್ಯವಿರುವುದರಲ್ಲಿ ಮೂರನೇ ಒಂದು ಭಾಗದಷ್ಟು(2.5 ಲಕ್ಷ) ರೈಫಲ್‌ಗಳನ್ನು ಮಾತ್ರ ಖರೀದಿಸಲು ಭಾರತೀಯ ಸೇನೆ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸದ್ಯ 13 ಲಕ್ಷ ಸೈನಿಕರನ್ನು ಹೊಂದಿರುವ ಸೇನೆಗೆ 8 ಲಕ್ಷ ಅತ್ಯಾಧುನಿಕ ರೈಫಲ್‌ಗಳ ಅಗತ್ಯವಿದೆ. ಆದರೆ ಇಷ್ಟು ಪ್ರಮಾಣದ ರೈಫಲ್‌ಗಳನ್ನು ಖರೀದಿಸಲು ₹ 16.76 ಸಾವಿರ ಕೋಟಿ ವೆಚ್ಚವಾಗಲಿದೆ.

ಕಾಶ್ಮೀರ ಹಾಗೂ ಈಶಾನ್ಯ ರಾಜ್ಯದ ಗಡಿ ಪ್ರದೇಶಗಳಲ್ಲಿ ಯೋಧರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಇದಕ್ಕಾಗಿ ಸೇನೆಯನ್ನು ಬಲ ಪಡಿಸಲು ಮೋದಿ ಸರ್ಕಾರ ₹ 16 ಲಕ್ಷ ಕೋಟಿ ಮೀಸಲಿರಿಸಿದೆ.

ಇದಿರಂದಾಗಿ ವಿದೇಶಿ ಶಸ್ತ್ರಾಸ್ತ್ರ ಖರೀದಿ ಯೋಜನೆಗಳನ್ನೂ ಹಾಕಿಕೊಳ್ಳಲಾಗಿದೆ. ಆದರೆ, ಈ ವಿಚಾರದಲ್ಲಿ ಅಧಿಕಾರಿಗಳು ಶೀಘ್ರ ನಿರ್ಧಾರ ಕೈಗೊಳ್ಳದಿರುವುದರಿಂದ ರೈಫಲ್‌ ಖರೀದಿಗೆ ವಿಳಂಬವಾಗುತ್ತಿದೆ. ಜೊತೆಗೆ ಮೋದಿ ಅವರ ಸ್ವದೇಶಿ ಮಂತ್ರ ‘ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ಸ್ಥಳೀಯವಾಗಿಯೇ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಮೂಲಕ ಸೇನೆಗೆ ಆಧುನೀಕರಣ ನೀಡುವ ವಿಚಾರದಲ್ಲಿ ಗೊಂದಲಗಳು ಉಂಟಾಗಿವೆ.

ಈ ತಿಂಗಳ(ಜೂನ್‌) ಅಂತ್ಯದಲ್ಲಿ ಸೇನಾಧಿಕಾರಗಳು ರೈಫಲ್‌ ತಯಾರಿಸುವ ವಿದೇಶಿ ಕಂಪೆನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಅಗತ್ಯವಿರುವ ಇನ್ನುಳಿದ 4 ಲಕ್ಷ ಶಸ್ತ್ರಾಸ್ತ್ರಗಳ ಜಾಗದಲ್ಲಿ ಕಲಾಷ್ನಿಕೋವ್‌ ಹಾಗೂ ದೇಶದ ಇನ್ಸಾಸ್‌ ರೈಫಲ್‌ಗಳನ್ನೇ ಬಳಸಿಕೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT